Ranji Trophy 2024: ನಾಗಾಲ್ಯಾಂಡ್ ವಿರುದ್ಧ ಹೈದರಾಬಾದ್ಗೆ ಅಮೋಘ ಜಯ
Ranji Trophy 2024: ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ರಾಹುಲ್ ಸಿಂಗ್ 157 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ 214 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ತಿಲಕ್ ವರ್ಮಾ 112 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.
Ranji Trophy 2024: ದಿಮಾಪುರ್ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಡೆದ ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹೈದರಾಬಾದ್ (Hyderabad) ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ 80 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಬಂದ ರಾಹುಲ್ ಸಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ ರಾಹುಲ್ ಸಿಂಗ್ ನಾಗಾಲ್ಯಾಂಡ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈಯ್ಯುವ ಮೂಲಕ ಭರ್ಜರಿ ಶತಕ ಪೂರೈಸಿದರು.
ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ರಾಹುಲ್ ಸಿಂಗ್ 157 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ 214 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ತಿಲಕ್ ವರ್ಮಾ 112 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.
ಅಂತಿಮವಾಗಿ ಹೈದರಾಬಾದ್ ತಂಡವು 5 ವಿಕೆಟ್ ನಷ್ಟಕ್ಕೆ 474 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ನಾಗಾಲ್ಯಾಂಡ್ ತಂಡವು ತನಯ್ ತ್ಯಾಗರಾಜನ್ ದಾಳಿಗೆ ತತ್ತರಿಸಿತು. ಪರಿಣಾಮ ನಾಗಾಲ್ಯಾಂಡ್ ಕೇವಲ 153 ರನ್ಗಳಿಗೆ ಆಲೌಟ್ ಆಗಿದೆ. ಹೈದರಾಬಾದ್ ಪರ ತ್ಯಾಗರಾಜನ್ ಕೇವಲ 43 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಕೇವಲ 153 ರನ್ಗಳಿಗೆ ಆಲೌಟ್ ಆದ ನಾಗಾಲ್ಯಾಂಡ್ ಮೇಲೆ ಫಾಲೋಆನ್ ಹೇರಿದ ಹೈದರಾಬಾದ್ ತಂಡವು ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಿತು. ಈ ಬಾರಿ ಕೂಡ ನಾಗಾಲ್ಯಾಂಡ್ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಅಲ್ಲದೆ ಕೇವಲ 127 ರನ್ಗಳಿಗೆ ಆಲೌಟ್ ಆಗಿ 194 ರನ್ಗಳ ಹೀನಾಯ ಸೋಲನುಭವಿಸಿದೆ. ಈ ಅಮೋಘ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಈ ಬಾರಿಯ ರಣಜಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ನಾಗಾಲ್ಯಾಂಡ್ ಪ್ಲೇಯಿಂಗ್ 11: ರೊಂಗ್ಸೆನ್ ಜೊನಾಥನ್ (ನಾಯಕ) , ಇಮ್ಲಿವಾಟಿ ಲೆಮ್ತೂರ್ , ಸುಮಿತ್ ಕುಮಾರ್ (ವಿಕೆಟ್ ಕೀಪರ್) , ಜೋಶುವಾ ಒಜುಕುಮ್ , ತಹಮೀದ್ ರೆಹಮಾನ್ , ಜಗನಾಥ್ ಸಿನಿವಾಸ್ , ಸೆಡೆಝಾಲೀ ರುಪೆರೊ , ನ್ಜಾಂತುಂಗ್ ಮೊಝುಯಿ , ಕ್ರಿವಿಟ್ಸೊ ಕೆನ್ಸ್ , ನಾಗಹೊ ಚಿಶಿ , ಕರಣ್ ತೆವಾಟಿಯಾ.
ಇದನ್ನೂ ಓದಿ: IPL 2024: RCB ಬೌಲಿಂಗ್ ಲೈನಪ್ ಹೇಗಿದೆ? ಮೋಯೆ ಮೋಯೆ ಎಂದ ಚಹಲ್..!
ಹೈದರಾಬಾದ್ ಪ್ಲೇಯಿಂಗ್ 11: ತನ್ಮಯ್ ಅಗರ್ವಾಲ್ , ರೋಹಿತ್ ರಾಯುಡು , ಜಿ. ರಾಹುಲ್ ಸಿಂಗ್ , ತಿಲಕ್ ವರ್ಮಾ (ನಾಯಕ) , ಚಂದನ್ ಸಹಾನಿ , ಪ್ರಗ್ನಯ್ ರೆಡ್ಡಿ (ವಿಕೆಟ್ ಕೀಪರ್) , ತೆಲುಕುಪಲ್ಲಿ ರವಿ ತೇಜ , ತನಯ್ ತ್ಯಾಗರಾಜನ್ , ಚಾಮ ವಿ ಮಿಲಿಂದ್ , ಎಲ್ಲಿಗರಂ ಸಂಕೇತ್ , ಕಾರ್ತಿಕೇಯ ಕಾಕ್.