LSG vs DC Playing XI IPL 2022: ಡೆಲ್ಲಿ ಸೇರಿದ ವಾರ್ನರ್! ಉಭಯ ತಂಡಗಳ್ಳಲ್ಲಾಗುವ ಬದಲಾವಣೆಗಳಿವು
LSG vs DC Playing XI IPL 2022: ಲಕ್ನೋ ಸೂಪರ್ ಜೈಂಟ್ಸ್ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಏಳನೇ ಸ್ಥಾನದಲ್ಲಿದೆ.
ಐಪಿಎಲ್ (IPL)ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುರುವಾರ ರಿಷಬ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಸತತ ಎರಡು ಗೆಲುವಿನ ಬಳಿಕ ಲಖನೌ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧದ ಸೋಲಿನ ನಂತರ, ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಮೊದಲು ಹಾಲಿ ಚಾಂಪಿಯನ್ ಚೆನ್ನೈ, ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಆದರೆ ಇದಕ್ಕೆ ತದ್ವಿರುದ್ದವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು.
ಲಕ್ನೋ ಸೂಪರ್ ಜೈಂಟ್ಸ್ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಏಳನೇ ಸ್ಥಾನದಲ್ಲಿದೆ. ಈ ಹಿಂದೆಯೂ ನಾಯಕರಾಗಿ ರಾಹುಲ್ ಮತ್ತು ರಿಷಬ್ ಪಂತ್ ಮುಖಾಮುಖಿಯಾಗಿದ್ದಾರೆ. ಆಗ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಆದರೆ, ಈಗ ಅವರು ಲಕ್ನೋ ತಂಡದ ನಾಯಕರಾಗಿದ್ದು, ಅವರ ತಂಡ ಸುಗಮ ಲಯದಲ್ಲಿದೆ.
ಮಾರ್ಕಸ್ ಸ್ಟೊಯಿನಿಸ್ ಅಲಭ್ಯ ಎರಡೂ ತಂಡಗಳು ಮುಖಾಮುಖಿಯಲ್ಲಿ ಆಡುವ XI ನಲ್ಲಿ ಬದಲಾವಣೆಗಳನ್ನು ಕಾಣಬಹುದು. ಮಾರ್ಕಸ್ ಸ್ಟೊಯಿನಿಸ್ ಹೊರತುಪಡಿಸಿ, ಎಲ್ಲಾ ವಿದೇಶಿ ಆಟಗಾರರು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ. ಸ್ಟೊಯಿನಿಸ್ ಪಾಕಿಸ್ತಾನ ಪ್ರವಾಸವನ್ನು ಮುಗಿಸಿದ ಬಳಿಕ ತಂಡವನ್ನು ಸೇರಿಕೊಳ್ಳಬಹುದು. ಆದರೆ ಕ್ವಾರಂಟೈನ್‌ನಲ್ಲಿರುವ ಕಾರಣ, ಅವರು ಆಡುವ XI ಗೆ ಲಭ್ಯವಿರುವುದಿಲ್ಲ. ಮಾರ್ಕಸ್ ಸ್ಟೊಯಿನಿಸ್ ತಂಡವನ್ನು ಸೇರುವ ಮೊದಲು, ಕ್ವಿಂಟನ್ ಡಿ ಕಾಕ್ ಮತ್ತು ಎವಿನ್ ಲೆವಿಸ್ ಫಾರ್ಮ್ಗೆ ಮರಳದಿದ್ದರೆ, ಸ್ಟೊಯಿನಿಸ್ ಬಂದಾಗ ಈ ಇಬ್ಬರಲ್ಲಿ ಒಬ್ಬರು ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.
ದೆಹಲಿ ಸೇರಿದ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶುಭ ಸುದ್ದಿ ಏನೆಂದರೆ, ಈಗ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಪಂದ್ಯಕ್ಕೆ ಲಭ್ಯವಿರುತ್ತಾರೆ. ಜೊತೆಗೆ ಅವರು ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ವಾರ್ನರ್ ತಂಡಕ್ಕೆ ಮರಳಿದರೆ, ಅವರು ಆರಂಭಿಕರಾಗಿ ಕಣಕ್ಕಿಳಿಯುವುದಂತೂ ಖಚಿತ. ಹೀಗಿರುವಾಗ ಮೂವರು ವಿದೇಶಿ ಆಟಗಾರರೊಂದಿಗೆ ಡೆಲ್ಲಿ ಕಣಕ್ಕಿಳಿದರೆ ಮೂರನೇ ಸ್ಥಾನದಲ್ಲಿ ಟಿಮ್ ಸೀಫರ್ಟ್ ಮತ್ತು ಕೆಎಸ್ ಭರತ್ ಆಡಲಿದ್ದಾರೆ. ಎನ್ರಿಚ್ ನಾರ್ಕಿಯಾ ಅವರ ಫಿಟ್ನೆಸ್ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿಲ್ಲ, ಆದರೂ ಅವರು ಫಿಟ್ ಆಗಿದ್ದರೆ ತಂಡದಲ್ಲಿ ಆಡುವುದಂತೂ ಖಚಿತ. ಆದರೆ, ಬೌಲಿಂಗ್‌ನಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸಲಾಗಿಲ್ಲ.
ಲಕ್ನೋ ಸಂಭಾವ್ಯ ಪ್ಲೇಯಿಂಗ್ XI- ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಇವಾನ್ ಲೂಯಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್
ದೆಹಲಿಯ ಸಂಭಾವ್ಯ ಪ್ಲೇಯಿಂಗ್ XI – ಪೃಥ್ವಿ ಶಾ, ಡೇವಿಡ್ ವಾರ್ನರ್, ಟಿಮ್ ಸೀಫರ್ಟ್, ಶ್ರೀಕರ್ ಭರತ್, ರಿಷಭ್ ಪಂತ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಯಾದವ್, ಮುಸ್ತಾಫಿಜುರ್ ರೆಹಮಾನ್
ಇದನ್ನೂ ಓದಿ:Ayush Badoni IPL 2022: ಅಂದು ಜೀರೋ.. ಇಂದು ಹೀರೋ; ಐಪಿಎಲ್ನ ಬೇಬಿ ಎಬಿಡಿ ಆಯುಷ್ ಬದೋನಿ