IPL 2025: ಆರ್​ಸಿಬಿ ರಿಟೆನ್ಷನ್ ಪಟ್ಟಿ ಔಟ್; ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಫ್ರಾಂಚೈಸಿ..!

RCB's Mystery Retention List: ಐಪಿಎಲ್ 2024 ರ ಆಟಗಾರರ ಉಳಿಸಿಕೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಲು ಒಂದು ದಿನ ಬಾಕಿ ಉಳಿದಿದೆ. ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದೆ, ಅದರಲ್ಲಿ 8 ಆಟಗಾರರ ಹೆಸರುಗಳಿವೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ರಜತ್ ಪಾಟಿದರ್, ಮತ್ತು ವಿಲ್ ಜಾಕ್ಸ್ ಸೇರಿದಂತೆ ಹಲವು ಆಟಗಾರರ ಹೆಸರುಗಳು ಈ ಪಟ್ಟಿಯಲ್ಲಿವೆ. ಆದರೆ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಯಾರು ಆಯ್ಕೆಯಾಗುತ್ತಾರೆ ಎಂಬುದು ನಾಳೆ ತಿಳಿಯಲಿದೆ.

IPL 2025: ಆರ್​ಸಿಬಿ ರಿಟೆನ್ಷನ್ ಪಟ್ಟಿ ಔಟ್; ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಫ್ರಾಂಚೈಸಿ..!
ಆರ್​ಸಿಬಿ 2025
Follow us
|

Updated on:Oct 30, 2024 | 8:14 PM

ಐಪಿಎಲ್​ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಬಿಡುಗಡೆ ಮಾಡಲು ಇನ್ನೊಂದೆ ದಿನ ಬಾಕಿ ಉಳಿದಿದೆ. ನಾಳೆ ಅಂದರೆ ಅಕ್ಟೋಬರ್ 31 ರ 5 ಗಂಟೆಯೊಳಗೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡ ಹಾಗೂ ಆರ್​ಟಿಎಮ್​ ಆಯ್ಕೆಯಾಗಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಅಳೆದು ತೂಗಿ ತಂಡಕ್ಕೆ ಅಗತ್ಯವಿರುವವರನ್ನು ಉಳಿಸಿಕೊಳ್ಳಲು ಮುಂದಾಗಿವೆ. ಅದರಂತೆ ಇದುವರೆಗೆ ಒಮ್ಮೆಯೂ ಚಾಂಪಿಯನ್ ಆಗದ ಆರ್​ಸಿಬಿ ಕೂಡ ಈ ಬಾರಿಯಾದರೂ ಟ್ರೋಫಿನ ಎತ್ತಿಹಿಡಿಯುವ ಸಲುವಾಗಿ ಬಲಿಷ್ಠ ಟೀಂ ಕಟ್ಟಲು ತಯಾರಿ ನಡೆಸಿದೆ. ಆದರೆ ಅದಕ್ಕೂ ಮುನ್ನ ಫ್ರಾಂಚೈಸಿ, ತನ್ನ ಧಾರಣ ಪಟ್ಟಿಯಲ್ಲಿ ಯಾರ್ಯಾರನ್ನು ಉಳಿಸಿಕೊಂಡಿದೆ ಎಂಬ ವರದಿಯನ್ನು ನೀಡಬೇಕು. ಈ ಪಟ್ಟಿ ನೀಡಲು ಒಂದು ದಿನ ಬಾಕಿ ಇರುವಾಗಲೆ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪೋಸ್ಟ್​ವೊಂದನ್ನು ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.

ಸಂಭಾವ್ಯ ಪಟ್ಟಿ ಹೀಗಿದೆ

ಪ್ರಸ್ತುತ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಈ ಬಾರಿ ಆರ್​ಸಿಬಿ ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಚಿಂತಿಸಿದೆ ಎಂಬ ವರದಿ ಇದೆ. ಅದರ ಪ್ರಕಾರ, ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿ ತಂಡದಲ್ಲಿರುವುದು ಖಚಿತವಾಗಿದೆ. ಎರಡನೇ ಆಯ್ಕೆಯಾಗಿ ಮೊಹಮ್ಮದ್ ಸಿರಾಜ್​ ಅವರನ್ನು ಉಳಿಸಿಕೊಳ್ಳಲು ತಂಡ ಮುಂದಾಗಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ರಜತ್ ಪಾಟಿದರ್ ಹಾಗೂ ವಿಲ್ ಜಾಕ್ಸ್ ಇರಬಹುದು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅನ್​ಕ್ಯಾಪ್ಡ್ ಆಟಗಾರನಾಗಿ ಯಶ್ ದಯಾಳ್ ತಂಡದಲ್ಲಿ ಉಳಿಯಬಹುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.

ಆದರೀಗ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿರುವ ಆರ್​ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪಝಲ್ ರೀತಿಯ ಪೋಸ್ಟ್​ವೊಂದನ್ನು ಹಂಚಿಕೊಂಡಿದೆ. ಈ ಪಝಲ್ ಗೇಮ್​ನಲ್ಲಿ ತಂಡ ಉಳಿಸಿಕೊಳ್ಳಬಹುದಾದ ಆಟಗಾರರ ಹೆಸರನ್ನು ಅಡಗಿಟ್ಟಿಸಿದೆ. ಅದರಲ್ಲಿ ಹುಡುಕಿದಾಗ ಒಟ್ಟಾರೆ 8 ಆಟಗಾರರ ಹೆಸರು ಪತ್ತೆಯಾಗಿದೆ. ಆದರೆ ಫ್ರಾಂಚೈಸಿಯೊಂದು ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆ 6 ಮಾತ್ರ. ಹೀಗಾಗಿ ಆರ್​ಸಿಬಿ ತಾನು ಪಟ್ಟಿ ಮಾಡಿರುವ ಈ 8ಆಟಗಾರರಲ್ಲಿ ಯಾರನ್ನು ಉಳಿಸಿಕೊಳ್ಳಲಿದೆ ಎಂಬುದು ನಾಳೆಯೇ ಗೊತ್ತಾಗಲಿದೆ.

ಪ್ರಸ್ತುತ ಆರ್​ಸಿಬಿ ಹಂಚಿಕೊಂಡಿರುವ ಪಟ್ಟಿಯಲ್ಲಿ ಇರುವ ಆಟಗಾರರೆಂದರೆ

  • ವಿರಾಟ್ ಕೊಹ್ಲಿ
  • ಮೊಹಮ್ಮದ್ ಸಿರಾಜ್
  • ವಿಲ್ ಜಾಕ್ಸ್
  • ಗ್ಲೆನ್ ಮ್ಯಾಕ್ಸ್​ವೆಲ್
  • ರಜತ್ ಪಾಟಿದರ್
  • ಅನುಜ್ ರಾವತ್
  • ಯಶ್ ದಯಾಳ್
  • ಫಾಫ್ ಡು ಪ್ಲೆಸಿಸ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Wed, 30 October 24

ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್