IND vs PAK, Asia Cup Final: ಭಾರತ ವಿರುದ್ಧದ ಫೈನಲ್ ಪಂದ್ಯಕ್ಕು ಮುನ್ನ ಪಾಕಿಸ್ತಾನ ನಾಯಕ ಆಡಿದ ಮಾತು ಕೇಳಿ
Pakistan vs Bangladesh, Salman Ali Agha: ಭಾರತ ತಂಡವು 2025 ರ ಏಷ್ಯಾಕಪ್ ಫೈನಲ್‌ಗೆ ಈಗಾಗಲೇ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನಂತರ ಎರಡನೇ ತಂಡವನ್ನು ನಿರ್ಧರಿಸಲಾಗಿದೆ. ಪಾಕಿಸ್ತಾನವು ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ತಲುಪಿದೆ. ಇದಕ್ಕೂ ಮುನ್ನ ಪಾಕ್ ನಾಯಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಏನು ಹೇಳಿದ್ದಾರೆ ನೋಡಿ.

ಬೆಂಗಳೂರು (ಸೆ. 26): 2025 ರ ಏಷ್ಯಾ ಕಪ್‌ನ ಸೂಪರ್-4 ರಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ, ಆದರೆ ಅದಕ್ಕೂ ಮೊದಲೇ ಫೈನಲ್‌ನಲ್ಲಿ ಮುಖಾಮುಖಿಯಾಗುವ ಎರಡು ತಂಡಗಳು ನಿರ್ಧಾರವಾಗಿವೆ. ಸೂಪರ್-4 ರಲ್ಲಿ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಪ್ರಶಸ್ತಿ ಪಂದ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರೆ, ಅತ್ತ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯವನ್ನು 11 ರನ್‌ಗಳಿಂದ ಗೆಲ್ಲುವ ಮೂಲಕ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿತು. ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ, ಪಾಕಿಸ್ತಾನಿ ನಾಯಕ ಸಲ್ಮಾನ್ ಅಲಿ ಅಘಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಭಾರತದ (Team India) ವಿರುದ್ಧದ ಅಂತಿಮ ಪಂದ್ಯಕ್ಕೂ ಮೊದಲು ದೊಡ್ಡ ಹೇಳಿಕೆ ನೀಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಹೇಳಿದ್ದೇನು?
ಬಾಂಗ್ಲಾದೇಶ ವಿರುದ್ಧ 11 ರನ್‌ಗಳ ಗೆಲುವಿನ ನಂತರ ಸೆಪ್ಟೆಂಬರ್ 28 ರಂದು ಪಂದ್ಯದ ಪ್ರಸ್ತುತಿಯ ಸಂದರ್ಭದಲ್ಲಿ ಭಾರತದ ವಿರುದ್ಧದ ಅಂತಿಮ ಪಂದ್ಯದ ಬಗ್ಗೆ ಕೇಳಿದಾಗ, ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ, “ನಾವು ಯಾವುದೇ ತಂಡವನ್ನು ಎದುರಿಸಲು ಮತ್ತು ಅವರನ್ನು ಸೋಲಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ನಾವು ಭಾನುವಾರ ಮತ್ತೆ ಮೈದಾನಕ್ಕೆ ಇಳಿಯುತ್ತೇವೆ ಮತ್ತು ಇದೇ ರೀತಿ ಗೆಲುವುದು ಪಡೆಯಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ” ಎಂದು ಹೇಳಿದರು. 2025 ರ ಏಷ್ಯಾ ಕಪ್‌ನಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ಒಟ್ಟು ಎರಡು ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಪಾಕಿಸ್ತಾನ ತಂಡವು ಎರಡೂ ಬಾರಿ ಏಕಪಕ್ಷೀಯ ಸೋಲುಗಳನ್ನು ಎದುರಿಸಿದೆ ಎಂಬುದನ್ನು ಗಮನಿಸಬೇಕು.
ನಮ್ಮ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಸುಧಾರಣೆ ತರಬೇಕಾಗಿದೆ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ ಕೇವಲ 135 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು, ಒಂದು ಹಂತದಲ್ಲಿ ತಮ್ಮ ತಂಡದ ಅರ್ಧದಷ್ಟು ಭಾಗವನ್ನು 49 ರನ್‌ಗಳಿಗೆ ಕಳೆದುಕೊಂಡಿತು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, “ಈ ಪಂದ್ಯದಲ್ಲಿ ನಾವು ಸುಮಾರು 15 ರನ್‌ಗಳು ಕಡಿಮೆ ಗಳಿಸಿದ್ದೇವೆ ಮತ್ತು ನಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಬೇಕಾಗಿದೆ. ಆದಾಗ್ಯೂ, ಅಂತಹ ಪಂದ್ಯವನ್ನು ಗೆಲ್ಲುವುದು ಉತ್ತಮವೆನಿಸುತ್ತದೆ. ನಾವು ಬೌಲಿಂಗ್ ಮಾಡಿದ ರೀತಿಯಿಂದ ಎದುರಾಳಿಗೆ ಒತ್ತಡವನ್ನು ಸೃಷ್ಟಿಸಲು ಸಾಧ್ಯವಾಯಿತು” ಎಂದು ಹೇಳಿದರು.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ- ಪಾಕ್ ನಡುವೆ ಫೈನಲ್ ಫೈಟ್
“ನಾವು ಹೆಚ್ಚುವರಿ ಅವಧಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಮೈಕ್ ಹೆಸ್ಸನ್ ನಿಮಗೆ ಫೀಲ್ಡಿಂಗ್ ಮಾಡಲು ಸಾಧ್ಯವಾಗದಿದ್ದರೆ, ನೀವು ತಂಡದಲ್ಲಿ ಇರಬಾರದು ಎಂದು ಹೇಳಿದ್ದಾರೆ. ನಮ್ಮದು ಈಗ ಯಾರನ್ನಾದರೂ ಸೋಲಿಸುವಷ್ಟು ಉತ್ತಮ ತಂಡ. ನಾವು ಭಾನುವಾರ ಕೂಡ ಅದನ್ನೇ ಮಾಡಲು ಪ್ರಯತ್ನಿಸುತ್ತೇವೆ. ಶಾಹೀನ್ ಒಬ್ಬ ವಿಶೇಷ ಆಟಗಾರ. ಅವರು ತಂಡವು ಅವರಿಂದ ಏನನ್ನು ಬಯಸುತ್ತದೆಯೋ ಅದನ್ನು ನಿಖರವಾಗಿ ಮಾಡುತ್ತಾರೆ” ಎಂಬುದು ಸಲ್ಮಾನ್ ಅಲಿ ಮಾತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




