ಧೋನಿ ವಿರುದ್ದ KKR ಮಾಸ್ಟರ್​ ಸ್ಟ್ರೋಕ್: ಬರೀ ಶೋಆಫ್ ಎಂದ ರವೀಂದ್ರ ಜಡೇಜಾ

| Updated By: ಝಾಹಿರ್ ಯೂಸುಫ್

Updated on: Jan 09, 2022 | 7:28 PM

Ravindra jadeja: ಪ್ಯಾಟ್ ಕಮಿನ್ಸ್ ನಿಲ್ಲಿಸಿದ ಫೀಲ್ಡಿಂಗ್​ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋವನ್ನು ಮೀರಿಸುವಂತಹ ಮತ್ತೊಂದು ಚಿತ್ರವನ್ನು ಕೊಲ್ಕತ್ತಾ ನೈಟ್​ ರೈಡರ್ಸ್ ಹಂಚಿಕೊಂಡಿದೆ.

ಧೋನಿ ವಿರುದ್ದ KKR ಮಾಸ್ಟರ್​ ಸ್ಟ್ರೋಕ್: ಬರೀ ಶೋಆಫ್ ಎಂದ ರವೀಂದ್ರ ಜಡೇಜಾ
Ravindra jadeja
Follow us on

ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್​… ಸಿಡ್ನಿ ಮೈದಾನದಲ್ಲಿ ನಡೆದ ಅಂತಿಮ ಮೂರು ಓವರ್​ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು ಕೇವಲ 1 ವಿಕೆಟ್​ನ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ರಣ ರೋಚಕ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಆಸ್ಟ್ರೇಲಿಯಾ ತಂಡದ ನಾಯಕಪ್ಯಾಟ್ ಕಮ್ಮಿನ್ಸ್ ಚೆಂಡನ್ನು ಸ್ಟೀವ್ ಸ್ಮಿತ್‌ಗೆ ಹಸ್ತಾಂತರಿಸಿದರು. ಅಷ್ಟೇ ಅಲ್ಲದೆ ಫೀಲ್ಡಿಂಗ್ ಸೆಟ್ಟಿಂಗ್ ಬದಲಿಸಿದರು. ಒಂದು ವಿಕೆಟ್​ ಪಡೆಯಲು ಆಸ್ಟ್ರೇಲಿಯಾ ಆಟಗಾರರ ಪಿಚ್ ಭಾಗದಲ್ಲೇ ಫೀಲ್ಡಿಂಗ್​ನಲ್ಲಿ ನಿಂತರು. ಇದಾಗ್ಯೂ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಪ್ಯಾಟ್ ಕಮಿನ್ಸ್ ನಿಲ್ಲಿಸಿದ ಫೀಲ್ಡಿಂಗ್​ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋವನ್ನು ಮೀರಿಸುವಂತಹ ಮತ್ತೊಂದು ಚಿತ್ರವನ್ನು ಕೊಲ್ಕತ್ತಾ ನೈಟ್​ ರೈಡರ್ಸ್ ಹಂಚಿಕೊಂಡಿದೆ. ಈ ಮೂಲಕ ನಾವು ಟಿ20 ಕ್ರಿಕೆಟ್​ನಲ್ಲೇ ಇಂತಹ ಫೀಲ್ಡಿಂಗ್ ಸೆಟ್ ಮಾಡಿದ್ದೆವು ಎಂಬುದನ್ನು ಸಾರಿದ್ದಾರೆ.

ಈ ಫೋಟೋದಲ್ಲಿ ಪುಣೆ ಸೂಪರ್ ಜೈಂಟ್ಸ್​ ನಡುವಣ ಪಂದ್ಯದಲ್ಲಿ KKR ಆಟಗಾರರು ಸ್ಟ್ರೈಕ್​ನಲ್ಲಿದ್ದ ಧೋನಿ ಸುತ್ತಲೂ ನಿಂತಿದ್ದರು. ಪಿಯೂಷ್ ಚಾವ್ಲಾ ಅವರ ಬೌಲಿಂಗ್‌ ನಾಲ್ವರು ಆಟಗಾರರು ಕ್ರೀಸ್ ಪಕ್ಕದಲ್ಲೇ ಫೀಲ್ಡ್ ಮಾಡಿದ್ದರು. ಈ ಫೋಟೋವನ್ನು ಹಂಚಿಕೊಂಡಿರುವ ಕೆಕೆಆರ್ ಇದು​ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ತಂತ್ರವಾಗಿದ್ದರೆ, ನಮ್ಮ T20 ಮಾಸ್ಟರ್ ಸ್ಟ್ರೋಕ್ ಅನ್ನು ನೆನಪಿಸುತ್ತಿದೆ’ ಎಂದು ಬರೆದುಕೊಂಡಿದ್ದರು.

ಕೆಕೆಆರ್​ ತಂಡ ಈ ಪೋಸ್ಟ್ ನೋಡಿರುವ ಸಿಎಸ್​ಕೆ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಇದು ಮಾಸ್ಟರ್​ ಸ್ಟ್ರೋಕ್ ಏನಲ್ಲ, ಸುಮ್ಮನೆ ಶೋಆಫ್ ಎಂದು ಜಡೇಜಾ ಕೆಕೆಆರ್ ಪೋಸ್ಟ್​ ಅನ್ನು ಟ್ರೋಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಸ್​ಕೆ ಅಭಿಮಾನಿಗಳು ಕೂಡ ಕೆಕೆಆರ್​ ಪೋಸ್ಟ್ ಅನ್ನು ಕಿಚಾಯಿಸಿದ್ದಾರೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯೊಬ್ಬರು 2017 ರಲ್ಲಿ ಕೆಕೆಆರ್ ಮಾಲೀಕ ಶಾರೂಖ್ ಖಾನ್ ನೀಡಿರುವ ಹೇಳಿಕೆಯನ್ನೇ ಮುಂದಿಟ್ಟು ಟ್ರೋಲ್ ಮಾಡಿದ್ದಾರೆ. 2017 ರ ಹರಾಜಿನ ವೇಳೆ ಶಾರೂಖ್ ಖಾನ್ ನಾನು ನನ್ನ ಪೈಜಾಮಾವನ್ನು ಮಾರಾಟ ಮಾಡಿಯಾದರೂ ಧೋನಿಯನ್ನು ಖರೀದಿಸಲು ಬಯಸಿದ್ದೆ ಎಂಬ ಹೇಳಿಕೆ ನೀಡಿದ್ದರು. ಇದನ್ನೆ ಮುಂದಿಟ್ಟು ಇದೀಗ ಸಿಎಸ್​ಕೆ ಅಭಿಮಾನಿಗಳ ಕೆಕೆಆರ್​ ಪೋಸ್ಟ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Ravindra jadeja trolls kolkata knight riders ms dhoni tweet)

Published On - 7:27 pm, Sun, 9 January 22