
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ರಾಯ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 20ನೇ ಓವರ್ನ ಕೊನೆಯ ಎಸೆತದಲ್ಲಿ 2 ರನ್ ಬಾರಿಸಿ 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು.
ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಈ ಗೆಲುವಿಗೆ ನಾವು ಅರ್ಹರಲ್ಲ ಎಂದೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರ್ಸಿಬಿ ನಾಯಕ, “ಇವತ್ತಿನ ಪಂದ್ಯ ಬಹಳ ರೋಚಕವಾಗಿತ್ತು. ತಂಡದ ಪರವಾಗಿ ಅದ್ಭುತವಾಗಿ ಆಡಿದ ಕೃಣಾಲ್ ಪಾಂಡ್ಯ ಅವರೇ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್. ತಂಡದ ಪ್ಲ್ಯಾನ್ ಪ್ರಕಾರ ಅವರಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಆ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ” ಎಂದು ರಜತ್ ಪಾಟಿದಾರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಭೂವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ರಜತ್, “ಭುವಿ ಅವರ ಬೌಲಿಂಗ್ ನಿಯಂತ್ರಣ ನಂಬಲಸಾಧ್ಯ. ಪಿಚ್ ಎರಡು ರೀತಿಯಲ್ಲಿ ವರ್ತಿಸುತ್ತಿದ್ದರೂ ಅವರು ಚೆಂಡನ್ನು ಬಳಸಿದ ರೀತಿ ಅದ್ಭುತವಾಗಿತ್ತು. ಇಂತಹ ಪಿಚ್‌ನಲ್ಲಿ ಅವರನ್ನು ಎದುರಿಸುವುದು ಯಾವುದೇ ಬ್ಯಾಟರ್‌ಗೆ ಕಷ್ಟದ ಕೆಲಸ,” ಎಂದು ಮೆಚ್ಚುಗೆ ಸೂಚಿಸಿದರು.
ಇನ್ನು ಈ ಪಂದ್ಯ ಗೆದ್ದರೂ ಸಹ ರಜತ್ ಪಾಟಿದಾರ್ ತಮ್ಮ ಬ್ಯಾಟರ್‌ಗಳ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು. “ಬೌಲರ್‌ಗಳು ಎದುರಾಳಿಗಳನ್ನು 166 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಅದ್ಭುತ ಕೆಲಸ ಮಾಡಿದ್ದರು. ನಮ್ಮಲ್ಲಿರುವಂತಹ ಪ್ರತಿಭಾವಂತ ಬ್ಯಾಟಿಂಗ್ ಪಡೆಯು ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬೇಕಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಗೆದ್ದಿರಬಹುದು. ಆದರೆ ಆಡಿದ ರೀತಿಗೆ ನಾವು ಈ ಗೆಲುವಿಗೆ ಅರ್ಹರಲ್ಲ. ಪರಿಸ್ಥಿತಿ ಯಾವುದೇ ಇರಲಿ, ಇಂತಹ ಮೊತ್ತವನ್ನು ನಾವು ಸುಲಭವಾಗಿ ಚೇಸ್ ಮಾಡಬೇಕಿತ್ತು,” ಎಂದರು.
ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಐಪಿಎಲ್ನಿಂದ 2 ತಂಡಗಳು ಔಟ್!
ಅಂದರೆ ಅದ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಸುಲಭ ಗುರಿಯನ್ನು ಕೊನೆಯ ಎಸೆತದಲ್ಲಿ ಚೇಸ್ ಮಾಡಿ ಗೆದ್ದಿರುವುದು ನಮ್ಮ ಬ್ಯಾಟಿಂಗ್ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಈ ಪಂದ್ಯವನ್ನು ನಾವು ಗೆದ್ದರೂ, ನಾವು ಆಡಿದ ರೀತಿಗೆ ಈ ಗೆಲುವಿಗೆ ನಾವು ಅರ್ಹರಲ್ಲ ಎಂಬುದನ್ನು ರಜತ್ ಪಾಟಿದಾರ್ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ, ರಜತ್ ಪಾಟಿದಾರ್ ಅವರ ಈ ನೇರ ನುಡಿಗಳು ತಂಡದಲ್ಲಿನ ಆತ್ಮಾವಲೋಕನದ ಅಗತ್ಯತೆಯನ್ನು ಎತ್ತಿ ತೋರಿಸಿವೆ. ಗೆಲುವಿನ ಸಂಭ್ರಮದ ನಡುವೆಯೂ ತಪ್ಪುಗಳನ್ನು ತಿದ್ದಿಕೊಳ್ಳುವ ಅವರ ಈ ನಡೆ ಮುಂಬರುವ ಪಂದ್ಯಗಳಲ್ಲಿ ತಂಡಕ್ಕೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 7:55 am, Mon, 11 May 26