Mohammed Siraj: ಸಿ-ರಾಜ…ಗೆಟೌಟ್ ಅಂದವರೇ ಕಟೌಟ್ ನಿಲ್ಲಿಸಿದ್ರು

Edited By:

Updated on: Aug 21, 2021 | 2:52 PM

Mohammed Siraj's Cutout: ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

1 / 6
ಸೌತ್ ಸಿನಿರಂಗದಲ್ಲಿ ಕಟೌಟ್ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೂಪರ್ ಸ್ಟಾರ್​ಗಳ ಚಿತ್ರಗಳು ತೆರೆ ಕಾಣುತ್ತಿದ್ದಂತೆ ಎಲ್ಲೆಂದ್ರಲ್ಲಿ ದೊಡ್ಡ ದೊಡ್ಡ ಕಟೌಟ್​ಗಳು ರಾರಾಜಿಸುತ್ತವೆ. ಇತ್ತೀಚೆಗೆ ಈ ಸಂಪ್ರದಾಯ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೂ ವಿಸ್ತರಿಸಿಕೊಂಡಿದೆ. ಇದಾಗ್ಯೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಟೌಟ್ ಪ್ರೀತಿಗೆ ಪಾತ್ರವಾದ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ ಎನ್ನಬಹುದು.

ಸೌತ್ ಸಿನಿರಂಗದಲ್ಲಿ ಕಟೌಟ್ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೂಪರ್ ಸ್ಟಾರ್​ಗಳ ಚಿತ್ರಗಳು ತೆರೆ ಕಾಣುತ್ತಿದ್ದಂತೆ ಎಲ್ಲೆಂದ್ರಲ್ಲಿ ದೊಡ್ಡ ದೊಡ್ಡ ಕಟೌಟ್​ಗಳು ರಾರಾಜಿಸುತ್ತವೆ. ಇತ್ತೀಚೆಗೆ ಈ ಸಂಪ್ರದಾಯ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೂ ವಿಸ್ತರಿಸಿಕೊಂಡಿದೆ. ಇದಾಗ್ಯೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಟೌಟ್ ಪ್ರೀತಿಗೆ ಪಾತ್ರವಾದ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ ಎನ್ನಬಹುದು.

2 / 6

ಈ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ಧೋನಿ ಕಟೌಟ್ ಎಲೆ ಎತ್ತಿದ್ದವು. ಇದಾಗ್ಯೂ ಅಭಿಮಾನಿಗಳಿಂದ ಮತ್ಯಾವ ಟೀಮ್ ಇಂಡಿಯಾ ಆಟಗಾರನಿಗೂ ಇಂತಹ ಗೌರವ ದಕ್ಕಿರಲಿಲ್ಲ. ಆದರೀಗ ಹೈದರಾಬಾದ್​​ ಕುವರನಿಗೆ ಅಲ್ಲಿನ ಜನ ಕಟೌಟ್ ನಿಲ್ಲಿಸಿದ್ದಾರೆ.

3 / 6

ಹೌದು, ಲಾರ್ಡ್ಸ್​​ನಲ್ಲಿ ಇಂಗ್ಲೆಂಡ್​ ವಿರುದ್ದ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಮೈದಾನದಲ್ಲಿ ಆಂಗ್ಲರನ್ನು 151 ರನ್​ಗಳಿಂದ ಬಗ್ಗು ಬಡಿದು ಐದು ಟೆಸ್ಟ್ ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವ ವೇಗಿ ಮೊಹಮ್ಮದ್ ಸಿರಾಜ್. ಒಟ್ಟು 8 ವಿಕೆಟ್​ ಉರುಳಿಸಿ ಗೆಲುವಿಗೆ ತಮ್ಮದೆಯಾದ ಕೊಡುಗೆ ನೀಡಿದ್ದರು.

4 / 6

ಮೈದಾನದಲ್ಲಿನ ಸಿರಾಜ್ ಅವರ ಈ ಅಮೋಘ ಸಾಧನೆಯ ಬೆನ್ನಲ್ಲೇ ಇತ್ತ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಅತ್ತ ಸಿರಾಜ್ ಕೊನೆಯ ವಿಕೆಟ್ ಉರುಳಿಸಿ ಜಯ ತಂದುಕೊಡುತ್ತಿದ್ದಂತೆ ಇತ್ತ ಹೈದರಾಬಾದಿನಲ್ಲಿನ ಸಿರಾಜ್ ಅವರ ನೆರೆಹೊರೆಯವರು ತಮ್ಮ ರಸ್ತೆಯಲ್ಲಿ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ.

5 / 6

ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

6 / 6

ಅಷ್ಟೊಂದು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಸಿರಾಜ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್​ನಲ್ಲಿ ಸಿರಾಜ್ ತಮ್ಮ ಬೌಲಿಂಗ್ ಅಸ್ತ್ರದಿಂದ ಬಗ್ಗು ಬಡಿದಿದ್ದಾರೆ. ಹೀಗಾಗಿ ತಂಡದಿಂದ ಗೆಟೌಟ್ ನೀಡಬೇಕು ಎನ್ನುವವರು ಬಾಯಿ ಮುಚ್ಚಿಕೊಳ್ಳಿ ಎಂದು ತಿಳಿಸಲು ಸಿರಾಜ್ ಅವರ 'ಬಾಯ್ತುಚ್ಚು ಕಟೌಟ್' ನಿಲ್ಲಿಸಿ ಹೂಮಾಲೆ ಹಾಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us