Ranji Trophy 2023: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ
Ranji Trophy 2023 Quarterfinals Schedule: ಜನವರಿ 31 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ ವಿರುದ್ಧ ಆಡಲಿದೆ. ಮೊದಲ ಸುತ್ತಿನಲ್ಲಿ ಗೆದ್ದು ನಾಕೌಟ್ ಹಂತಕ್ಕೇರಿದ ತಂಡಗಳು ಈ ಕೆಳಗಿನಂತಿವೆ.
Ranji Trophy: 2022/23 ರ ರಣಜಿ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. ಮುಂಬೈ-ಮಹಾರಾಷ್ಟ್ರ ನಡುವಣ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯಗೊಂಡಿದ್ದು, ಹೀಗಾಗಿ ಬಿ ಗುಂಪಿನಿಂದ ಆಂಧ್ರಪ್ರದೇಶ ತಂಡ ನಾಕೌಟ್ ಹಂತಕ್ಕೇರಿದೆ. ಹಾಗೆಯೇ ತಮಿಳುನಾಡು ವಿರುದ್ಧ ಕೊನೆಯ ಪಂದ್ಯದಲ್ಲಿ ಸೋತರೂ ಸೌರಾಷ್ಟ್ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಜಾರ್ಖಂಡ್ ವಿರುದ್ಧ ಗೆದ್ದಿರುವ ಕರ್ನಾಟಕ ತಂಡ ಕೂಡ ಮುಂದಿನ ಹಂತಕ್ಕೇರಿದೆ. ಅದರಂತೆ ಜನವರಿ 31 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ ವಿರುದ್ಧ ಆಡಲಿದೆ. ಮೊದಲ ಸುತ್ತಿನಲ್ಲಿ ಗೆದ್ದು ನಾಕೌಟ್ ಹಂತಕ್ಕೇರಿದ ತಂಡಗಳು ಈ ಕೆಳಗಿನಂತಿವೆ.
- ಎಲೈಟ್ ಗ್ರೂಪ್ ಎ: ಬಂಗಾಳ ಮತ್ತು ಉತ್ತರಾಖಂಡ್
- ಎಲೈಟ್ ಗ್ರೂಪ್ ಬಿ: ಸೌರಾಷ್ಟ್ರ ಮತ್ತು ಆಂಧ್ರಪ್ರದೇಶ
- ಎಲೈಟ್ ಗ್ರೂಪ್ ಸಿ: ಕರ್ನಾಟಕ ಮತ್ತು ಜಾರ್ಖಂಡ್
- ಎಲೈಟ್ ಗ್ರೂಪ್ ಡಿ: ಮಧ್ಯಪ್ರದೇಶ ಮತ್ತು ಪಂಜಾಬ್
ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ:
- ಜನವರಿ 31- ಬಂಗಾಳ (A1) ವಿರುದ್ಧ ಜಾರ್ಖಂಡ್ (C2) -ಈಡನ್ ಗಾರ್ಡನ್ಸ್, ಕೋಲ್ಕತ್ತಾ
- ಜನವರಿ 31 – ಸೌರಾಷ್ಟ್ರ (B1) v ಪಂಜಾಬ್ (D2)- ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ರಾಜ್‌ಕೋಟ್
- ಜನವರಿ 31- ಕರ್ನಾಟಕ (C1) v ಉತ್ತರಾಖಂಡ್ (A2) – ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
- ಜನವರಿ 31- ಮಧ್ಯಪ್ರದೇಶ (D1) ವಿರುದ್ಧ ಆಂಧ್ರಪ್ರದೇಶ (B2)- ಹೋಲ್ಕರ್ ಕ್ರೀಡಾಂಗಣ, ಇಂದೋರ್.
- ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಫೆಬ್ರವರಿ 8 ಮತ್ತು ಫೆಬ್ರವರಿ 16 ರಿಂದ ಪ್ರಾರಂಭವಾಗಲಿದೆ.
ಕರ್ನಾಟಕ ರಣಜಿ ತಂಡ ಹೀಗಿದೆ:
ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಮನೀಶ್ ಪಾಂಡೆ , ನಿಕಿನ್ ಜೋಸ್ , ಶರತ್ ಬಿಆರ್ ( ವಿಕೆಟ್ ಕೀಪರ್ ) , ಶುಭಾಂಗ್ ಹೆಗ್ಡೆ , ಕೃಷ್ಣಪ್ಪ ಗೌತಮ್ , ವಾಸುಕಿ ಕೌಶಿಕ್ , ಶ್ರೇಯಸ್ ಗೋಪಾಲ್ , ವಿಧ್ವತ್ ಕಾವೇರಪ್ಪ, ವಿಜಯ್‌ಕುಮಾರ್ ವೈಶಾಖ್ , ರೋನಿತ್ ಮೋರೆ , ಶ್ರೀನಿವಾಸ್ ಶರತ್ , ಕೃಷ್ಣಮೂರ್ತಿ ಸಿದ್ಧಾರ್ಥ್ , ವಿಶಾಲ್ ಓನಾಟ್.
Published On - 4:10 pm, Sun, 29 January 23