AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರ್​ಸಿಬಿ ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ನಿರ್ಧರಿಸಿದ ಸ್ಟಾರ್ ವೇಗಿ

Nuwan Thushara IPL: ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಶ್ರೀಲಂಕಾದ ವೇಗಿ ನುವಾನ್ ತುಷಾರ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿ ಐಪಿಎಲ್‌ಗೆ ಸೇರಲಾಗದೆ ತೊಂದರೆ ಎದುರಿಸುತ್ತಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಆಡಲು ಫಿಟ್‌ನೆಸ್ ಪಾಸ್ ಆಗುವುದು ಕಡ್ಡಾಯ ಎಂಬ ಲಂಕಾ ಕ್ರಿಕೆಟ್ ನೀತಿಯಿಂದಾಗಿ ಅವರಿಗೆ NOC ಸಿಕ್ಕಿಲ್ಲ. ಇದೀಗ ತುಷಾರ ಐಪಿಎಲ್ ಆಡಲು ಲಂಕಾ ಕ್ರಿಕೆಟ್ ಕೇಂದ್ರ ಒಪ್ಪಂದದಿಂದ ಹೊರಬರಲು ನಿರ್ಧರಿಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

IPL 2026: ಆರ್​ಸಿಬಿ ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ನಿರ್ಧರಿಸಿದ ಸ್ಟಾರ್ ವೇಗಿ
Nuwan Thushara
ಪೃಥ್ವಿಶಂಕರ
|

Updated on:Mar 30, 2026 | 6:32 PM

Share

2026 ರ ಐಪಿಎಲ್ (IPL 2026) ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಆರ್​ಸಿಬಿಯ (RCB) ಮುಂದಿನ ಸಿಎಸ್​ಕೆ ವಿರುದ್ಧ ಏಪ್ರಿಲ್ 5 ರ ಭಾನುವಾರದಂದು ನಡೆಯಲಿದೆ. ಅಂದರೆ ಈ ಪಂದ್ಯಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದಾಗ್ಯೂ ಆರ್​ಸಿಬಿ ತಂಡವನ್ನು ಸೇರಲು ಪಣತೊಟ್ಟಿರುವ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ (Nuwan Thushara), ಲಂಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದ ಹೊರಬರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ನನ್ನನ್ನು ಕೇಂದ್ರ ಒಪ್ಪಂದದಲ್ಲಿ ಸೇರಿಸದಂತೆ ಲಂಕಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾದ ಕಾರಣದಿಂದಾಗಿ ನುವಾನ್ ತುಷಾರ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಯಾವುದೇ ಆಟಗಾರ ವಿದೇಶಿ ಲೀಗ್‌ಗಳಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಶ್ರೀಲಂಕಾ ಕ್ರಿಕೆಟ್‌ನ ನೀತಿಯಾಗಿದೆ. ಹೀಗಾಗಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿರುವ ತುಷಾರ ಐಪಿಎಲ್​ನಲ್ಲಿ ಆರ್‌ಸಿಬಿ ತಂಡವನ್ನು ಇದುವರೆಗೂ ಸೇರಲಾಗಿಲ್ಲ.

ನುವಾನ್ ತುಷಾರ ಐಪಿಎಲ್ ವೃತ್ತಿಜೀವನ

ನುವಾನ್ ತುಷಾರ ಅವರನ್ನು ಆರ್​ಸಿಬಿ 1.6 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆದಾಗ್ಯೂ, ಶ್ರೀಲಂಕಾ ಕ್ರಿಕೆಟ್ ಅವರಿಗೆ ಎನ್​ಒಸಿ ನೀಡಿಲ್ಲ. ಹೀಗಾಗಿ ಅವರು ಇದುವರೆಗೆ ತಂಡವನ್ನು ಸೇರಲಾಗಿಲ್ಲ. ಇದುವರೆಗೆ ಐಪಿಎಲ್​ನಲ್ಲಿ 8 ಪಂದ್ಯಗಳನ್ನಾಡಿರುವ ನುವಾನ್ ತುಷಾರ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2024 ರ ಐಪಿಎಲ್​ನಲ್ಲಿ ಮುಂಬೈ ಪರ ಆಡಿದ್ದ ತುಷಾರ, ಕಳೆದ ವರ್ಷ ಆರ್​ಸಿಬಿ ಪರ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಇದೀಗ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತೀರ್ಣರಾಗಿರುವ ತುಷಾರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

CSK vs RR IPL 2026 Live Score: ರಾಜಸ್ಥಾನ್- ಸಿಎಸ್​ಕೆ ಮುಖಾಮುಖಿ

ಟಿ20 ಸ್ಪೆಷಲಿಸ್ಟ್ ಬೌಲರ್ ತುಷಾರ

ಟಿ20 ಸ್ಪೆಷಲಿಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ತುಷಾರ ಕೂಡ ಒಬ್ಬರು. ಅವರ ಆಕ್ಷನ್ ಲಸಿತ್ ಮಾಲಿಂಗ ಅವರಂತೆಯೇ ಇದೆ. ಪವರ್‌ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಮತ್ತು ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯ ಅವರಿಗಿದೆ. ತುಷಾರ ಶ್ರೀಲಂಕಾ ಪರ 30 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಎಕಾನಮಿ ದರ ಪ್ರತಿ ಓವರ್‌ಗೆ ಕೇವಲ 8.1 ಆಗಿದ್ದು, 20 ರನ್‌ಗಳಿಗೆ 5 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Mon, 30 March 26

Follow Us