Rajeshwari Gayakwad: ಸೂಪರ್ ಮಾರ್ಕೆಟ್ನಲ್ಲಿ ಹಲ್ಲೆ ಮಾಡಿದ ರಾಜೇಶ್ವರಿ ಗಾಯಕ್ವಾಡ್; ದಾಂದಲೆ ವಿಡಿಯೋ ವೈರಲ್
ಉಮದಿ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ, ಅವರ ಪುತ್ರ ಪ್ರಶಾಂತ ಹಾಗೂ ಕೆಲಸಗಾರರ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಹಲ್ಲೆ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ವಿಜಯಪುರ (ಡಿ. 01): ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಹಾಗೂ ಬೆಂಬಲಿಗರು ನಗರದ ಉಮದಿ ಸೂಪರ್ ಬಜಾರಿನಲ್ಲಿ ಗಲಾಟೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಿಜಯಪುರ (Vijayapura) ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಉಮದಿ ಸೂಪರ್ ಮಾರ್ಕೆಟ್ (Super Market) ಮಾಲೀಕ ಮಲ್ಲಿಕಾರ್ಜುನ, ಅವರ ಪುತ್ರ ಪ್ರಶಾಂತ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬುಧವಾರ ಸಂಜೆ ಸ್ನೇಹಿತೆಯೊಂದಿಗೆ ರಾಜೇಶ್ವರಿ ಉಮದಿ ಸೂಪರ್ ಬಜಾರಿಗೆ ಬಂದಿದ್ದರು. ಈ ಸಂದರ್ಭ ಕಾಸ್ಮೆಟಿಕ್ ಖರೀಧಿ ಮಾಡುವ ವೇಳೆ ಕೆಲಸಗಾರರು ಹಾಗೂ ರಾಜೇಶ್ವರಿ ಗಾಯಕ್ವಾಡ್ ಮದ್ಯೆ ಮಾತಿನ ಚಕಮಕಿ ನಡೆದಿದೆ. ಕಾಸ್ಮೆಟಿಕ್ ಬಾಟಲ್ಗಳನ್ನು ತೆರೆದು ನೋಡುತ್ತಿದ್ದ ರಾಜೇಶ್ವರಿ ಅವರಿಗೆ ಅಲ್ಲಿನ ಮಹಿಳಾ ಕೆಲಸಗಾರರು ಪ್ರಶ್ನೆ ಮಾಡಿದ್ದಾರೆ. ಕಾಸ್ಮೆಟಿಕ್ ಬಾಟಲ್ಗಳನ್ನು ಓಪನ್ ಮಾಡಬೇಡಿ. ಓಪನ್ ಮಾಡಿದ ಬಾಟಲ್ಗಳನ್ನು ಬೇರೆಯವರು ಖರೀಧಿ ಮಾಡಲ್ಲಾ ಎಂದಿದ್ದಾರೆ. ಈ ವಿಚಾರಕ್ಕೆ ಗಲಾಟೆ ನಡೆದಿದೆ.
ಈ ಸಂದರ್ಭ ಸೂಪರ್ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಆಗಮಿಸಿ ಕಾಸ್ಮೆಟಿಕ್ ಬಾಟಲ್ ಓಪನ್ ಮಾಡಬೇಡಿ. ಓಪನ್ ಮಾಡಿಯೇ ಖರೀದಿ ಮಾಡೋದಾದರೆ ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲಾ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಜೇಶ್ವರಿ ಗಾಯಕ್ವಾಡ್ ಏರು ಧ್ವನಿಯಲ್ಲಿ ಮಾತನಾಡಿ ಬೆಂಬಲಿಗರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರಂತೆ. 8 ರಿಂದ 10 ಜನ ಯುವಕರು ಆಗಮಿಸಿ ಸೂಪರ್ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಹಾಗೂ ಅವರ ಪುತ್ರ ಪ್ರಶಾಂತ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಶಾಂತ ಉಮದಿ ಕೈಗೆ, ತೋಳು ಹಾಗೂ ಬೆನ್ನಿಗೆ ಗಾಯವಾಗಿದೆಯಂತೆ.
IND vs BAN; ನ್ಯೂಜಿಲೆಂಡ್ ಪ್ರವಾಸ ಮುಗಿಯಿತು: ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಮಾಹಿತಿ
ಹಲ್ಲೆ ಮಾಡಿ ರಾಜೇಶ್ವರಿ ಹಾಗೂ ಸಹಚಚರು ಅಲ್ಲಿಂದ ತೆರಳಿದ್ದಾರೆ. ಗಲಾಟೆ ಹಾಗೂ ಹಲ್ಲೆಯ ವಿಡಿಯೋ ಸೂಪರ್ ಬಜಾರಿನಲ್ಲಿರುವ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಸುದ್ದಿ ತಿಳಿದ ಆದರ್ಶ ನಗರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಯತೀಶ್ ಹಾಗೂ ಇತರರು ಆಗಮಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಆದರೆ ಘಟನೆ ಕುರಿತು ಉಮದಿ ಸೂಪರ್ ಬಜಾರಿ ಮಾಲೀಕ ಮಲ್ಲಿಕಾರ್ಜುನ ಹಾಗೂ ಅವರ ಪುತ್ರ ಪ್ರಶಾಂತ ದೂರು ನೀಡಿಲ್ಲಾ.
ಈ ಘಟನೆಯ ಬಗ್ಗೆ ಹೇಳಿಕೆ ನೀಡದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರು ಗಾಯಕ್ವಾಡ್, ದಾಂದಲೆ ಹಾಗೂ ಹಲ್ಲೆ ಮಾಡಿರೋ ಆರೋಪವನ್ನು ನಿರಾಕರಿಸಿದ್ದಾರೆ. ಉಜಮದಿ ಸೂಪರ್ ಬಜಾರಿನ ಕೆಲಸಗಾರರೇ ನನ್ನ ಜೊತೆಗೆ ವಾಗ್ವಾದ ನಡೆಸಿ ಅನುಚಿತವಾಗಿ ವರ್ತನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಹೆಚ್ಚಿನ ಕ್ರೀಡಾ ಸುದದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:32 am, Thu, 1 December 22