Ravindra Jadeja: ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿರುವ ರವೀಂದ್ರ ಜಡೇಜಾ

Ravindra Jadeja: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ರವೀಂದ್ರ ಜಡೇಜಾ ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ಅಥವಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡದೇ ಸರ್ಕಾರದ ಪಿಪಿಎಫ್ ಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದೇ ವಿಶೇಷ.

Ravindra Jadeja: ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿರುವ ರವೀಂದ್ರ ಜಡೇಜಾ
Ravindra Jadeja
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 06, 2022 | 10:04 PM

ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ (Ravindra Jadeja) ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಇದಾಗ್ಯೂ ಅವರ ಅವರ ಸಂಪತ್ತು, ಹೂಡಿಕೆ ಮತ್ತು ಆದಾಯದ ಮೂಲಗಳು ಯಾವುವು ಎಂಬುದರ ಮಾಹಿತಿ ಎಲ್ಲೂ ಹೊರಬಿದ್ದಿರಲಿಲ್ಲ. ಆದರೀಗ ಜಡೇಜಾ ಅವರ ಸಂಪತ್ತೆಷ್ಟು, ಅವರು ಎಲ್ಲೆಲ್ಲಾ ಹೂಡಿಕೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಬಹಿರಂಗವಾಗಿದೆ. ಇದಕ್ಕೆ ಕಾರಣ ಅವರ ಪತ್ನಿ ರಿವಾಬಾ ರವೀಂದ್ರಸಿನ್ಹ್ ಸೋಲಂಕಿ ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದು. ಜಾಮ್‌ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಜಡೇಜಾ ಅವರ ಒಟ್ಟು ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ.

ಅದರಂತೆ ರವೀಂದ್ರ ಜಡೇಜಾ ಅವರ ಒಟ್ಟು ಆಸ್ತಿ ಮೌಲ್ಯ 97,35,59,222 ರೂ. ಹಾಗೆಯೇ ಹಲವು ದುಬಾರಿ ಕಾರುಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಮತ್ತೊಂದು ಆಸಕ್ತಿಕರ ವಿಚಾರವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಡೇಜಾ ಅವರು ಹೂಡಿಕೆ ಮಾಡಿರುವ ಕ್ಷೇತ್ರ.

ಸಾಮಾನ್ಯವಾಗಿ ಶ್ರೀಮಂತರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ರವೀಂದ್ರ ಜಡೇಜಾ ಹೂಡಿಕೆ ಮಾಡಿರುವುದು ಅಂಚೆ ಕಚೇರಿಯ ಪಿಪಿಎಫ್ ಯೋಜನೆಯಲ್ಲಿ ಎಂಬುದು ವಿಶೇಷ. ಪತ್ನಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರವೀಂದ್ರ ಜಡೇಜಾ ಅವರು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಯೋಜನೆಯು ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಇದರಲ್ಲಿ ಜಡೇಜಾ 2 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ
Image
IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
Image
IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!
Image
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
Image
New Record: ಅತ್ಯಧಿಕ ಟೆಸ್ಟ್ ಶತಕ: ಕೊಹ್ಲಿ, ರೂಟ್​ರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ರವೀಂದ್ರ ಜಡೇಜಾ ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ಅಥವಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡದೇ ಸರ್ಕಾರದ ಪಿಪಿಎಫ್ ಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದೇ ವಿಶೇಷ.

ಪಿಪಿಎಫ್ ಯೋಜನೆಯ ವಿಶೇಷಗಳೇನು?

  • ಭಾರತ ಸರ್ಕಾರದಿಂದ ಬೆಂಬಲಿತವಾದ PF ಯೋಜನೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
  • ಈ ಪೋಸ್ಟ್ ಆಫೀಸ್ ಯೋಜನೆಯು ವಾರ್ಷಿಕ 7.10 ಪ್ರತಿಶತ ಬಡ್ಡಿ ದರವನ್ನು ನೀಡುತ್ತದೆ.
  • PPF ಲಾಕ್-ಇನ್ ಅವಧಿಯು 15 ವರ್ಷಗಳು. 15 ವರ್ಷಗಳು ಪೂರ್ಣಗೊಂಡ ನಂತರ ಖಾತೆದಾರರು ಈ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು.
  • ಹೂಡಿಕೆ ಮಾಡಿದ ಮೊತ್ತ, ಗಳಿಸಿದ ಬಡ್ಡಿ ಮತ್ತು ಒಟ್ಟು ಮೆಚ್ಯೂರಿಟಿ ಮೊತ್ತ ತೆರಿಗೆ ಮುಕ್ತವಾಗಿರುತ್ತದೆ. ಅಂದರೆ ಈ ಯೋಜನೆಯಲ್ಲಿ ತೆರಿಗೆ ಉಳಿಸಬಹುದು.
  • 3 ವರ್ಷಗಳ ಬಳಿಕ ನೀವು ಹೂಡಿಕೆ ಮಾಡಿದ ಮೊತ್ತದ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಇನ್ನು ಈ ಖಾತೆದಾರರು ಮರಣ ಹೊಂದಿದರೆ ನಾಮಿನಿಗೆ ಮೊತ್ತವನ್ನು ಪಾವತಿಸಲಾಗುತ್ತದೆ.
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು