IPL 2022 Mega Auction: RCB ಹಿಟ್ಲೀಸ್ಟ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ..!
IPL 2022 Mega Auction: 2019 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡವು ಪ್ಲೇಆಫ್ ತಲುಪಿತು. ಹಾಗೆಯೇ 2020 ರಲ್ಲಿ ಅವರು ತಂಡವನ್ನು ಫೈನಲ್‌ಗೆ ಕರೆದೊಯ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ (IPL 2022 Mega Auction) ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಹಳೆಯ ಫ್ರಾಂಚೈಸಿಗಳು 27 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಜನವರಿ 22ರೊಳಗೆ ಹೊಸ ಎರಡು ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಆರಿಸಿಕೊಂಡ ತಲಾ ಮೂವರು ಆಟಗಾರರನ್ನು ಘೋಷಿಸಲಿದೆ. ಆದರೆ ಈ ಎರಡು ಹೊಸ ಫ್ರಾಂಚೈಸಿಗಳ ಲೀಸ್ಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೆಸರಿಲ್ಲ ಎಂದು ವರದಿಯಾಗಿದೆ. ಅಂದರೆ ಅಯ್ಯರ್ ಸ್ಪೆಷಲ್ ಪಿಕ್ ಆಯ್ಕೆಯ ಬದಲಾಗಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ.
ಇತ್ತ ನಾಯಕನ ಹುಡುಕಾಟದಲ್ಲಿರುವ ತಂಡಗಳು ಇದೀಗ ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಯ್ಯರ್ ಅವರನ್ನು ಖರೀದಿಸಲು ಪ್ಲ್ಯಾನ್ ರೂಪಿಸಿದೆ ಎಂದು ಹೇಳಲಾಗಿದೆ. ಏಕೆಂದರೆ ಅಯ್ಯರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಆರ್ಸಿಬಿ ಕೂಡ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಅಯ್ಯರ್ ಅವರ ಖರೀದಿಯಿಂದ ಆರ್ಸಿಬಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಬಹುದು. ಜೊತೆಗೆ ನಾಯಕನ ಸ್ಥಾನವನ್ನು ನೀಡಬಹುದು. ಹೀಗಾಗಿ ಆರ್ಸಿಬಿ ಶ್ರೇಯಸ್ ಅಯ್ಯರ್ ಅವರ ಖರೀದಿಗೆ ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಹೊಸ ಫ್ರಾಂಚೈಸಿಗಳ ಜೊತೆ ಒಪ್ಪಂದಕ್ಕೆ ಮುಂದಾಗಿಲ್ಲ ಎಂಬ ಸುದ್ದಿ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಶ್ರೇಯಸ್ ಅಯ್ಯರ್ ಖರೀದಿಗೆ ಪ್ಲ್ಯಾನ್ ರೂಪಿಸುತ್ತಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡದ ನಾಯಕ ಇಯಾನ್ ಮೊರ್ಗನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿ ನಾಯಕನಾಗಿ ಕೆಕೆಆರ್ ಭಾರತೀಯ ಮೂಲದ ಆಟಗಾರನ ಖರೀದಿಗೆ ಹೆಚ್ಚಿನ ಒಲವು ಹೊಂದಿದೆ.
ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡದ ರಾಡಾರ್ನಲ್ಲೂ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬರುತ್ತಿದೆ. ಕೆಎಲ್ ರಾಹುಲ್ ಅವರಿಂದ ತೆರವಾಗಿರುವ ಸ್ಥಾನವನ್ನು ಮತ್ತೋರ್ವ ಭಾರತೀಯ ಆಟಗಾರನಿಂದ ತುಂಬಲು ಪಂಜಾಬ್ ಕಿಂಗ್ಸ್ ಬಯಸಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಮೊದಲ ಆಯ್ಕೆ ಶ್ರೇಯಸ್ ಅಯ್ಯರ್. ಈ ಮೂಲಕ ಮತ್ತೊಮ್ಮೆ ಭಾರತೀಯ ಆಟಗಾರನಿಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ.
ಇತ್ತ ಶ್ರೇಯಸ್ ಅಯ್ಯರ್ ಅವರ ಖರೀದಿಗೆ ಈ ಮೂರು ಫ್ರಾಂಚೈಸಿಗಳು ಪೈಪೋಟಿ ನಡೆಸುವುದಂತು ದಿಟ. ಏಕೆಂದರೆ 2019 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡವು ಪ್ಲೇಆಫ್ ತಲುಪಿತು. ಹಾಗೆಯೇ 2020 ರಲ್ಲಿ ಅವರು ತಂಡವನ್ನು ಫೈನಲ್‌ಗೆ ಕರೆದೊಯ್ದರು. ಅಂದರೆ ಅಯ್ಯರ್ ನಾಯಕನಾಗಿ ಐಪಿಎಲ್ನಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣದಿಂದ ಮೆಗಾ ಹರಾಜಿಗೂ ಮುನ್ನವೇ 3 ತಂಡಗಳ ಹಿಟ್ಲೀಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(RCB, KKR, PBKS to Bid For Shreyas Iyer at IPL 2022 Mega Auction: Report)