ಮೋದಿ ಡ್ರೆಸ್ಸಿಂಗ್ ರೂಮ್​ಗೆ ಬಂದಾಗ ಏನೆಲ್ಲ ಆಯಿತು?: ಸಂಪೂರ್ಣವಾಗಿ ವಿವರಿಸಿದ ಮೊಹಮ್ಮದ್ ಶಮಿ

|

Updated on: Dec 14, 2023 | 11:43 AM

Mohammed Shami About Narendra Modi: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೀಗ ಆಜ್ ತಕ್‌ಗೆ ನೀಡಿದ ಸಂದರ್ಶನದಲ್ಲಿ, ಮೋದಿ ಡ್ರೆಸ್ಸಿಂಗ್ ರೂಮ್​ಗೆ ಬಂದಾಗ ಏನೆಲ್ಲ ಆಯಿತು ಎಂಬುದನ್ನು ಮೊಹಮ್ಮದ್ ಶಮಿ ಸಂಪೂರ್ಣವಾಗಿ ವಿವರಿಸಿದ್ದಾರೆ.

ಮೋದಿ ಡ್ರೆಸ್ಸಿಂಗ್ ರೂಮ್​ಗೆ ಬಂದಾಗ ಏನೆಲ್ಲ ಆಯಿತು?: ಸಂಪೂರ್ಣವಾಗಿ ವಿವರಿಸಿದ ಮೊಹಮ್ಮದ್ ಶಮಿ
Narendra Modi Team India dressing Room
Follow us on

ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ತೋರಿದರು. ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದರೂ, ಶಮಿ ಒಟ್ಟು 24 ರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ತಮ್ಮ ಅಮೋಘ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಕೂಡ ಪಡೆದರು. ಇವೆಲ್ಲದರ ಹೊರತಾಗಿಯೂ, ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.

ಭಾರತ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದರ ವಿಡಿಯೋ ವ್ಯಾಪಕವಾಗಿ ಶೇರ್ ಆಗಿತ್ತು. ಡ್ರೆಸ್ಸಿಂಗ್ ರೂಮ್​ನಲ್ಲಿ ಮೋದಿ ಅವರು ಶಮಿಯನ್ನು ಅಪ್ಪಿಕೊಂಡು ಅವರ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಿತ್ತು.

ಇದೀಗ ಆಜ್ ತಕ್‌ಗೆ ನೀಡಿದ ಸಂದರ್ಶನದಲ್ಲಿ, ಮೋದಿ ಡ್ರೆಸ್ಸಿಂಗ್ ರೂಮ್​ಗೆ ಬಂದಾಗ ಏನೆಲ್ಲ ಆಯಿತು ಎಂಬುದನ್ನು ಮೊಹಮ್ಮದ್ ಶಮಿ ಸಂಪೂರ್ಣವಾಗಿ ವಿವರಿಸಿದ್ದಾರೆ.

ಇದನ್ನೂ ಓದಿ
ನಾನು ಭಾರತೀಯ ಮುಸ್ಲಿಂ: ಪಾಕಿಸ್ತಾನ ಟ್ರೋಲಿಗರ ಮೈಚಳಿ ಬಿಡಿಸಿದ ಶಮಿ
18 ವರ್ಷಗಳ ಬಳಿಕ INDW vs ENGW ಟೆಸ್ಟ್: ಟಾಸ್ ಗೆದ್ದ ಹರ್ಮನ್​ಪ್ರೀತ್ ಪಡೆ
ಈ ಬಾರಿ ಇರಲ್ಲ ಟಾಟಾ IPL: ಶೀರ್ಷಿಕೆ ಪ್ರಾಯೋಜಕರ ಹಕ್ಕು ಹರಾಜಿಗೆ ಸಿದ್ಧತೆ
ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ: ಮಾಸ್ಟರ್ ಪ್ಲಾನ್ ರೂಪಿಸಿದ ಸೂರ್ಯ

IND vs SA: ನಿರ್ಣಾಯಕ ಪಂದ್ಯ: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ

“ನಾವು ಸೋತ ನಂತರ ಆಘಾತದಲ್ಲಿದ್ದೆವು ಮತ್ತು ಹತಾಶರಾಗಿ ಕುಳಿತಿದ್ದೇವೆ. ಕೇವಲ ಒಂದು ಪಂದ್ಯದಿಂದಾಗಿ ನಮ್ಮ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಅದು ನಮ್ಮ ಕೆಟ್ಟ ದಿನ. ನಾವು ನಿರಾಶೆಗೊಂಡಿದ್ದೆವು. ಆಗ ಅಲ್ಲಿಗೆ ದಿಢೀರ್ ಆಗಿ ಪ್ರಧಾನಿ ಮೋದಿ ಆಗಮಿಸಿದರು. ಮೋದಿಜಿ ಅಲ್ಲಿಗೆ ಬರುತ್ತಿದ್ದಾರೆ ಎಂದು ನಮಗೆ ಯಾರೂ ತಿಳಿಸಿರಲಿಲ್ಲ. ಇದ್ದಕ್ಕಿದ್ದಂತೆ ಅವರು ಡ್ರೆಸ್ಸಿಂಗ್ ರೂಮ್​ಗೆ ಬಂದರು. ನಾವು ಆಹಾರ ಸೇವಿಸುವ ಅಥವಾ ಪರಸ್ಪರ ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವರು ಬಂದಾಗ ನಮಗೆ ಅದು ದೊಡ್ಡ ಆಶ್ಚರ್ಯವಾಗಿತ್ತು,” ಎಂದು ಶಮಿ ಹೇಳಿದ್ದಾರೆ.

“ಮೋದಿ ಅವರು ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದಾಗ ನಮಗೆ ಆಘಾತವಾಯಿತು. ನಂತರ ಅವರು ಬಂದು ನಮ್ಮೆಲ್ಲರೊಡನೆ ಮಾತನಾಡಿದರು. ಆ ಬಳಿಕ ನಾವೆಲ್ಲರು ಪರಸ್ಪರ ಮಾತನಾಡಲು ಪ್ರಾರಂಭಿಸಿದೆವು. ಈ ಸೋಲಿನಿಂದ ನಾವು ಮುಂದುವರಿಯಬೇಕು ಎಂದು ಮೋದಿ ಹೇಳಿದರು. ಪ್ರಧಾನಿಯವರ ಭೇಟಿ ನಮಗೆ ಬಹಳಷ್ಟು ಸಹಾಯ ಮಾಡಿದೆ,” ಎಂಬುದು ಶಮಿ ಮಾತು.

ಸೋಲಿನ ನಂತರ ಪ್ರಧಾನಿ ಮೋದಿ ಭಾರತ ಕ್ರಿಕೆಟ್ ತಂಡಕ್ಕೆ ವಿಶೇಷ ಸಂದೇಶವನ್ನು ಕೂಡ ನೀಡಿದರು. “ಪ್ರೀತಿಯ ಟೀಮ್ ಇಂಡಿಯಾ, ವಿಶ್ವಕಪ್​ನಲ್ಲಿ ನೀವು ನೀಡಿದ ಪ್ರದರ್ಶನ ಮತ್ತು ನೀವು ತೆಗೆದುಕೊಂಡ ನಿರ್ಧಾರ ಗಮನಾರ್ಹವಾಗಿದೆ. ನೀವು ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಮೊಹಮ್ಮದ್ ಶಮಿ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 26 ರಿಂದು ಪ್ರಾರಂಭವಾಗುವ ಟೆಸ್ಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ