AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬ ಆಟಗಾರನಿಗೆ 100 ಪೊಲೀಸರ ಸರ್ಪಗಾವಲು, 13 ಸಾವಿರ ಸೈನಿಕರ ನಿಯೋಜನೆ; ಪಾಕಿಸ್ತಾನದಲ್ಲಿ ಹೇಗಿದೆ ಭದ್ರತೆ?

Pakistan Champions Trophy Security: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದನಾ ಬೆದರಿಕೆಯ ಹಿನ್ನೆಲೆಯಲ್ಲಿ 13,000 ಸೈನಿಕರನ್ನು ನಿಯೋಜಿಸಲಾಗಿದೆ. ಒಬ್ಬ ಆಟಗಾರನ ಭದ್ರತೆಗಾಗಿ 100 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಲಾಹೋರ್ ಮತ್ತು ರಾವಲ್ಪಿಂಡಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. 13 ಸಾವಿರ ಪೊಲೀಸರಲ್ಲಿ ಸುಮಾರು 10 ಸಾವಿರ ಪೊಲೀಸರು ಮೈದಾನದಲ್ಲಿದ್ದು, ಆಟಗಾರರು ಕ್ರೀಡಾಂಗಣದಿಂದ ಹೋಟೆಲ್‌ಗೆ ಮತ್ತು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುವಾಗ ಭದ್ರತೆ ಒದಗಿಸುತ್ತಿದ್ದಾರೆ.

ಒಬ್ಬ ಆಟಗಾರನಿಗೆ 100 ಪೊಲೀಸರ ಸರ್ಪಗಾವಲು, 13 ಸಾವಿರ ಸೈನಿಕರ ನಿಯೋಜನೆ; ಪಾಕಿಸ್ತಾನದಲ್ಲಿ ಹೇಗಿದೆ ಭದ್ರತೆ?
ಚಾಂಪಿಯನ್ಸ್ ಟ್ರೋಫಿ ಭದ್ರತೆ
Follow us
ಪೃಥ್ವಿಶಂಕರ
|

Updated on:Mar 02, 2025 | 2:18 PM

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ ಎಂಬ ವರದಿ ಹೊರಬಿದ್ದಿದೆ. ISKP (ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ) ವಿದೇಶಿ ಪ್ರವಾಸಿಗರನ್ನು ಅಪಹರಿಸಿ ಅವರಿಂದ ಹಣಕ್ಕೆ ಬೇಡಿಕೆ ಇಡಬಹುದು ಎಂದು ಹೇಳಲಾಗುತ್ತಿದ್ದು, ಗುಪ್ತಚರ ಸಂಸ್ಥೆಗಳೇ ಈ ಮಾಹಿತಿಯನ್ನು ನೀಡಿವೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಸರ್ಕಾರ ಯಾವ ರೀತಿಯ ಭದ್ರತೆಯನ್ನು ಒದಗಿಸಿದೆ ಎಂಬುದರ ಬಗ್ಗೆ ಇದೀಗ ಹುಡುಕಾಟ ಶುರುವಾಗಿದೆ. ಮಾಹಿತಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗೆ 13 ಸಾವಿರ ಸೈನಿಕರನ್ನು ನಿಯೋಜಿಸಲಾಗಿದ್ದು, ಒಬ್ಬ ಆಟಗಾರನ ಭದ್ರತೆಯಲ್ಲಿ 100 ಪೊಲೀಸರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

13 ಸಾವಿರ ಸೈನಿಕರ ನಿಯೋಜನೆ

ಫೆಬ್ರವರಿ 19 ರಿಂದ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಪಾಕಿಸ್ತಾನ ಸೇರಿದಂತೆ ಉಳಿದ ಏಳು ತಂಡಗಳ ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಪಾಕಿಸ್ತಾನದ ಮೂರು ನಗರಗಳಾದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಪಂದ್ಯಗಳು ನಡೆಯುತ್ತಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಲಾಹೋರ್‌ನಲ್ಲಿ 8 ಸಾವಿರ ಸೈನಿಕರನ್ನು ಮತ್ತು ರಾವಲ್ಪಿಂಡಿಯಲ್ಲಿ 5 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪಾಕಿಸ್ತಾನಿ ಸೇನೆಯೂ ಕಟ್ಟೆಚ್ಚರದಲ್ಲಿದೆ.

ಭದ್ರತೆ ಒದಗಿಸುವವರು ಯಾರು?

ಈ ಐಸಿಸಿ ಈವೆಂಟ್​ಗಾಗಿ ಪಾಕಿಸ್ತಾನದಲ್ಲಿ ಪೊಲೀಸರು ಮತ್ತು ಸೇನೆ ಒಟ್ಟಾಗಿ ಭದ್ರತೆ ಒದಗಿಸುತ್ತಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರ 135 ಇನ್ಸ್‌ಪೆಕ್ಟರ್‌ಗಳು, 54 ಡಿಎಸ್‌ಪಿಗಳು ಮತ್ತು 18 ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅದೇ ಸಮಯದಲ್ಲಿ, 200 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಭದ್ರತೆಯ ದೊಡ್ಡ ಜವಾಬ್ದಾರಿಯೂ ಇದೆ. ಹಾಗೆಯೇ 10 ಸಾವಿರಕ್ಕೂ ಹೆಚ್ಚು ಸೈನಿಕರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಒಬ್ಬ ಆಟಗಾರನ ಭದ್ರತೆಗೆ 100 ಪೊಲೀಸರು

13 ಸಾವಿರ ಪೊಲೀಸರಲ್ಲಿ ಸುಮಾರು 10 ಸಾವಿರ ಪೊಲೀಸರು ಮೈದಾನದಲ್ಲಿದ್ದು, ಆಟಗಾರರು ಕ್ರೀಡಾಂಗಣದಿಂದ ಹೋಟೆಲ್‌ಗೆ ಮತ್ತು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುವಾಗ ಭದ್ರತೆ ಒದಗಿಸುತ್ತಿದ್ದಾರೆ. ಒಬ್ಬ ಆಟಗಾರನ ಭದ್ರತೆಗಾಗಿ ಸರಾಸರಿ 100 ಪಾಕಿಸ್ತಾನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಚಾಂಪಿಯನ್ಸ್ ಟ್ರೋಫಿಗಾಗಿ ಆಟಗಾರರ ಭದ್ರತೆಯ ವಿಷಯದಲ್ಲಿ ಪಾಕಿಸ್ತಾನ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ.

2009 ರಲ್ಲಿ ಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿ

2009 ರಲ್ಲಿ ಶ್ರೀಲಂಕಾ ತಂಡ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಉಭಯ ತಂಡಗಳ ಟೆಸ್ಟ್ ಪಂದ್ಯದ ಸಮಯದಲ್ಲಿ, ಶ್ರೀಲಂಕಾ ತಂಡವು ಹೋಟೆಲ್‌ನಿಂದ ಲಾಹೋರ್ ಕ್ರೀಡಾಂಗಣಕ್ಕೆ ಹೋಗುತ್ತಿದ್ದಾಗ, ಭಯೋತ್ಪಾದಕರು ತಂಡದ ಬಸ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 6 ಕ್ಕೂ ಹೆಚ್ಚು ಶ್ರೀಲಂಕಾದ ಆಟಗಾರರು ಗಾಯಗೊಂಡಿದ್ದರು. ಅವರಲ್ಲಿ ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ ಮತ್ತು ಚಾಮಿಂಡಾ ವಾಸ್ ಅವರಂತಹ ಸ್ಟಾರ್ ಆಟಗಾರರು ಕೂಡ ಸೇರಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Mon, 24 February 25

ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್