ಪಿಎಸ್​ಎಲ್ ಬಳಿಕ ಐಪಿಎಲ್ 2024 ರಿಂದಲೂ ರಶೀದ್ ಖಾನ್ ಔಟ್?: ಏನಾಗಿದೆ ಅಫ್ಘಾನ್ ಸ್ಪಿನ್ನರ್​ಗೆ?

Rashid Khan Injury: ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರು ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಪುನಶ್ಚೇತನಗೊಳ್ಳುತ್ತಿರುವ ಕಾರಣ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಆದರೆ, ಇವರು ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಫಿಟ್ ಆಗುತ್ತಾರ ಎಂಬುದು ಪ್ರಶ್ನೆ ಮೂಡಿದೆ.

ಪಿಎಸ್​ಎಲ್ ಬಳಿಕ ಐಪಿಎಲ್ 2024 ರಿಂದಲೂ ರಶೀದ್ ಖಾನ್ ಔಟ್?: ಏನಾಗಿದೆ ಅಫ್ಘಾನ್ ಸ್ಪಿನ್ನರ್​ಗೆ?
Rashid Khan
Follow us
Vinay Bhat
|

Updated on: Jan 26, 2024 | 10:56 AM

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಫೆಬ್ರವರಿ 17 ರಿಂದ ಪ್ರಾರಂಭವಾಗುವ ಪಾಕಿಸ್ತಾನ್ ಸೂಪರ್ ಲೀಗ್ (PSL) ನ ಮುಂಬರುವ ಋತುವಿನಿಂದ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ವಿರುದ್ಧ ಟಿ20I ಸರಣಿಯನ್ನು ಕೂಡ ಕಳೆದುಕೊಂಡಿದ್ದ ರಶೀದ್, ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಿಂದ ಅಫ್ಘಾನಿಸ್ತಾನ ಹೊರಬಿದ್ದ ಬಳಿಕ ಇವರು ಒಂದೇ ಒಂದು ಪಂದ್ಯವನ್ನು ಆಡಿಲ್ಲ.

ರಶೀದ್ ಖಾನ್ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಲಾಹೋರ್ ಖಲಂದರ್‌ ತಂಡವನ್ನು ಪ್ರತಿನಿಧಿಸುತ್ತಾರೆ. ಈ ತಂಡ 2022 ಮತ್ತು 2023 ರಲ್ಲಿ ಚಾಂಪಿಯನ್ ಆಗಿತ್ತು. ಪ್ರಶಸ್ತಿ ಗೆಲ್ಲಲು ರಶೀದ್ ಖಾನ್ ಪ್ರಮುಖ ಪಾತ್ರವಹಿಸಿದ್ದರು. ಡಿಸೆಂಬರ್‌ನಲ್ಲಿ ಡ್ರಾಫ್ಟ್‌ಗೆ ಮುಂಚಿತವಾಗಿ ರಶೀದ್‌ ಅವರನ್ನು ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿತ್ತು. ಆದರೀಗ ಇವರು ಸಂಪೂರ್ಣ ಟೂರ್ನಿಗೆ ಅಲಭ್ಯರಾಗಿದ್ದಾರೆ. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ಐಪಿಎಲ್ 2024 ವೇಳೆಗೆ ಕೂಡ ಇವರು ಫಿಟ್ ಆಗುವುದು ಅನುಮಾನ ಎಂಬ ಮಾತಿದೆ.

ICC Rankings: ನೂತನ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ 6ನೇ ಸ್ಥಾನದಿಂದ ಜಾರಿದ ಕೊಹ್ಲಿ; ಟಾಪ್ 10 ರಿಂದ ರೋಹಿತ್ ಔಟ್!

ಇದನ್ನೂ ಓದಿ
Image
ರೋಹಿತ್ ಬ್ಯಾಟಿಂಗ್ ಮಾಡುತ್ತಿರುವಾಗ ಮೈದಾನಕ್ಕೆ ಓಡಿ ಬಂದ ಕೊಹ್ಲಿ ಅಭಿಮಾನಿ
Image
ಔಟಾದ ನಂತರ ವಿಚಿತ್ರವಾಗಿ ನಗಲಾರಂಭಿಸಿದ ಬೆನ್ ಸ್ಟೋಕ್ಸ್: ವಿಡಿಯೋ ನೋಡಿ
Image
ಜೈಸ್ವಾಲ್ ಮೇಲೆ ನಿರೀಕ್ಷೆ: ರೋಚಕತೆ ಸೃಷ್ಟಿಸಿದ ಇಂದಿನ ಎರಡನೇ ದಿನದಾಟ
Image
ಟಿ20 ರ‍್ಯಾಂಕಿಂಗ್​ನಲ್ಲಿ 39 ಸ್ಥಾನಗಳ ಮುಂಬಡ್ತಿ ಪಡೆದ ರಿಂಕು ಸಿಂಗ್..!

ರಶೀದ್ ಖಾನ್ ಬಿಗ್ ಬ್ಯಾಷ್ ಲೀಗ್ ಮತ್ತು ಸೌತ್ ಆಫ್ರಿಕಾ20 ಯಿಂದ ಕೂಡ ಹೊರಬಂದಿದ್ದರು. ಅಫ್ಘಾನಿಸ್ತಾನದ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ರಶೀದ್ ಖಾನ್ ಪುನರಾಗಮನಕ್ಕೆ ಆತುರಪಡುವುದು ಬೇಡ ಎಂದು ಹೇಳಿದ್ದಾರೆ. “ಅವರು ಪ್ರಭಾವಿ ಆಟಗಾರ. ಆಟವಾಡಲು 100% ಸಿದ್ಧರಾಗಿದ್ದಾರೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಅವನು ಸಿದ್ಧವಾದಾಗ ಮಾತ್ರ ಮೈದಾನಕ್ಕೆ ಬರಬೇಕು. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು, ಆದರೆ ಯಾವುದೇ ಒತ್ತಡ ಮತ್ತು ಆತುರವಿಲ್ಲ,” ಎಂದು ಹೇಳಿದ್ದಾರೆ.

ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ರಶೀದ್ ಖಾನ್ ಸಂಪೂರ್ಣ ಫಿಟ್ ಆಗಲು ಕೆಲ ಸಮಯ ಬೇಕಾಗಿದೆ. ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ಆಡಲು ಲಭ್ಯವಿದ್ದಾರೆಯೆ ಎಂಬುದು ಖಚಿತವಾಗಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್