Ranji Trophy 2024: ಕರ್ನಾಟಕ ಬೆಂಕಿ ಬೌಲಿಂಗ್ಗೆ ತಮಿಳುನಾಡು ತತ್ತರ
Tamil Nadu vs Karnataka: ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ನೆರವಿನಿಂದ ಕರ್ನಾಟಕ ತಂಡ ಬೃಹತ್ ಮೊತ್ತ ಪೇರಿಸಿದೆ. ಇದಕ್ಕೆ ಪ್ರತಿಯಾಗಿ ಪ್ರಥಮ ಇನಿಂಗ್ಸ್ ಆಡಿದ ತಮಿಳುನಾಡು ತಂಡವು ವಿಜಯಕುಮಾರ್ ವೈಶಾಕ್ ಹಾಗೂ ಶಶಿಕುಮಾರ್ ದಾಳಿಗೆ ತತ್ತರಿಸಿದೆ.

ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ (Ranji Trophy 2024) ತಮಿಳುನಾಡು ವಿರುದ್ಧ ಕರ್ನಾಟಕ ಬೌಲರ್ಗಳ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ ಉತ್ತಮ ಆರಂಭ ಒದಗಿಸಿದ್ದರು.
ಮಯಾಂಕ್ ಅಗರ್ವಾಲ್ (20) ಜೊಗೆಗೂಡಿ ಇನಿಂಗ್ಸ್ ಶುರು ಮಾಡಿದ ರವಿಕುಮಾರ್ ಸಮರ್ಥ್ 5 ಫೋರ್ಗಳೊಂದಿಗೆ 57 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 218 ಎಸೆತಗಳಲ್ಲಿ 12 ಫೋರ್ ಹಾಗೂ 6 ಭರ್ಜರಿ ಸಿಕ್ಸರ್ಗಳೊಂದಿಗೆ 151 ರನ್ ಸಿಡಿಸಿದರು.
ಹಾಗೆಯೇ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ರಾಜ್ (51) ಅರ್ಧಶತಕ ಬಾರಿಸಿದರೆ, ಶ್ರೀನಿವಾಸ್ ಶರತ್ 45 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 366 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡಕ್ಕೆ ನಾರಾಯಣ್ ಜಗದೀಸನ್ ಉತ್ತಮ ಆರಂಭ ಒದಗಿಸಿದರೂ ಉಳಿದವರಿಂದ ಸಾಥ್ ಸಿಕ್ಕಿರಲಿಲ್ಲ. ಇತ್ತ ಆರಂಭದಲ್ಲೇ ವಿಮಲ್ ಕುಮಾರ್ (14) ವಿಕೆಟ್ ಪಡೆದು ಹಾರ್ದಿಕ್ ರಾಜ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪ್ರದೋಶ್ (5) ಹಾಗು ಜಗದೀಸನ್ (40) ವಿಕೆಟ್ ಕಬಳಿಸಿ ಶಶಿಕುಮಾರ್ ತಮಿಳುನಾಡು ತಂಡಕ್ಕೆ ಆಘಾತ ನೀಡಿದರು.
ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ವಿಜಯಕುಮಾರ್ ವೈಶಾಕ್ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಅತ್ತ ಶಶಿಕುಮಾರ್ ವಿಕೆಟ್ ಕಬಳಿಸುತ್ತಿದ್ದರೆ, ಇತ್ತ ವೈಶಾಕ್ ತಮಿಳುನಾಡು ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ತಮಿಳುನಾಡು ತಂಡವು ಮೊದಲ ಇನಿಂಗ್ಸ್ನಲ್ಲಿ 151 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ತಂಡ 215 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಕರ್ನಾಟಕ ಪರ ಬಿಗುವಿನ ದಾಳಿ ಸಂಘಟಿಸಿದ ವಿಜಯಕುಮಾರ್ ವೈಶಾಕ್ 12.2 ಓವರ್ಗಳಲ್ಲಿ ಕೇವಲ 24 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶಶಿಕುಮಾರ್ 41 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಹಾರ್ದಿಕ್ ರಾಜ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ತಮಿಳುನಾಡು ಪ್ಲೇಯಿಂಗ್ 11: ಸುರೇಶ್ ಲೋಕೇಶ್ವರ್ , ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್) , ಪ್ರದೋಶ್ ಪೌಲ್ , ಬಾಬಾ ಇಂದ್ರಜಿತ್ , ವಿಜಯ್ ಶಂಕರ್ , ವಿಮಲ್ ಖುಮಾರ್ , ಬೂಪತಿ ಕುಮಾರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮುಹಮ್ಮದ್ , ಸಂದೀಪ್ ವಾರಿಯರ್.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ರಿಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ
ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಹಾರ್ದಿಕ್ ರಾಜ್ , ಕಿಶನ್ ಬೇಡರೆ , ಶಶಿ ಕುಮಾರ್ ಕೆ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
Published On - 11:14 am, Sun, 11 February 24




