ಹೋಂ ಗ್ರೌಂಡ್​​ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕ್​ಗೆ ಇದೆಂಥಾ ಹೀನಾಯ ಸ್ಥಿತಿ

ಪಾಕಿಸ್ತಾನ ತಂಡವು ತನ್ನದೇ ದೇಶದಲ್ಲಿ ಆಯೋಜಿಸಿದ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ ಕೊನೆಯ ಸ್ಥಾನದಲ್ಲಿ ಉಳಿದಿದೆ. ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಪಾಕಿಸ್ತಾನ, ಬಾಂಗ್ಲಾದೇಶದ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮಾಜಿ ಆಟಗಾರರು ತಂಡದ ಕಳಪೆ ಪ್ರದರ್ಶನವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಹೋಂ ಗ್ರೌಂಡ್​​ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕ್​ಗೆ ಇದೆಂಥಾ ಹೀನಾಯ ಸ್ಥಿತಿ
ರಿಜ್ವಾನ್

Updated on: Feb 28, 2025 | 11:00 AM

ಪಾಕಿಸ್ತಾನ ತಂಡ ‘ಚಾಂಪಿಯನ್ಸ್ ಟ್ರೋಫಿ’ಯನ್ನು ಹೋಂ ಗ್ರೌಂಡ್​​ನಲ್ಲಿ ಆಯೋಜಿಸಿತ್ತು. ಈ ಬಾರಿ ಕಪ್ ಗೆಲ್ಲುವ ತವಕ ಪಾಕ್​ಗೆ ಇತ್ತು. ಕಪ್ ಗೆಲ್ಲೋದು ಹಾಗಿರಲಿ, ಸೆಮಿ ಫೈನಲ್ ತಲುಪೋಕೂ ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ ಪಾಕ್ ಗಂಟುಮೂಟೆ ಕಟ್ಟಿದೆ. ಈ ಮೂಲಕ ತಂಡ ಹೀನಾಯ ಸ್ಥಿತಿ ತಲುಪಿದೆ. ಅಂಕಪಟ್ಟಿಯಲ್ಲಿ ಕೊನೆಯಲ್ಲಿ ಉಳಿಯುವ ಭಯವೂ ತಂಡಕ್ಕೆ ಕಾಡಿದೆ.

ಮೊಹ್ಮದ್ ರಿಜ್ವಾನ್ ಅವರು ಪಾಕ್​ನ ಕ್ಯಾಪ್ಟನ್ ಆಗಿದ್ದಾರೆ. ಈ ಬಾರಿ ಪಾಕ್ ಬಿ ಗ್ರೂಪ್​​ನಲ್ಲಿ ಇತ್ತು. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ತಂಡ ಪಾಕ್ ಸೋಲು ಕಂಡಿದೆ. ದುರ್ಬಲ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಗೆಲ್ಲುವ ಮಹದಾಸೆ ಇಟ್ಟುಕೊಂಡಿತ್ತು. ಈ ಮೂಲಕ ಮರ್ಯಾದೆ ಉಳಿಸುಕೊಳ್ಳುವ ಪ್ಲ್ಯಾನ್ ಹಾಕಿತ್ತು. ಆದರೆ, ಇದಕ್ಕೆ ವರುಣನ ಅಡ್ಡಿ ಆಯಿತು. ಈ ಮೂಲಕ ಪಾಕ್-ಬಾಂಗ್ಲಾ ಪಂದ್ಯ ರದ್ದಾಗಿ ತಲಾ ಒಂದು ಅಂಕ ಪಡೆದಿದೆ. ಆದಾಗ್ಯೂ ಸದ್ಯ ಅಂಕಪಟ್ಟಿಯಲ್ಲಿ ಪಾಕ್ ಕೊನೆಯಲ್ಲೇ ಉಳಿದುಕೊಂಡಿದೆ.

ಇಂಗ್ಲೆಂಡ್​ಗೆ ಒಂದು ಪಂದ್ಯ ಮಾತ್ರ ಬಾಕಿ ಉಳಿದುಕೊಂಡಿದೆ. ಅದೂ ಸೌತ್ ಆಫ್ರಿಕಾ ವಿರುದ್ಧ. ಈ ಪಂದ್ಯದಲ್ಲಿ ಗೆಲ್ಲದೆ ಇದ್ದರೂ ರನ್​ರೇಟ್ ಉಳಿಸಿಕೊಂಡರೆ ಪಾಕ್​ ಲಿಸ್ಟ್​ನಲ್ಲಿ ಕೊನೆಗೆ ಹೋಗಲಿದೆ. ಹೋಂ ಗ್ರೌಂಡ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಪರಿಸ್ಥಿತಿ ಇಷ್ಟೊಂದು ಹೀನಾಯ ಸ್ಥಿತಿಗೆ ಬರುತ್ತದೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ
ಗುಜರಾತ್ ವಿರುದ್ಧವೂ ಸೋತ ಆರ್​ಸಿಬಿ
ನಾಯಕತ್ವ ಸಿಕ್ಕ ಬಳಿಕ 128 ರನ್ ಚಚ್ಚಿದ ಪೃಥ್ವಿ ಶಾ
16 ಗಂಟೆಗಳ ಆಟಕ್ಕೆ 1800 ಕೋಟಿ ಖರ್ಚು ಮಾಡಿದ ಪಾಕಿಸ್ತಾನ

ಇದನ್ನೂ ಓದಿ: Champions Trophy 2025: 16 ಗಂಟೆಗಳ ಆಟಕ್ಕೆ 1800 ಕೋಟಿ ಖರ್ಚು ಮಾಡಿದ ಪಾಕಿಸ್ತಾನ

ಇನ್ನು, ಇದನ್ನು ಪಾಕಿಸ್ತಾನದವರಿಗೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಮಾಜಿ ಆಟಗಾರರು ತಂಡದ ಕ್ಷಮತೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಭಾರತದ ಆಟಗಾರರು ತೋರುವ ಬದ್ಧತೆ ಬಗ್ಗೆ ಕೊಂಡಾಡಿರೋ ಪಾಕಿಸ್ತಾನದ ಮಾಜಿ ಪ್ಲೇಯರ್ಸ್ ಪಾಕ್ ಆಟಗಾರರನ್ನು ಟೀಕಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಂಡದವರು ಮತ್ತಷ್ಟು ಟೀಕೆ ಎದುರಿಸಬೇಕಾದ ಪರಿಸ್ಥಿತಿ ಬರೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Fri, 28 February 25