PAK vs ENG: ವಿಪರೀತ ಜ್ವರ, ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ ಪಾಕ್ ತಂಡದ ಸ್ಟಾರ್ ವೇಗದ ಬೌಲರ್..!

PAK vs ENG: ನಸೀಮ್ ಶಾ ತೀವ್ರ ಜ್ವರ ಮತ್ತು ಎದೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪಾಕ್ ಮಂಡಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

PAK vs ENG: ವಿಪರೀತ ಜ್ವರ, ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ ಪಾಕ್ ತಂಡದ ಸ್ಟಾರ್ ವೇಗದ ಬೌಲರ್..!
Naseem Shah
Follow us
TV9 Web
| Updated By: ಪೃಥ್ವಿಶಂಕರ

Updated on:Sep 28, 2022 | 3:12 PM

ಟಿ20 ವಿಶ್ವಕಪ್​ಗೂ (t20 world cup 2022) ಮುನ್ನ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಪಾಳಯದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ತಂಡದ ವೇಗದ ಬೌಲರ್ ನಸೀಮ್ ಶಾ (Naseem Shah) ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ನಸೀಮ್ ಶಾ ಅವರ ಆರೋಗ್ಯವು ಹಠಾತ್ ಹದಗೆಟ್ಟಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಾಹೋರ್‌ನ ಆಸ್ಪತ್ರೆಗೆ ಸೇರಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ 5ನೇ ಟಿ20ಯಲ್ಲಿ ನಸೀಮ್ ಶಾ ಆಡುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಹಠಾತ್ ಹದಗೆಟ್ಟ ಆರೋಗ್ಯದಿಂದಾಗಿ ನಸೀಮ್, ಸರಣಿಯ 5 ನೇ ಟಿ 20 ಪಂದ್ಯದಿಂದ ಹೊರಗುಳಿದಿದ್ದಾರೆ.

ಮೂಲಗಳ ಪ್ರಕಾರ ನಸೀಮ್ ಶಾ ತೀವ್ರ ಜ್ವರ ಮತ್ತು ಎದೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪಾಕ್ ಮಂಡಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ. ಮಂಗಳವಾರ ಇಡೀ ದಿನ ನಸೀಮ್ ತನ್ನ ಕೊಠಡಿಯಿಂದ ಹೊರಗೆ ಬರಲೇ ಇಲ್ಲ ಎಂದು ವರದಿಯಾಗಿದ್ದು, ಅಷ್ಟರ ಮಟ್ಟಿಗೆ ಪಾಕಿಸ್ತಾನಿ ವೇಗಿ ಸ್ಥಿತಿ ಹದಗೆಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ದಾಖಲು

ಮಂಗಳವಾರ ಸಂಜೆ ನಸೀಮ್ ಶಾ ಅವರ ಆರೋಗ್ಯ ಹದಗೆಟ್ಟಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ನಸೀಮ್ ಶಾಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

5ನೇ ಟಿ20ಯಿಂದ ನಸೀಮ್ ಶಾ ಔಟ್

5ನೇ ಟಿ20 ಪಂದ್ಯದಲ್ಲಿ ನಸೀಮ್ ಶಾ ಪಾಕಿಸ್ತಾನ ಪರ ಆಡುವ ಸಾಧ್ಯತೆ ಇತ್ತು. ಆದರೆ, ಈಗ ಆ ಪಂದ್ಯದಿಂದ ನಸೀಮ್​ ಹೊರಗುಳಿದಿದ್ದಾರೆ. ಇಷ್ಟು ಮಾತ್ರವಲ್ಲದೆ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಆಡುವ ಬಗ್ಗೆ ಅವರ ಆರೋಗ್ಯ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ಕರಾಚಿಯಲ್ಲಿ ನಡೆದ ಸರಣಿಯ ಮೊದಲ 4 ಪಂದ್ಯಗಳಿಂದ ನಸೀಮ್ ಶಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

7 ಪಂದ್ಯಗಳ ಟಿ20 ಸರಣಿ 2-2 ರಲ್ಲಿ ಸಮಬಲ

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 7 ಟಿ20 ಸರಣಿಯ ಮೊದಲ 4 ಪಂದ್ಯಗಳು ಕರಾಚಿಯಲ್ಲಿ ನಡೆದಿವೆ. ಇನ್ನುಳಿದ ಮೂರು ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಸದ್ಯ ಉಭಯ ತಂಡಗಳ ನಡುವೆ ಸರಣಿ 2-2 ರಲ್ಲಿ ಸಮಬಲಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಸರಣಿ ಗೆಲ್ಲುತ್ತಾರೆ ಎಂಬುದು ಲಾಹೋರ್​ನಲ್ಲಿ ನಿರ್ಧಾರವಾಗಲಿದೆ. ಈಗ ಉಳಿದ 3 ರಲ್ಲಿ ಯಾವ ತಂಡ 2 ಪಂದ್ಯ ಗೆಲ್ಲುತ್ತದೋ ಆ ತಂಡ ಸರಣಿಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ. ಮೊದಲ 4 ಪಂದ್ಯಗಳಲ್ಲಿ ಉಭಯ ತಂಡಗಳ ಪ್ರದರ್ಶನವನ್ನು ನೋಡಿದ ನಂತರ, ಪಾಕಿಸ್ತಾನಕ್ಕೆ ಹೋಲಿಸಿದರೆ ಇಂಗ್ಲೆಂಡ್ ತಂಡವು ಸರಣಿ ಗೆಲುವಿಗೆ ದೊಡ್ಡ ಸ್ಪರ್ಧಿಯಾಗಿದೆ.

Published On - 3:12 pm, Wed, 28 September 22