
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲಿದೆ. ಕಳೆದ ಕೆಲ ತಿಂಗಳುಗಳಿಂದ ನಿಷೇಧಕ್ಕೆ ಒಳಗಾಗಿದ್ದ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಖಚಿತತೆಯೊಂದಿಗೆ ಆರ್ಸಿಬಿ ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಇದರ ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ.
ಇಲ್ಲಿ ಗುಡ್ ನ್ಯೂಸ್ ಏನೆಂದರೆ… ಈ ಬಾರಿಯ ಐಪಿಎಲ್ನ ಪ್ರಮುಖ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಖಚಿತಪಡಿಸಿದ್ದಾರೆ. ಅದರಂತೆ ಐಪಿಎಲ್ 2026ರ ಮೂರು ಪ್ರಮುಖ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಆ ಪಂದ್ಯಗಳಾವುವು ಎಂದರೆ…
ಆರ್ಸಿಬಿ ತಂಡದ 5 ಪಂದ್ಯಗಳೊಂದಿಗೆ ಈ ಬಾರಿ ಹೆಚ್ಚುವರಿ 2 ಮ್ಯಾಚ್ಗಳೂ ಕೂಡ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಆರ್ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಇನ್ನು ಬ್ಯಾಡ್ ನ್ಯೂಸ್ ಯಾವುದು ಎಂದರೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ 2 ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಲೀಗ್ ಹಂತದ 7 ಪಂದ್ಯಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಮ್ಯಾಚ್ಗಳನ್ನು ಮಾತ್ರ ಆಡಲಿದೆ.
ಇನ್ನುಳಿದ ಎರಡು ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.
ಇದನ್ನೂ ಓದಿ: RCB ತಂಡದ 2 ಪಂದ್ಯಗಳನ್ನು ಶಿಫ್ಟ್ ಮಾಡಲು ಇದುವೇ ಕಾರಣ..!
ಇದಾಗ್ಯೂ ಪ್ಲೇಆಫ್ ಪಂದ್ಯ ಹಾಗೂ ಫೈನಲ್ ಪಂದ್ಯ ಬೆಂಗಳೂರಿನಲ್ಲೇ ಜರುಗುತ್ತಿರುವುದರಿಂದ ಆರ್ಸಿಬಿ ಅಭಿಮಾನಿಗಳಿಗೆ ಒಟ್ಟು 7 ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.