ಮುಂಬೈ ಇಂಡಿಯನ್ಸ್ ಜೊತೆಗೆ ಮತ್ತೆರಡು ತಂಡಗಳನ್ನು ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್; ಅವುಗಳ ಹೆಸರೇನು ಗೊತ್ತಾ?

ಮುಂಬೈ ಇಂಡಿಯನ್ಸ್ ಸೇರಿದಂತೆ 6 ಐಪಿಎಲ್ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿವೆ. ಮುಂಬೈ ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ದೆಹಲಿ ಸಹ-ಮಾಲೀಕ ಜೆಎಸ್‌ಡಬ್ಲ್ಯೂ ಕೂಡ ತಂಡವನ್ನು ಖರೀದಿಸಿದೆ.

ಮುಂಬೈ ಇಂಡಿಯನ್ಸ್ ಜೊತೆಗೆ ಮತ್ತೆರಡು ತಂಡಗಳನ್ನು ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್; ಅವುಗಳ ಹೆಸರೇನು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Aug 10, 2022 | 9:24 PM

ಐಪಿಎಲ್‌ನ (IPL) ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ 2 ಹೊಸ ತಂಡಗಳನ್ನು ಖರೀದಿಸಿದೆ. ಈ ಎರಡೂ ಹೊಸ ತಂಡಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅಬ್ಬರಿಸಲು ತಯಾರಿ ನಡೆಸುತ್ತಿವೆ. ಅತಿ ಹೆಚ್ಚು 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ಮುಂಬೈ ಫ್ರಾಂಚೈಸಿಯ ಮಾಲೀಕ ರಿಲಯನ್ಸ್ ಇಂಡಸ್ಟ್ರೀಸ್, ಯುಎಇ ಮತ್ತು ದಕ್ಷಿಣ ಆಫ್ರಿಕಾದ ಟಿ20 ಲೀಗ್‌ಗಾಗಿ ಮುಂಬೈ ಎಮಿರೇಟ್ಸ್ ಮತ್ತು ಮುಂಬೈ ಕೇಪ್ ಟೌನ್ ಹೆಸರಿನ 2 ಹೊಸ ತಂಡಗಳನ್ನು ಬಿಡುಗಡೆ ಮಾಡಿದೆ.

ಉಭಯ ತಂಡಗಳ ಜೆರ್ಸಿ ಹೇಗಿರುತ್ತದೆ?

ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಎರಡೂ ತಂಡಗಳ ಹೆಸರನ್ನು ಘೋಷಿಸಿತು. ಇದರೊಂದಿಗೆ, ಎಮಿರೇಟ್ಸ್ ಮತ್ತು ಕೇಪ್ ಟೌನ್ ಎರಡೂ ತಂಡಗಳ ಜೆರ್ಸಿಗಳು ಮುಂಬೈ ಇಂಡಿಯನ್ಸ್ ಐಪಿಎಲ್​ ತಂಡಕ್ಕೆ ಹೇಗೆ ಸಾಮ್ಯತೆ ಹೊಂದಿವೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಉಭಯ ತಂಡಗಳ ಜೆರ್ಸಿ ಮುಂಬೈ ಇಂಡಿಯನ್ಸ್‌ನಂತೆಯೇ ಇರುತ್ತದೆ. ಅದೇನೆಂದರೆ, ಎರಡೂ ತಂಡಗಳ ಜೆರ್ಸಿಯಲ್ಲಿ ನೀಲಿ ಮತ್ತು ಗೋಲ್ಡನ್ ಬಣ್ಣಗಳು ಕಾಣಿಸುತ್ತವೆ. ಅಲ್ಲಿನ ನಿರ್ದಿಷ್ಟ ನಗರವನ್ನು ಗಮನದಲ್ಲಿಟ್ಟುಕೊಂಡು ಎಮಿರೇಟ್ಸ್ ಮತ್ತು ಕೇಪ್ ಟೌನ್ ತಂಡಗಳನ್ನು ಹೆಸರಿಸಲಾಗಿದೆ. ಈಗ ಈ ಫ್ರಾಂಚೈಸಿಯ ಕಣ್ಣುಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿಯೂ ಐಪಿಎಲ್ ಪ್ರದರ್ಶನ ಮತ್ತು ಪ್ರಾಬಲ್ಯವನ್ನು ಕಾಪಾಡಿಕೊಳ್ಳುವುದಾಗಿದೆ.

ಮುಂದಿನ ಕೆಲವು ವಾರಗಳಲ್ಲಿ ಹರಾಜು ಸಾಧ್ಯತೆ

ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಅಂಬಾನಿ, ಎರಡೂ ಹೊಸ ತಂಡಗಳು ಸಮಾನವಾಗಿ ಬೆಳೆಯುತ್ತವೆ ಮತ್ತು ಎಂಐನ ಜಾಗತಿಕ ಕ್ರಿಕೆಟ್ ಪರಂಪರೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಯುಎಇ ಮತ್ತು ದಕ್ಷಿಣ ಆಫ್ರಿಕಾ ಟಿ20 ಲೀಗ್ ಆರಂಭವಾಗಬಹುದು. ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ 30 ಮಾರ್ಕ್ಯೂ ಅಂತರಾಷ್ಟ್ರೀಯ ಆಟಗಾರರು ಭಾಗವಹಿಸಬಹುದು. ಈ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಲೀಗ್‌ನ ಸಂಘಟಕರು ಹೇಳಿದ್ದಾರೆ. ಈ ಲೀಗ್‌ಗಾಗಿ ಆಟಗಾರರ ಹರಾಜು ಮುಂದಿನ ಕೆಲವು ವಾರಗಳಲ್ಲಿ ನಡೆಯುವ ನಿರೀಕ್ಷೆ ಇದೆ.

6 ಐಪಿಎಲ್ ಫ್ರಾಂಚೈಸಿಗಳು ತಂಡವನ್ನು ಖರೀದಿಸಿವೆ

ಮುಂಬೈ ಇಂಡಿಯನ್ಸ್ ಸೇರಿದಂತೆ 6 ಐಪಿಎಲ್ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿವೆ. ಮುಂಬೈ ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ದೆಹಲಿ ಸಹ-ಮಾಲೀಕ ಜೆಎಸ್‌ಡಬ್ಲ್ಯೂ ಕೂಡ ತಂಡವನ್ನು ಖರೀದಿಸಿದೆ.

Published On - 9:24 pm, Wed, 10 August 22

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು