AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಯಾಕೆ ಈ ಪ್ರಶಸ್ತಿ ನೀಡ್ತಿದ್ದೀರಾ? ಪ್ಯಾಟ್ ಕಮ್ಮಿನ್ಸ್ ಅಚ್ಚರಿ!

IPL 2026 SRH vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​​ರೈಸರ್ಸ್ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 235 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 202 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಎಸ್​ಆರ್​​ಹೆಚ್ ತಂಡ 33 ರನ್​ಗಳ ಜಯ ಸಾಧಿಸಿದೆ.

ನನಗೆ ಯಾಕೆ ಈ ಪ್ರಶಸ್ತಿ ನೀಡ್ತಿದ್ದೀರಾ? ಪ್ಯಾಟ್ ಕಮ್ಮಿನ್ಸ್ ಅಚ್ಚರಿ!
Pat Cummins
ಝಾಹಿರ್ ಯೂಸುಫ್
|

Updated on: May 07, 2026 | 2:07 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ಗೆಲುವುಗಳೊಂದಿಗೆ ಎಸ್​ಆರ್​ಹೆಚ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅದು ಕೂಡ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡ 20 ಓವರ್​ಗಳಲ್ಲಿ 235 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 202 ರನ್​ಗಳಿಸಿ 33 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಇನ್ನು ಈ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಗಾಗಿ ಎಸ್​ಆರ್​ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಕರೆಯಲಾಯಿತು. ಈ ಆಹ್ವಾನ ನೋಡಿ ಖುದ್ದು ಕಮಿನ್ಸ್ ಅಚ್ಚರಿಗೊಂಡರು. ಏಕೆಂದರೆ ಈ ಮ್ಯಾಚ್​ನಲ್ಲಿ ಪ್ಯಾಟ್ ಕಮಿನ್ಸ್ ಬ್ಯಾಟ್ ಮಾಡಿರಲಿಲ್ಲ. ಇನ್ನು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ.

ಇದಾಗ್ಯೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಪ್ಯಾಟ್ ಕಮಿನ್ಸ್ “ನನಗೆ ಈ ಪ್ರಶಸ್ತಿ ಏಕೆ ನೀಡಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಂಜಾಬ್ ಕಿಂಗ್ಸ್ ತಂಡದ ಕೂಪರ್ ಕೊನೊಲಿ ಈ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು/ ಬಹುಶಃ ಅದು ಅವರಿಗೆ ಸಲ್ಲಬೇಕಿತ್ತು, ಎಂದು ಹೇಳುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ಆದರೆ ಇಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲು ಮುಖ್ಯ ಕಾರಣ ಅವರು ಪವರ್​ಪ್ಲೇನಲ್ಲಿ ಎಸೆದ ಓವರ್​ಗಳು. ಮೊದಲ ಓವರ್​ನಲ್ಲೇ ಡೇಂಜರಸ್ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದಿದ್ದ ಕಮಿನ್ಸ್, ಆ ಬಳಿಕ ಸುರ್ಯಾಂಶ್ ಶೆಡ್ಗೆ ಅವರನ್ನು ಔಟ್ ಮಾಡಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು!

ಅಲ್ಲದೆ 4 ಓವರ್​ಗಳಲ್ಲಿ ಕೇವಲ 34 ರನ್ ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ನಡುವೆ ಎರಡು ಅದ್ಭುತ ಕ್ಯಾಚ್​ಗಳನ್ನು ಸಹ ಹಿಡಿದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಪ್ಯಾಟ್ ಕಮಿನ್ಸ್ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಇದಾಗ್ಯೂ ಈ ಮ್ಯಾಚ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದ 22 ವರ್ಷದ ಕೂಪರ್ ಕೊನೊಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಅರ್ಹರು ಎಂಬುದನ್ನು ಖುದ್ದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಆದರೆ ಸೋತ ಪಂದ್ಯಗಳಲ್ಲಿ ಮಿಂಚಿದ ಆಟಗಾರರಿಗೆ ಐಪಿಎಲ್​ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಗುವುದು ವಿರಳ. ಈ ಸಂಪ್ರದಾಯ ಮುಂದೆಯಾದರೂ ಬದಲಾಗಲಿದೆಯಾ ಕಾದು ನೋಡಬೇಕಿದೆ.

SRH ತಂಡದ ‘ಸ್ಪೆಷಲ್ 7’:

ಈ ಬಾರಿಯ ಐಪಿಎಲ್‌ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಹಿಂದೆ ಒಬ್ಬರೇ ಆಟಗಾರನಿಲ್ಲ. ತಂಡ ಸಾಧಿಸಿದ 7 ಗೆಲುವುಗಳಲ್ಲಿ 7 ಬೇರೆ ಬೇರೆ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಈ ತಂಡದ ಬಲವನ್ನು ತೋರಿಸುತ್ತದೆ. ಹೀಗೆ ಎಸ್​ಆರ್​ಹೆಚ್ ಪರ ಪ್ಲೇಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಅಭಿಷೇಕ್ ಶರ್ಮಾ
  •  ಟ್ರಾವಿಸ್ ಹೆಡ್
  • ಹೆನ್ರಿಕ್ ಕ್ಲಾಸನ್
  • ಇಶಾನ್ ಕಿಶನ್
  • ನಿತೀಶ್ ಕುಮಾರ್ ರೆಡ್ಡಿ
  • ಈಶಾನ್ ಮಾಲಿಂಗ
  •  ಪ್ಯಾಟ್ ಕಮ್ಮಿನ್ಸ್
Follow Us
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?
‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್
‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್
ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ
ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ