IND vs ENG 1st Test: ಔಟಾದ ನಂತರ ವಿಚಿತ್ರವಾಗಿ ನಕ್ಕ ಬೆನ್ ಸ್ಟೋಕ್ಸ್: ಇಂಗ್ಲೆಂಡ್ ನಾಯಕನಿಗೆ ಏನಾಯಿತು?

Ben Stokes Bowled: ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಇನ್ನಿಂಗ್ಸ್ ಕೇವಲ 246 ರನ್‌ಗಳಿಗೆ ಅಂತ್ಯವಾಯಿತು. ಇಂಗ್ಲೆಂಡ್ ತಂಡ ಈ ಸ್ಕೋರ್ ತಲುಪಲು ಬಹುದೊಡ್ಡ ಪಾತ್ರವನ್ನು ವಹಿಸಿದ್ದು ನಾಯಕ ಬೆನ್ ಸ್ಟೋಕ್ಸ್. ಆದರೆ, ಸ್ಟೋಕ್ಸ್ ಔಟಾದಾಗ ವಿಚಿತ್ರ ಘಟನೆ ಸಂಭವಿಸಿತು. ಬುಮ್ರಾ ಬೌಲಿಂಗ್​ನಲ್ಲಿ ಬೌಲ್ಡ್ ಆದಾಗ ಏನಾಯಿತು ನೋಡಿ.

IND vs ENG 1st Test: ಔಟಾದ ನಂತರ ವಿಚಿತ್ರವಾಗಿ ನಕ್ಕ ಬೆನ್ ಸ್ಟೋಕ್ಸ್: ಇಂಗ್ಲೆಂಡ್ ನಾಯಕನಿಗೆ ಏನಾಯಿತು?
ben stokes bowled
Follow us
Vinay Bhat
|

Updated on: Jan 26, 2024 | 8:06 AM

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs England) ಭರ್ಜರಿ ಪ್ರದರ್ಶನ ತೋರುತ್ತಿದೆ. ಟಾಸ್ ಸೋತರೂ ಮೊದಲ ದಿನ ಯಶಸ್ಸು ಕಂಡ ರೋಹಿತ್ ಪಡೆ ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಆಲೌಟ್ ಮಾಡಿತು. ಭಾರತದ ಸ್ಪಿನ್ ದಾಳಿಗೆ ನಲುಗಿದ ಆಂಗ್ಲರು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. 127 ರನ್​ಗಳ ಹಿನ್ನಡೆಯಲ್ಲಿದೆ. 76 ರನ್ ಗಳಿಸಿರುವ ಜೈಸ್ವಾಲ್ ಮೇಲೆ ಎಲ್ಲರ ಕಣ್ಣಿದ್ದು ಎರಡನೇ ದಿನದಾಟ ರೋಚಕತೆ ಸೃಷ್ಟಿಸಿದೆ.

ಇಂಗ್ಲೆಂಡ್ ತಂಡವು ನಿರೀಕ್ಷೆಗೆ ತಕ್ಕಂತಹ ಸ್ಕೋರ್ ತಲುಪಲು ಸಾಧ್ಯವಾಗಲಿಲ್ಲ. ನಾಯಕ ಬೆನ್ ಸ್ಟೋಕ್ಸ್ ಮಾತ್ರ 70 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರು ಔಟಾದಾಗ ಇಂಗ್ಲೆಂಡ್ ಕೂಡ ಆಲೌಟ್ ಆಯಿತು. ಆದರೆ, ಸ್ಟೋಕ್ಸ್ ಔಟ್ ಆದ ಸಂದರ್ಭ ವಿಚಿತ್ರವಾಗಿ ನಗುತ್ತ ಪೆವಿಲಿಯನ್ ಕಡೆ ಹೊರಟಿದ್ದು ಕಂಡುಬಂತು.

ಇದನ್ನೂ ಓದಿ
Image
ಜೈಸ್ವಾಲ್ ಮೇಲೆ ನಿರೀಕ್ಷೆ: ರೋಚಕತೆ ಸೃಷ್ಟಿಸಿದ ಇಂದಿನ ಎರಡನೇ ದಿನದಾಟ
Image
ಟಿ20 ರ‍್ಯಾಂಕಿಂಗ್​ನಲ್ಲಿ 39 ಸ್ಥಾನಗಳ ಮುಂಬಡ್ತಿ ಪಡೆದ ರಿಂಕು ಸಿಂಗ್..!
Image
6ನೇ ಸ್ಥಾನದಿಂದ ಜಾರಿದ ಕೊಹ್ಲಿ; ಟಾಪ್ 10 ರಿಂದ ರೋಹಿತ್ ಔಟ್!
Image
ಐರ್ಲೆಂಡ್ ವಿರುದ್ಧ 201 ರನ್‌ಗಳ ಬೃಹತ್ ಜಯ ಸಾಧಿಸಿದ ಭಾರತ ಯುವ ಪಡೆ

ಇಂಗ್ಲೆಂಡ್ ತಂಡ ತನ್ನ ‘ಬೇಸ್ ಬಾಲ್ ಶೈಲಿ’ಯಲ್ಲಿ ಬ್ಯಾಟಿಂಗ್ ಮಾಡುತ್ತದೆ, ಅದು ಅವರಿಗೆ ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಒಂದುಕಡೆ ಭಾರತದ ಸ್ಪಿನ್ನರ್‌ಗಳು ತಮ್ಮ ಮ್ಯಾಜಿಕ್ ತೋರಿಸುತ್ತಿದ್ದರೆ ಸ್ಟೋಕ್ಸ್ ಮಾತ್ರ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಆಕ್ರಮಣಕಾರಿ ಆಟ ಆಡಿದರು. ಭಾರತೀಯ ಸ್ಪಿನ್ನರ್​ಗಳು ಇವರ ವಿಕೆಟ್ ಪಡೆಯಲು ವಿಫಲರಾದರು. ಸ್ಟೋಕ್ಸ್ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಬೌಂಡರಿಗಳನ್ನು ಗಳಿಸಿದರು. ತಂಡದ ಮೊತ್ತವನ್ನು 250 ರ ಸಮೀಪಕ್ಕೆ ಕೊಂಡೊಯ್ದರು.

ICC Awards 2023: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಉಸ್ಮಾನ್ ಖವಾಜಾ..!

ಸ್ಟೋಕ್ಸ್ ಔಟ್ ಮಾಡಲು ಭಾರತ ನಾನಾ ಪ್ರಯತ್ನ ನಡೆಸಿತು. ಆದರೆ, ಇದರಲ್ಲಿ ಯಶಸ್ಸು ಕಂಡಿದ್ದು ಉಪನಾಯಕ ಜಸ್​ಪ್ರಿತ್ ಬುಮ್ರಾ. ಸ್ಪಿನ್ನರ್​ಗಳ ಪ್ರಾಬಲ್ಯದ ನಡುವೆ ಬುಮ್ರಾ ಇಂಗ್ಲೆಂಡ್ ಇನ್ನಿಂಗ್ಸ್ ಅಂತ್ಯಗೊಳಿಸಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. 65ನೇ ಓವರ್‌ನ ಮೂರನೇ ಎಸೆತದಲ್ಲಿ ಬುಮ್ರಾ ಮಿಡಲ್ ಸ್ಟಂಪ್‌ ಲೈನ್‌ನಲ್ಲಿ ಚೆಂಡನ್ನು ಹಾಕಿ ಸ್ಟೋಕ್ಸ್ ಅವರನ್ನು ಬೌಲ್ಡ್ ಮಾಡಿದರು. ಲೆಗ್ ಸ್ಟಂಪ್ ಕಡೆಗೆ ಚೆಂಡು ಬರುತ್ತದೆ ಅಂದುಕೊಂಡು ವಿಕೆಟ್ ಬಿಟ್ಟು ನಿಂತಿದ್ದ ಸ್ಟೋಕ್ಸ್​ಗೆ ಶಾಕ್ ಆಯಿತು. ಚೆಂಡು ಸ್ವಿಂಗ್ ಆದ ಪರಿಣಾಮ ಬೌಲ್ಡ್ ಆದರು.

ಇದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಅಂತ್ಯಗೊಂಡಿತು. ವಿಕೆಟ್ ಪಡೆದ ನಂತರ ಬುಮ್ರಾ ಮುಗುಳ್ನಗುತ್ತಾ ಸಂಭ್ರಮಿಸಿದರೆ ಅತ್ತ ಸ್ಟೋಕ್ಸ್ ಕೂಡ ತನ್ನ ನಗುವನ್ನು ಮರೆಮಾಚದೆ ಬುಮ್ರಾ ತಂತ್ರವನ್ನು ಅರಿಯಲು ವಿಫಲನಾದೆ ಎಂದು ಒಪ್ಪಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?