ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದರೆ, ಇತ್ತ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನೂ ಎರಡು ತಿಂಗಳಿದ್ದು, ಅದಕ್ಕೂ ಮುನ್ನವೇ ಧೋನಿ ಟೂರ್ನಿಗಾಗಿ ತಯಾರಿಗಳನ್ನು ಆರಂಭಿಸಿರುವುದು ವಿಶೇಷ.
ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ ಸೀಸನ್ಗಾಗಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಐಪಿಎಲ್ 2025 ರಲ್ಲೂ ಧೋನಿ ಕಣಕ್ಕಿಳಿಯುವುದು ಖಚಿತವಾದಂತಾಗಿದೆ.
THALA DHONI FOR IPL 2025 💛
– Dhoni has started the practice ahead of the IPL 2025. pic.twitter.com/IJeq4EyIA9
— Johns. (@CricCrazyJohns) January 20, 2025
ಐಪಿಎಲ್ 2025 ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಟೂರ್ನಿ ಎನ್ನಲಾಗುತ್ತಿದೆ. 43 ವರ್ಷದ ಎಂಎಸ್ಡಿ ಕಳೆದ ಸೀಸನ್ನಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೇರಲು ವಿಫಲವಾದ ಕಾರಣ ಧೋನಿ ನಿವೃತ್ತಿ ಘೋಷಿಸಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು.
ಇದೀಗ ಮತ್ತೊಮ್ಮೆ ಧೋನಿಯ ನಿವೃತ್ತಿ ಸುದ್ದಿಗಳು ಮುನ್ನಲೆಗೆ ಬಂದಿದೆ. ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 6ನೇ ಟ್ರೋಫಿ ಗೆದ್ದುಕೊಡುವ ಮೂಲಕ ಧೋನಿ ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಧೋನಿಯ ಪಾಲಿಗೆ ಕೊನೆಯ ಟೂರ್ನಿಯಾದರೂ ಅಚ್ಚರಿಪಡಬೇಕಿಲ್ಲ.
ಧೋನಿ ಐಪಿಎಲ್ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೆ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2010, 2011, 2018, 2021, 2023 ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈವರೆಗೆ 264 ಐಪಿಎಲ್ ಪಂದ್ಯಗಳನ್ನಾಡಿರುವ ಧೋನಿ 229 ಇನ್ನಿಂಗ್ಸ್ಗಳಲ್ಲಿ 24 ಅರ್ಧ ಶತಕಗಳೊಂದಿಗೆ 5243 ರನ್ ಗಳಿಸಿದ್ದಾರೆ.
ಇದನ್ನೂ ಓದಿ: Champions Trophy 2025: ಟೀಮ್ ಇಂಡಿಯಾದಲ್ಲಿ 6 ಹಳೆ ಹುಲಿಗಳು
ಐಪಿಎಲ್ ಸೀಸನ್-18 ಮಾರ್ಚ್ 21 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯವು ಮೇ 25 ರಂದು ನಡೆಯಲಿದೆ. ಇನ್ನು ಈ ಬಾರಿಯ ಟೂರ್ನಿಯ ಮೊದಲ ಮತ್ತು ಕೊನೆಯ ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಆಯೋಜಿಸಲು ಐಪಿಎಲ್ ಗರ್ವನರ್ ಕೌನ್ಸಿಲ್ ಚರ್ಚಿಸಿದೆ. ಹೀಗಾಗಿ ಫೈನಲ್ ಮ್ಯಾಚ್ಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಆತಿಥ್ಯವಹಿಸುವ ಸಾಧ್ಯತೆ ಹೆಚ್ಚು.
Published On - 2:04 pm, Mon, 20 January 25