ಕೊಹ್ಲಿ-ರವಿಶಾಸ್ತ್ರಿ ನಿಯಮವನ್ನೇ ಬದಲಿಸಿದ ರಾಹುಲ್ ದ್ರಾವಿಡ್; ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ!

ರಾಹುಲ್ ದ್ರಾವಿಡ್ ಇದೀಗ ಅನಿಲ್ ಕುಂಬ್ಳೆ ಅವರ ನೀತಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಅದರ ಪ್ರಕಾರ ಅನರ್ಹ ಮತ್ತು ಕಳಪೆ ಫಾರ್ಮ್ ಹೊಂದಿರುವ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ ಆಡಬೇಕಿತ್ತು.

ಕೊಹ್ಲಿ-ರವಿಶಾಸ್ತ್ರಿ ನಿಯಮವನ್ನೇ ಬದಲಿಸಿದ ರಾಹುಲ್ ದ್ರಾವಿಡ್; ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ!
ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿಯು ಟೆಸ್ಟ್ ಸ್ವರೂಪದಲ್ಲಿ ಅನೇಕ ಯಶಸ್ಸನ್ನು ಸಾಧಿಸಿರಬಹುದು, ಆದರೆ ಈ ಜೋಡಿಯ ಕೆಲವು ನಿಯಮಗಳನ್ನು ಈಗ ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬದಲಾಯಿಸಲು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಇದೀಗ ಅನಿಲ್ ಕುಂಬ್ಳೆ ಅವರ ನೀತಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಅದರ ಪ್ರಕಾರ ಅನರ್ಹ ಮತ್ತು ಕಳಪೆ ಫಾರ್ಮ್ ಹೊಂದಿರುವ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ ಆಡಬೇಕಿತ್ತು. ರವಿಶಾಸ್ತ್ರಿ ಅವರ ಅವಧಿಯಲ್ಲಿ ಇದನ್ನು ನಿಲ್ಲಿಸಲಾಗಿತ್ತು ಆದರೆ ರಾಹುಲ್ ದ್ರಾವಿಡ್ ಅದನ್ನು ಮತ್ತೆ ಆರಂಭಿಸಿದ್ದಾರೆ.

ಇದಕ್ಕೆ ಕಾರಣ 2021 ರ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದು, ಇದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿತು. ಇನ್ಸೈಡ್ ಸ್ಪೋರ್ಟ್ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಆಯ್ಕೆಯಿಂದಾಗಿ ರಾಹುಲ್ ದ್ರಾವಿಡ್ ಈ ನೀತಿಯನ್ನು ಮರುಪ್ರಾರಂಭಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆಯ ನಂತರ ನೇರವಾಗಿ ಐಪಿಎಲ್ ಆಡಿದರು. ಆದರೆ ಅವರು ಐಪಿಎಲ್ 2020 ರಲ್ಲಿ ಬೌಲಿಂಗ್ ಮಾಡಲಿಲ್ಲ. ಇದರ ನಂತರ, 2021 ರಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲಿಲ್ಲ ಮತ್ತು ಅವರು ಬ್ಯಾಟ್‌ನಲ್ಲೂ ಕಳಪೆ ಪ್ರದರ್ಶನ ನೀಡಿದರು. ಆದರೆ ಇದರ ಹೊರತಾಗಿಯೂ ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು. ಆದರೆ ರಾಹುಲ್ ದ್ರಾವಿಡ್ ಕೋಚ್ ಆಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಗುಳಿದಿದ್ದು, ಈಗ ಅವರು ಫಿಟ್‌ನೆಸ್ ಸಾಭೀತು ಪಡಿಸಿದರೆ ಮಾತ್ರ ತಂಡಕ್ಕೆ ಮರಳಲು ಸಾಧ್ಯವಾಗುತ್ತದೆ. ಹೀಗಾಗಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಬೀತುಪಡಿಸಲಿದ್ದಾರೆ.

ರಾಹುಲ್ ದ್ರಾವಿಡ್ ದೇಶಿಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಲು ಬಯಸಿದ್ದಾರೆ ರಾಹುಲ್ ದ್ರಾವಿಡ್ ಐಪಿಎಲ್ ಆಧಾರದ ಮೇಲೆ ಆಟಗಾರರ ಆಯ್ಕೆಯನ್ನು ನಿಲ್ಲಿಸಲು ಚಿಂತಿಸಿದ್ದಾರೆ. ಐಪಿಎಲ್ ಆಧಾರದ ಮೇಲೆ ಯಾವುದೇ ಆಟಗಾರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ದ್ರಾವಿಡ್ ನಂಬಿದ್ದಾರೆ. ಅಲ್ಲದೆ, ಆಟಗಾರನು ಪುನರಾಗಮನ ಮಾಡಬೇಕಾದರೆ, ಅವನು ತನ್ನ ಪಂದ್ಯದ ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಸಾಬೀತುಪಡಿಸಬೇಕಾಗುತ್ತದೆ. ಸದ್ಯ, ಹಾರ್ದಿಕ್ ಪಾಂಡ್ಯ ಅವರು ಕ್ರಿಕೆಟ್‌ನಿಂದ ದೂರವಿದ್ದು, ವಿಜಯ್ ಹಜಾರೆ ಟ್ರೋಫಿಯಿಂದಲೂ ತಮ್ಮ ಹೆಸರನ್ನು ಹಿಂಪಡೆದಿರುವುದರಿಂದ ಅವರ ಮರಳುವಿಕೆ ಕಷ್ಟಕರವಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಹೆಸರನ್ನು ಪರಿಗಣಿಸಲಾಗುವುದಿಲ್ಲ. ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್‌ಗೆ, “ನೀತಿಯನ್ನು ಎಂದಿಗೂ ಬದಲಾಯಿಸಲಾಗಿಲ್ಲ ಆದರೆ ಕಳೆದ ಕೆಲವು ವರ್ಷಗಳಿಂದ ಅವುಗಳನ್ನು ಪರಿಗಣಿಸಲಾಗುತ್ತಿಲ್ಲ. ರಾಹುಲ್ ದ್ರಾವಿಡ್ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಗಾಯದ ನಂತರ ನೀವು ಚೇತರಿಸಿಕೊಂಡಿದ್ದರೆ, ನಿಮ್ಮನ್ನು ಸಾಬೀತುಪಡಿಸಲು ನೀವು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದಿದ್ದಾರೆ.

Click on your DTH Provider to Add TV9 Kannada