IPL 2025: ಒಂದೇ ದಿನ ಜನ್ಮ ದಿನ ಆಚರಿಸಿಕೊಂಡ ಆರ್‌ಸಿಬಿ ನಾಯಕ ಹಾಗೂ ಬ್ಯಾಟಿಂಗ್ ಕೋಚ್
Happy Birthday, Dinesh Karthik and Rajat Patidar: ಆರ್‌ಸಿಬಿ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಮತ್ತು ನಾಯಕ ರಜತ್ ಪಾಟೀದಾರ್ ಇಬ್ಬರೂ ಜೂನ್ 1 ರಂದು ಜನಿಸಿದ್ದಾರೆ. ಕಾರ್ತಿಕ್ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಪಾಟೀದಾರ್ 32ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆರ್‌ಸಿಬಿ ಈ ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಿದೆ. ಕಳೆದ ಸೀಸನ್ ವರೆಗೂ ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಫಿನಿಷರ್ ಆಗಿ ಆಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025 (IPL 2025) ರ ಫೈನಲ್ ತಲುಪಿದೆ. ಕ್ವಾಲಿಫೈಯರ್ 1 ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿರುವ ಆರ್‌ಸಿಬಿ ಪ್ರಶಸ್ತಿಯಿಂದ ಒಂದು ಗೆಲುವಿನ ದೂರದಲ್ಲಿದೆ. ಒಂಬತ್ತು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಿದೆ. ಈ ಹಿಂದೆ 2016 ರಲ್ಲಿ ಫೈನಲ್ ತಲುಪಿದ್ದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇದೀಗ ಮತ್ತೊಮ್ಮೆ ಫೈನಲ್ ತಲುಪಿರುವುದರಿಂದ ಆರ್‌ಸಿಬಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಈ ಪ್ರಶಸ್ತಿ ಪಂದ್ಯ ಜೂನ್ 3 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ಈ ನಡುವೆ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ನಾಯಕ ರಜತ್ ಪಾಟಿದರ್ (Rajat Patidar) ಒಂದೇ ದಿನ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಒಂದೇ ದಿನ ಇಬ್ಬರ ಜನ್ಮ ದಿನ
ಆರ್‌ಸಿಬಿ ತಂಡದ ಮಾರ್ಗದರ್ಶಕ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ 1 ಜೂನ್ 1985 ರಂದು ಚೆನ್ನೈನಲ್ಲಿ ಜನಿಸಿದರು. ಅದೇ ದಿನ, 1 ಜೂನ್ 1993 ರಂದು, ನಾಯಕ ರಜತ್ ಪಾಟಿದಾರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಇಂದು ಅಂದರೆ ಭಾನುವಾರ, ಕಾರ್ತಿಕ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರೆ, ಪಾಟೀದಾರ್ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಜನ್ಮ ದಿನವನ್ನು ಆರ್‌ಸಿಬಿ ಶಿಬಿರದಲ್ಲಿ ಆಚರಿಸಲಾಗಿದೆ. ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರಿಗೂ ಶುಭ ಹಾರೈಸಿದೆ. ಕಳೆದ ಸೀಸನ್ವರೆಗೂ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದರು.
Captain-coach celebrating their special day 𝙩𝙬𝙤𝙜𝙚𝙩𝙝𝙚𝙧! 🤝🥳
Join us in wishing our mentor and batting coach – Dinesh Karthik, and the leader of our pack – Rajat Patidar, a very happy birthday! 🎂🙌#PlayBold #ನಮ್ಮRCB pic.twitter.com/HpEnffFt5i
— Royal Challengers Bengaluru (@RCBTweets) June 1, 2025
ಆದರೆ ರಜತ್ ಪಾಟಿದಾರ್ ಆಟಗಾರನಾಗಿ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಇಬ್ಬರೂ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸೀಸನ್‌ನಲ್ಲಿ ಈ ಜೋಡಿ ಆರ್‌ಸಿಬಿಗೆ ಯಶಸ್ಸನ್ನು ತಂದುಕೊಟ್ಟಿದೆ. ಈ ಜೋಡಿ ಬ್ಯಾಟಿಂಗ್ ಕೋಚ್ ಮತ್ತು ನಾಯಕನಾಗಿ ಸೂಪರ್ ಹಿಟ್ ಎಂದು ಸಾಬೀತಾಗಿದೆ ಮತ್ತು ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಆಡಲು ಸಿದ್ಧವಾಗಿದೆ.
ಆರ್‌ಸಿಬಿ ತಂಡದ ಹೆಸರಲ್ಲಿ ಪೂಜೆ: ವಿಶೇಷ ಅಭಿಮಾನ ಮೆರೆದ ಕೊಡಗಿನ ಬಾಲಕ
ಫೈನಲ್ಗಾಗಿ ಆರ್‌ಸಿಬಿ ತಯಾರಿ
ನಾಯಕ ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಆರ್‌ಸಿಬಿಯನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜೂನ್ 3 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯಕ್ಕಾಗಿ ಇಡೀ ತಂಡ ಅಹಮದಾಬಾದ್ ತಲುಪಿದೆ. ಜೂನ್ 1 ರ ಭಾನುವಾರದಂದು ರಜತ್ ಪಡೆ 3 ಗಂಟೆಗಳ ಕಾಲ ಅಭ್ಯಾಸ ನಡೆಸಿದೆ. ಈ ಸಮಯದಲ್ಲಿ, ನಾಯಕ ಪಾಟಿದಾರ್ ಮತ್ತು ತಂಡದ ಉಳಿದ ಆಟಗಾರರು ನೆಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಅದೇ ಸಮಯದಲ್ಲಿ, ಕಾರ್ತಿಕ್ ಸೇರಿದಂತೆ ಇತರ ತರಬೇತುದಾರ ಸಿಬ್ಬಂದಿಗಳು ಕೂಡ ಆಟಗಾರರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
