AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ತಂಡದಿಂದ ಸ್ಟಾರ್ ಆಲ್​ರೌಂಡರ್ ಔಟ್!

IND vs WI: ಸುಂದರ್ ಈಗ ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ. ಸುಂದರ್ ಅವರನ್ನು ಬೆಂಬಲಿಸಲು ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ.

IND vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ತಂಡದಿಂದ ಸ್ಟಾರ್ ಆಲ್​ರೌಂಡರ್ ಔಟ್!
ಟೀಂ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on: Feb 14, 2022 | 10:24 PM

Share

ಫೆಬ್ರವರಿ 16 ರಂದು ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ T20 ಸರಣಿಗೆ ಮುನ್ನ ಟೀಮ್ ಇಂಡಿಯಾಕ್ಕೆ (Team India) ಆತಂಕ ಎದುರಾಗಿದೆ. ಭಾರತ ತಂಡದ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ (Washington Sunda) ಅವರು ಪೂರ್ಣ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ. ವರದಿಯ ಪ್ರಕಾರ, ಸುಂದರ್ ಗಾಯಗೊಂಡಿದ್ದು ಸರಣಿಯಿಂದ ಹೊರಗುಳಿಯಲ್ಲಿದ್ದಾರೆ. ಮಾಹಿತಿಯ ಪ್ರಕಾರ, ಸುಂದರ್ ಕೋಲ್ಕತ್ತಾದಲ್ಲಿರುವ ಭಾರತೀಯ ತಂಡದಿಂದ ಬೇರ್ಪಟ್ಟಿದ್ದು ಈಗ ನೇರವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಹೋಗಲಿದ್ದಾರೆ, ಅಲ್ಲಿ ಅವರ ಗಾಯದ ಆರೈಕೆ ಮತ್ತು ಪುನರ್ವಸತಿ ಕುರಿತು ಕೆಲಸ ಮಾಡಲಾಗುತ್ತದೆ. ಸುಂದರ್ ಇತ್ತೀಚೆಗೆ ಏಕದಿನ ಸರಣಿಯಿಂದ ತಂಡಕ್ಕೆ ಮರಳಿದ್ದರು.

ಸುಂದರ್ ಅವರು ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದರಿಂದಾಗಿ ಅವರು ಸರಣಿಯಲ್ಲಿ ಆಡುವ ಸಾಧ್ಯತೆಯಿಲ್ಲ. ವಾಷಿಂಗ್ಟನ್ ಮಂಡಿರಜ್ಜು ಒತ್ತಡದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಇಂದು (ಸೋಮವಾರ 14 ಫೆಬ್ರವರಿ) ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಇನ್ನು 5 ದಿನಗಳಲ್ಲಿ 3 ಪಂದ್ಯಗಳು ನಡೆಯಲಿರುವುದರಿಂದ ಸಂಪೂರ್ಣ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರೂಪಕ್ಕೆ ಸಿಕ್ಕ ಅವಕಾಶ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಭಾರತೀಯ ಆಲ್‌ರೌಂಡರ್ ಟೀಂ ಇಂಡಿಯಾಕ್ಕೆ ಪುನರಾಗಮನ ಮಾಡಿದರು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿದ್ದ ಅವರು ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ಇದಾದ ಬಳಿಕ ಅವರಿಗೆ ಐಪಿಎಲ್ 2021 ಮತ್ತು ಟಿ20 ವಿಶ್ವಕಪ್ ಕೂಡ ಆಡಲು ಸಾಧ್ಯವಾಗಿರಲಿಲ್ಲ. ಸುಂದರ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ODI ಸರಣಿಗೆ ಆಯ್ಕೆಯಾದರು, ಆದರೆ ಹೊರಡುವ ಮೊದಲು, ಅವರಿಗೆ ಕೊರೊನಾ ಸೋಂಕು ತಗುಲಿತ್ತು.

ಚಹಾಲ್ ಮೇಲೆ ಟೀಂ ಇಂಡಿಯಾ ಭರವಸೆ

ಟೀಮ್ ಇಂಡಿಯಾ ಈಗ ಕೇವಲ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅನ್ನು T20 ಸರಣಿಗೆ ಅನುಭವಿ ಸ್ಪಿನ್ನರ್ ಆಗಿ ಹೊಂದಿದೆ. ತಂಡದಲ್ಲಿ ರವಿ ಬಿಷ್ಣೋಯ್ ಕೂಡ ಇದ್ದರೂ, ಹರ್‌ಪ್ರೀತ್ ಬ್ರಾರ್ ಕೂಡ ತಂಡದೊಂದಿಗೆ ಕೋಲ್ಕತ್ತಾ ತಲುಪಿದ್ದಾರೆ. ಹೀಗಿರುವಾಗ ಸುಂದರ್ ಜಾಗಕ್ಕೆ ಯಾರು ಬರುತ್ತಾರೆ ಎಂಬುದನ್ನು ನೋಡಬೇಕಿದೆ.

ಎನ್‌ಸಿಎಯಲ್ಲಿ ಸಮಯ ಕಳೆಯಬೇಕಾಗುತ್ತದೆ

ಸುಂದರ್ ಈಗ ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ. ಸುಂದರ್ ಅವರನ್ನು ಬೆಂಬಲಿಸಲು ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ರಾಹುಲ್ ಮತ್ತು ಅಕ್ಸರ್ ಕೂಡ T20 ಸರಣಿಯ ಭಾಗವಾಗಿದ್ದರು, ಆದರೆ ಬೇರೆ ಬೇರೆ ಕಾರಣಗಳಿಂದ ಇಬ್ಬರನ್ನೂ ಕೈಬಿಡಲಾಯಿತು. ಎರಡನೇ ODIನಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು, ಇದರಿಂದಾಗಿ ಅವರು ಮೂರನೇ ODI ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ODI ಸರಣಿಗೆ ಮುಂಚೆಯೇ ಅಕ್ಷರ್ ಪಟೇಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು.

ಇದನ್ನೂ ಓದಿ:2014 ರಿಂದ 9 ಬಾರಿ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡರೂ ಯಾರು ನನ್ನ ಖರೀದಿಸಿಲ್ಲ; ಟೀಂ ಇಂಡಿಯಾ ಆಟಗಾರ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ