IPL 2022: ಮುಂಬೈ ಮಣಿಸಿದ ಖುಷಿಯಲ್ಲಿದ್ದ ಡೆಲ್ಲಿಗೆ ಆಘಾತ! ತಂಡದ ಸ್ಟಾರ್​ ಬ್ಯಾಟರ್​ಗೆ ಇಂಜುರಿ

IPL 2022: ಮಿಚೆಲ್ ಮಾರ್ಷ್ ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್‌ನಲ್ಲಿ 85 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 255 ರನ್ ಗಳಿಸಿದರು. T20 ವಿಶ್ವಕಪ್‌ನಲ್ಲಿ, ಮಾರ್ಷ್ 60 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 185 ರನ್ ಗಳಿಸಿದರು.

IPL 2022: ಮುಂಬೈ ಮಣಿಸಿದ ಖುಷಿಯಲ್ಲಿದ್ದ ಡೆಲ್ಲಿಗೆ ಆಘಾತ! ತಂಡದ ಸ್ಟಾರ್​ ಬ್ಯಾಟರ್​ಗೆ ಇಂಜುರಿ
ಡೆಲ್ಲಿ ತಂಡ
TV9kannada Web Team

| Edited By: pruthvi Shankar

Mar 28, 2022 | 4:55 PM

ಐಪಿಎಲ್ (IPL 2022) ನ 15 ನೇ ಋತುವಿನಲ್ಲಿ, ದೆಹಲಿ ಕ್ಯಾಪಿಟಲ್ಸ್ (Delhi Capitals) ತಮ್ಮ ಅಭಿಯಾನವನ್ನು ಅದ್ಭುತ ರೀತಿಯಲ್ಲಿ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ರೋಚಕ ರೀತಿಯಲ್ಲಿ ಸೋಲಿಸಿ ಕಪ್ ಗೆಲ್ಲುವ ಫೆವರೆಟ್ ತಂಡವಾಗಿ ಹೊರಹೊಮ್ಮಿದೆ. ಮುಂಬೈ ನೀಡಿದ 178 ರನ್‌ಗಳ ಗುರಿಯನ್ನು ಡೆಲ್ಲಿ 18.2 ಓವರ್‌ಗಳಲ್ಲಿ ಸಾಧಿಸಿತು. ಆದರೆ, ಈ ಗೆಲುವಿನ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆಟ್ಟ ಸುದ್ದಿಯೊಂದು ಎದುರಾಗಿದೆ. ಆ ಕೆಟ್ಟ ಸುದ್ದಿ ಏನೆಂದರೆ, ಡೆಲ್ಲಿ ಕ್ಯಾಪಿಟಲ್ಸ್​ನ ಸ್ಟಾರ್ ಆಟಗಾರ ಗಾಯಗೊಂಡಿದ್ದಾರೆ. ಸೊಂಟದ ಗಾಯದಿಂದ ಬಳಲುತ್ತಿರುವ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಬಗ್ಗೆ ಮಾತನಾಡಲಾಗುತ್ತಿದ್ದು, ಪಾಕಿಸ್ತಾನ ವಿರುದ್ಧದ ODI ಮತ್ತು T20 ಸರಣಿಗೆ ಅವರು ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಮಿಚೆಲ್ ಮಾರ್ಷ್ ಗಾಯಗೊಂಡಿರುವ ಬಗ್ಗೆ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ ಮಾಹಿತಿ ನೀಡಿದ್ದಾರೆ.

‘ಮಿಚೆಲ್ ಮಾರ್ಷ್‌ಗೆ ಇಂಜುರಿಯಾಗಿದ್ದು ಅವರು ಪಾಕಿಸ್ತಾನದ ವಿರುದ್ಧ ODI ಮತ್ತು T20 ಸರಣಿಗಳನ್ನು ಆಡುವುದು ಅನುಮಾನವಾಗಿದೆ ಎಂದು ಆರೋನ್ ಫಿಂಚ್ ಹೇಳಿದ್ದಾರೆ. ಮಿಚೆಲ್ ಮಾರ್ಷ್ ಅವರ ಈ ಗಾಯವು ಆಸ್ಟ್ರೇಲಿಯಾಕ್ಕೆ ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಹಿನ್ನಡೆಯಾಗಿದೆ ಏಕೆಂದರೆ ಈ ಆಟಗಾರ ಈ ಫ್ರಾಂಚೈಸಿಯ ಅತ್ಯಂತ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.

6.50 ಕೋಟಿ ರೂಪಾಯಿಗೆ ಖರೀದಿಸಿದೆ ಮಿಚೆಲ್ ಮಾರ್ಷ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 6.50 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಆಟಗಾರನ ಅಮೋಘ ಫಾರ್ಮ್ ನೋಡಿದ ಡೆಲ್ಲಿ ಆತನಿಗೆ ಬೆಟ್ ಕಟ್ಟಿತ್ತು. ಆದರೆ ಇದೀಗ ಮಾರ್ಷ್ ಗಾಯಗೊಂಡಿರುವುದು ಡೆಲ್ಲಿಗೆ ಟೆನ್ಶನ್ ನೀಡಿದೆ. ಮಿಚೆಲ್ ಮಾರ್ಷ್ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಅವರು ಅನುಭವಿಸುತ್ತಿರುವ ಇಂಜುರಿಯಿಂದ ಚೇತರಿಸಿಕೊಳ್ಳಲು ಕನಿಷ್ಠ 2 ರಿಂದ 3 ವಾರಗಳನ್ನು ತೆಗೆದುಕೊಳ್ಳುತ್ತದೆ. ಇದು ಸಂಭವಿಸಿದಲ್ಲಿ, ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಅರ್ಧಕ್ಕಿಂತ ಹೆಚ್ಚು ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.

ಮಿಚೆಲ್ ಮಾರ್ಷ್ರ್​ಗೆ ಇಂಜುರಿ ಎಂಬುದು ಇದೇ ಮೊದಲಲ್ಲ. 2017 ರಲ್ಲಿ, ಈ ಆಟಗಾರ ಇಂಜುರಿಯಿಂದಾಗಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದಿಂದ ಹೊರಗುಳಿದಿದ್ದರು. ಇದರ ನಂತರ, ಮುಂದಿನ ನಾಲ್ಕು ವರ್ಷಗಳಲ್ಲಿ, ಈ ಆಟಗಾರನ ಭುಜ ಮತ್ತು ಪಾದದ ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. 2020ರಲ್ಲಿ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಮಾರ್ಷ್‌ ಪಂದ್ಯದಲ್ಲಿ ಗಾಯಗೊಂಡಿದ್ದರು. ಆ ಬಳಿಕ ಅವರು ಐಪಿಎಲ್‌ನಿಂದ ಹೊರಗುಳಿದಿದ್ದರು. ಈಗ ಮಿಚೆಲ್ ಮಾರ್ಷ್ ಮತ್ತೊಮ್ಮೆ ಗಾಯಗೊಂಡಿದ್ದಾರೆ.

ಮಿಚೆಲ್ ಮಾರ್ಷ್ ಫಾರ್ಮ್ ಅದ್ಭುತವಾಗಿದೆ ಮಿಚೆಲ್ ಮಾರ್ಷ್ ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್‌ನಲ್ಲಿ 85 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 255 ರನ್ ಗಳಿಸಿದರು. T20 ವಿಶ್ವಕಪ್‌ನಲ್ಲಿ, ಮಾರ್ಷ್ 60 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 185 ರನ್ ಗಳಿಸಿದರು. ಎರಡೂ ಪಂದ್ಯಾವಳಿಗಳಲ್ಲಿ, ಈ ಆಟಗಾರನು ತನ್ನ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದೇ ಕಾರಣಕ್ಕೆ ಈ ಆಟಗಾರನ ಮೇಲೆ ಡೆಲ್ಲಿ ಭರ್ಜರಿ ಬಾಜಿ ಕಟ್ಟಿತ್ತು.

ಇದನ್ನೂ ಓದಿ:IPL Commentators Earning: ಐಪಿಎಲ್​ನಲ್ಲಿ ಆಟಗಾರರಿಗಷ್ಟೇ ಅಲ್ಲ, ಕಾಮೆಂಟೇಟರ್​ಗಳಿಗೂ ಕೋಟಿ ಕೋಟಿ ಸಂಬಳ..!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada