
ಐಪಿಎಲ್ 2026 (IPL 2026) ರ ಫೈನಲ್ನಲ್ಲಿ ಆರ್ಸಿಬಿಯನ್ನು (RCB) ಯಾವ ತಂಡ ಎದುರಿಸಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR) ಎರಡೂ ತಂಡಗಳು ಕ್ವಾಲಿಫೈಯರ್ 2 ರಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ಗೇರಿದರೆ, ಸೋತ ತಂಡ ಐಪಿಎಲ್ನಿಂದ ಹೊರಬೀಳಲಿದೆ. ಕ್ವಾಲಿಫೈಯರ್ 2 ಪಂದ್ಯವು ಮೇ 29 ರಂದು ನಡೆಯಲಿದೆ. ಇದಾದ ನಂತರ ಮೇ 31 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ತಂಡವನ್ನು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ನಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದನ್ನು ಇದುವರೆಗಿನ ಅಂಕಿ ಅಂಶಗಳು ಸಾರಿ ಹೇಳುತ್ತಿವೆ.
ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಆಡಿದ ತಂಡವೊಂದು ಫೈನಲ್ ಗೆದ್ದು ಪ್ರಶಸ್ತಿ ಗೆದ್ದಿರುವುದು ಒಮ್ಮೆ ಮಾತ್ರ. ಈ ಸಾಧನೆ ಮಾಡಿದ ಏಕೈಕ ತಂಡವೆಂದರೆ ಅದು ಸನ್‌ರೈಸರ್ಸ್ ಹೈದರಾಬಾದ್. 2016 ರಲ್ಲಿ, ಡೇವಿಡ್ ವಾರ್ನರ್ ನೇತೃತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಫೈನಲ್ನಲ್ಲಿ ಆರ್ಸಿಬಿಯನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು.
ಆದರೆ ಅದಕ್ಕೂ ಮುನ್ನ ಎಲಿಮಿನೇಟರ್ ಸುತ್ತಿನಲ್ಲಿ ಕೆಕೆಆರ್ ತಂಡವನ್ನು 22 ರನ್‌ಗಳಿಂದ ಸೋಲಿಸಿ, ಆ ನಂತರ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಲಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ, ರಾಜಸ್ಥಾನ ರಾಯಲ್ಸ್ 2016 ರ ಸಾಧನೆಯನ್ನು ಪುನರಾವರ್ತಿಸುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ನಾಕೌಟ್ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವುದು ಮತ್ತು ಫೈನಲ್ ಪಂದ್ಯವನ್ನು ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ.
IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್
ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದಿದೆ. ಶೇನ್ ವಾರ್ನ್ ನೇತೃತ್ವದಲ್ಲಿ ರಾಜಸ್ಥಾನ್, 2008 ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಅದರ ನಂತರ, ರಾಜಸ್ಥಾನ್ ರಾಯಲ್ಸ್ 2022 ರಲ್ಲಿ ನೇರವಾಗಿ ಫೈನಲ್ ತಲುಪಿತ್ತಾದರೂ, ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ರಾಜಸ್ಥಾನ್ 3ನೇ ಬಾರಿಗೆ ಫೈನಲ್ ತಲುಪುತ್ತದೆಯೇ? ಎಂಬುದು ಪ್ರಶ್ನೆ. ಎಲಿಮಿನೇಟರ್ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ರಾಜಸ್ಥಾನ್ ಕ್ವಾಲಿಫೈಯರ್ 2 ಅನ್ನು ಪ್ರವೇಶಿಸಿದೆ. ಇದೀಗ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವುದು ದೊಡ್ಡ ಸವಾಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ