AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 8 ವರ್ಷಗಳ ಹಿಂದಿನ ಇತಿಹಾಸವನ್ನು ಪುನರಾವರ್ತಿಸುತ್ತಾ ಟೀಂ ಇಂಡಿಯಾ?

India vs England 4th T20: ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯ ಜುಲೈ 9 ರಂದು ಬ್ರಿಸ್ಟಲ್‌ನಲ್ಲಿ ನಡೆಯಲಿದೆ. ಸರಣಿ ನಿರ್ಣಾಯಕವಾಗಿರುವ ಈ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಸತತ ಸೋಲುಗಳ ನಂತರ ಸರಣಿಯಲ್ಲಿ ಉಳಿಯಲು ಶ್ರೇಯಸ್ ಪಡೆಗೆ ಇದು ಕೊನೆಯ ಅವಕಾಶ. ಬ್ರಿಸ್ಟಲ್ ಮೈದಾನದಲ್ಲಿ ಭಾರತದ ಹಿಂದಿನ ಉತ್ತಮ ಪ್ರದರ್ಶನ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ಗೆದ್ದರೆ ಸರಣಿ ಅದರ ಪಾಲಾಗಲಿದೆ, ಹಾಗಾಗಿ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ.

IND vs ENG: 8 ವರ್ಷಗಳ ಹಿಂದಿನ ಇತಿಹಾಸವನ್ನು ಪುನರಾವರ್ತಿಸುತ್ತಾ ಟೀಂ ಇಂಡಿಯಾ?
Ind Vs Eng
ಪೃಥ್ವಿಶಂಕರ
|

Updated on: Jul 08, 2026 | 8:13 PM

Share

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಹಾಗೂ ಸರಣಿ ನಿರ್ಧಾರಕ ಪಂದ್ಯ ಜುಲೈ 9 ರಂದು ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತ ತಂಡಕ್ಕೆ ಮಾಡು-ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೇಯಸ್ ಪಡೆ ಈ ಪಂದ್ಯವನ್ನು ಸೋತರೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕಳೆದುಕೊಳ್ಳುತ್ತದೆ. ಇತ್ತ ಇಂಗ್ಲೆಂಡ್ ಗೆದ್ದರೆ, ಟಿ20 ಸರಣಿ ಅದರ ಪಾಲಾಗಲಿದೆ. ಹೀಗಾಗಿ ಉಭಯ ತಂಡಗಳು ಗೆಲ್ಲಲೇಬೇಕಾದ ಒತ್ತಡದಲಿವೆ. ಇಂಗ್ಲೆಂಡ್​ಗೆ ಹೋಲಿಸಿದರೆ, ಟೀಂ ಇಂಡಿಯಾಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಪೂರಕವಾಗಿ ಈ ಪಂದ್ಯ ನಡೆಯುವ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಕೊನೆಯ ಪಂದ್ಯವನ್ನು ಗೆದ್ದಿರುವುದು ಅಯ್ಯರ್ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಮರುಕಳಿಸುತ್ತಾ 8 ವರ್ಷಗಳ ಹಿಂದಿನ ಇತಿಹಾಸ?

ಮೇಲೆ ಹೇಳಿದಂತೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಬ್ರಿಸ್ಟಲ್‌ನ ಕೌಂಟಿ ಮೈದಾನ ಆತಿಥ್ಯವಹಿಸುತ್ತಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾ 8 ವರ್ಷಗಳ ಹಿಂದೆ ಟಿ20 ಪಂದ್ಯವನ್ನು ಆಡಿತ್ತು. ಆದರಿಂದ್ದೀಚೆಗೆ ಟೀಂ ಇಂಡಿಯಾ ಈ ಮೈದಾನದಲ್ಲಿ ಯಾವುದೇ ಟಿ20 ಪಂದ್ಯವನ್ನು ಆಡಿರಲಿಲ್ಲ. 2018 ರಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 198 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

199 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಆಸರೆಯಾದರು. ಆ ಪಂದ್ಯದಲ್ಲಿ ರೋಹಿತ್ ಅಜೇಯ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ರೋಹಿತ್ ಅವರ ಈ ಇನ್ನಿಂಗ್ಸ್​ನಿಂದಾಗಿ ಟೀಂ ಇಂಡಿಯಾ ಕೇವಲ 18.4 ಓವರ್‌ಗಳಲ್ಲಿ ಗುರಿ ತಲುಪಿತು. ಇದೀಗ ಈ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಯಸಿದರೆ, ಬ್ರಿಸ್ಟಲ್‌ನ ಈ ಮೈದಾನದಲ್ಲಿ ತನ್ನ ಎಂಟು ವರ್ಷಗಳ ಹಿಂದಿನ ಸಾಧನೆಯನ್ನು ಪುನರಾವರ್ತಿಸಬೇಕಾಗುತ್ತದೆ.

ಇಂಗ್ಲೆಂಡ್ ಪ್ರದರ್ಶನ ಹೇಗಿದೆ?

ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ಇಂಗ್ಲೆಂಡ್‌ನ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಇಲ್ಲಿಯವರೆಗೆ ಈ ಮೈದಾನದಲ್ಲಿ ಐದು ಟಿ20 ಪಂದ್ಯಗಳನ್ನು ಆಡಿರುವ ಆತಿಥೇಯ ಇಂಗ್ಲೆಂಡ್ ಕೇವಲ ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಆದ್ದರಿಂದ, ಇಂಗ್ಲೆಂಡ್ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡು ಸರಣಿಯನ್ನು ಗೆಲ್ಲಲು ನೋಡುತ್ತಿದೆ.

IND vs ENG: ‘ಇದು ಐಪಿಎಲ್ ಅಲ್ಲ’; ಟೀಂ ಇಂಡಿಯಾ ಆಟಗಾರರನ್ನು ಎಚ್ಚರಿಸಿದ ಆರ್ಚರ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯ ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಅದಕ್ಕೆ ಅರ್ಧ ಗಂಟೆ ಮೊದಲು, ಅಂದರೆ ರಾತ್ರಿ 9:30 ಕ್ಕೆ ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಹಾಟ್​ ಸ್ಟಾರ್​ನಲ್ಲಿಯೂ ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು