TV9 Kannada Survey: ಜಡೇಜಾ ಧೋನಿಯಂತೆ CSK ತಂಡವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯಾವೇ?

TV9 Kannada Digital Survey: 2008 ರಿಂದ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಡೇಜಾ ಇದುವರೆಗೆ ನಾಲ್ಕು ತಂಡಗಳ ಪರ ಆಡಿದ್ದಾರೆ. ಆದರೆ ತಂಡದಲ್ಲಿ ಪ್ರಮುಖ ಜವಾಬ್ದಾರಿ ಸಿಕ್ಕಿರುವುದು ಇದೇ ಮೊದಲು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ಜಡೇಜಾ ಆ ಬಳಿಕ ಗುಜರಾತ್ ಲಯನ್ಸ್ ಹಾಗೂ ಕೊಚ್ಚಿನ್ ಟಸ್ಕರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.

TV9 Kannada Survey: ಜಡೇಜಾ ಧೋನಿಯಂತೆ CSK ತಂಡವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯಾವೇ?
Dhoni-Jadeja
Follow us
TV9 Web
| Updated By: ಝಾಹಿರ್ ಯೂಸುಫ್

Updated on:Mar 28, 2022 | 3:40 PM

ಐಪಿಎಲ್ ಸೀಸನ್​​ 15 ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಬದಲಾಗಿದ್ದಾರೆ. ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಬದಲಿಗೆ ಯಂಗ್ ಅ್ಯಂಡ್ ಎನರ್ಜಿಟಿಕ್ ರವೀಂದ್ರ ಜಡೇಜಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶೇಷ ಎಂದರೆ ರವೀಂದ್ರ ಜಡೇಜಾಗೆ ಇದೇ ಮೊದಲ ಬಾರಿಗೆ ತಂಡವೊಂದರ ನಾಯಕತ್ವ ಲಭಿಸಿದೆ. ಅಂದರೆ ಜಡೇಜಾ ಯಾವುದೇ ಪ್ರಮುಖ ತಂಡವನ್ನು ಇದುವರೆಗೆ ಮುನ್ನಡೆಸಿಲ್ಲ. ಇದಾಗ್ಯೂ ಸಿಎಸ್​ಕೆ ಜಡೇಜಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿ ಅಚ್ಚರಿ ಮೂಡಿಸಿದೆ. ಅದು ಕೂಡ ಮಹೇಂದ್ರ ಸಿಂಗ್ ಧೋನಿ ಎಂಬ ಅತ್ಯಂತ ಯಶಸ್ವಿ ನಾಯಕನ ಉತ್ತರಾಧಿಕಾರಿಯಾಗಿ ಎಂಬುದು ವಿಶೇಷ. ಹೀಗಾಗಿಯೇ ಜಡೇಜಾ ಧೋನಿಯಂತೆ CSK ತಂಡವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯಾವೇ ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಗ್ಗೆ ಟಿವಿ 9 ನಡೆಸಿದ ಸಮೀಕ್ಷೆಯಲ್ಲೂ ಕುತೂಹಲಕಾರಿ ಫಲಿತಾಂಶಗಳು ಮೂಡಿಬಂದಿವೆ.

2008 ರಿಂದ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಡೇಜಾ ಇದುವರೆಗೆ ನಾಲ್ಕು ತಂಡಗಳ ಪರ ಆಡಿದ್ದಾರೆ. ಆದರೆ ತಂಡದಲ್ಲಿ ಪ್ರಮುಖ ಜವಾಬ್ದಾರಿ ಸಿಕ್ಕಿರುವುದು ಇದೇ ಮೊದಲು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ಜಡೇಜಾ ಆ ಬಳಿಕ ಗುಜರಾತ್ ಲಯನ್ಸ್ ಹಾಗೂ ಕೊಚ್ಚಿನ್ ಟಸ್ಕರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಜಡೇಜಾ ಸಿಎಸ್​ಕೆ ತಂಡಕ್ಕೆ ಬಂದಿದ್ದು 2012 ರಲ್ಲಿ. ಅದಾದ ಬಳಿಕ ಸಿಎಸ್​ಕೆ ತಂಡದ ಖಾಯಂ ಸದ್ಯರಾದರು. ಹೀಗಾಗಿಯೇ ರವೀಂದ್ರ ಜಡೇಜಾ ಅವರು ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಮಟ್ಟಿಗೆ ಮಹೇಂದ್ರ ಸಿಂಗ್ ಧೋನಿಯನ್ನು ಹೊರತುಪಡಿಸಿದರೆ ಸಿಎಸ್​ಕೆ ಅಭಿಮಾನಿಗಳು ಅತೀ ಹೆಚ್ಚು ಇಷ್ಟಪಡುವ ಆಟಗಾರನೆಂದರೆ ಅದು ಜಡೇಜಾ. ಹೀಗಾಗಿ ಸಿಎಸ್​ಕೆ ಫ್ರಾಂಚೈಸಿ ಕೂಡ ಧೋನಿಯಂತೆ ಬ್ರಾಂಡ್​ ಆಟಗಾರನನ್ನೇ ನಾಯಕನಾಗಿ ಆಯ್ಕೆ ಮಾಡಿಕೊಂಡಿದೆ.

ಏಕೆಂದರೆ ನಾಯಕನಾಗಿ ಅತ್ಯುತ್ತಮ ಅನುಭವ ಹೊಂದಿರುವ ರಾಬಿನ್ ಉತ್ತಪ್ಪ, ಮೊಯೀನ್ ಅಲಿ ಹಾಗೂ ಯುವ ನಾಯಕ ರುತುರಾಜ್ ಗಾಯಕ್ವಾಡ್ ಸಿಎಸ್​ಕೆ ತಂಡದಲ್ಲಿದ್ದಾರೆ. ಇದಾಗ್ಯೂ ಸಿಎಸ್​ಕೆ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿರುವ ಹಿಂದಿರುವ ಕಾರಣವೆಂದರೆ ಸ್ಟಾರ್ ಆಟಗಾರನೆಂಬ ಬ್ರ್ಯಾಂಡ್. ಏಕೆಂದರೆ ಈ ಸೀಸನ್​ ಮೂಲಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗೆ ವಿದಾಯ ಹೇಳುವ ಸಾಧ್ಯತೆಯಿದೆ. ಧೋನಿ ಹೊರತಾಗಿ ತಂಡದಲ್ಲಿ ಅಭಿಮಾನಿಗಳನ್ನು ಸೆಳೆಯಬಲ್ಲ ಆಟಗಾರನೆಂದರೆ ಅದು ಜಡೇಜಾ ಮಾತ್ರ. ಹೀಗಾಗಿ ಒಂದು ಸೀಸನ್​ನಲ್ಲಿ ಧೋನಿಯ ಗರಡಿಯಲ್ಲಿ ನಾಯಕತ್ವ ಮಾಡಲು ಅನುಕೂಲವಾಗುವಂತೆ ಸಿಎಸ್​ಕೆ ತಂಡವು ಹೊಸ ನಾಯಕನ ಆಯ್ಕೆ ಮಾಡಿಕೊಂಡಿದೆ.

ಹೊಸ ನಾಯಕನಾಗಿ CSK ತಂಡವನ್ನು ಜಡೇಜಾ ಎತ್ತರಕ್ಕೆ ಕೊಂಡೊಯ್ಯಲಿದ್ದಾರಾ ಎಂಬ ಟಿವಿ9 ನಡೆಸಿದ ಸಮೀಕ್ಷೆಯಲ್ಲಿ ಮಿಶ್ರ ಪ್ರಕ್ರಿಯೆಗಳು ಮೂಡಿಬಂದಿರುವುದು ವಿಶೇಷ. ಬಹುತೇಕ ಮಂದಿ ಧೋನಿ ಇರುವ ತನಕ ಜಡೇಜಾಗೆ ಯಶಸ್ವಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಜಡೇಜಾಗೆ ಹೆಚ್ಚಿನ ಜವಾಬ್ದಾರಿ ಸಿಕ್ಕಿರುವ ಕಾರಣ ಅವರು ಮತ್ತಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಲಿದ್ದಾರೆ. ಈ ಮೂಲಕ ಪಂದ್ಯ ಗೆದ್ದುಕೊಡಬಲ್ಲ ನಾಯಕನಾಗಿ ಐಪಿಎಲ್​ನಲ್ಲಿ ಮಿಂಚಲಿದ್ದಾರೆ ಎಂದಿದ್ದಾರೆ. ಹಾಗೆಯೇ ಅನೇಕರು ಧೋನಿಯ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ನೇರವಾಗಿ ತಿಳಿಸಿದ್ದಾರೆ.

ವಿಶೇಷ ಎಂದರೆ ಇಲ್ಲಿ ಜಡೇಜಾ ಧೋನಿಯಂತೆ CSK ತಂಡವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯಾವೇ ? ಎಂಬ ಪ್ರಶ್ನೆ ಬಂದ ಉತ್ತರಗಳ ಪರ್ಸೆಂಟೇಜ್ ಗಮಿಸಿದರೆ ಸಾಧ್ಯವಿಲ್ಲ ಎಂದವರೇ ಹೆಚ್ಚು. ಇದಾಗ್ಯೂ ಧೋನಿ ಗರಡಿಯಲ್ಲಿ ಜಡೇಜಾ ಒಂದೆರೆಡು ವರ್ಷ ನಾಯಕನಾಗಿ ಕಾಣಿಸಿಕೊಂಡರೆ ಒಂದಷ್ಟು ಯಶಸ್ಸು ಸಾಧಿಸಲಿದ್ದಾರೆ ಎಂದು ಕೂಡ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಧೋನಿ ಮುಂದಿನ ಸೀಸನ್ ಆಡಲಿದ್ದಾರಾ ಎಂಬುದೇ ಈಗ ಪ್ರಶ್ನೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಕ್ಯಾಪ್ಟನ್ ಆಗಿ ಯಶಸ್ವಿಯಾಗಲಿದ್ದಾರಾ ಎಂಬುದಕ್ಕೆ ಈ ಬಾರಿಯ ಐಪಿಎಲ್​ನಲ್ಲೇ ಉತ್ತರವಂತು ಸಿಗಲಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

Published On - 3:38 pm, Mon, 28 March 22

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!