IPL 2025: ಡೆಲ್ಲಿಯಿಂದ ಹೊರಬಿದ್ದ ರಿಷಬ್ ಪಂತ್; ರಿಟೆನ್ಷನ್ ಪಟ್ಟಿಯಲ್ಲಿ 4 ಆಟಗಾರರು

Rishabh Pant Out of Delhi Capitals IPL 2024: ಹಲವು ಊಹಾಪೋಹಗಳ ನಂತರ, ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿಯುವುದು ಖಚಿತವಾಗಿದೆ. ತಂಡದ ನಾಯಕತ್ವ ಮತ್ತು ವೈಯಕ್ತಿಕ ಬೇಡಿಕೆಗಳ ಕುರಿತು ಭಿನ್ನಾಭಿಪ್ರಾಯಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈಗ ಪಂತ್ ಮೆಗಾ ಹರಾಜಿನಲ್ಲಿ ಹೊಸ ತಂಡ ಸೇರಲು ಸಿದ್ಧರಾಗಿದ್ದಾರೆ.

IPL 2025: ಡೆಲ್ಲಿಯಿಂದ ಹೊರಬಿದ್ದ ರಿಷಬ್ ಪಂತ್; ರಿಟೆನ್ಷನ್ ಪಟ್ಟಿಯಲ್ಲಿ 4 ಆಟಗಾರರು
ರಿಷಬ್ ಪಂತ್
Follow us
|

Updated on:Oct 30, 2024 | 10:50 PM

ಹಲವು ದಿನಗಳ ಊಹಾಪೋಹಗಳು ಮತ್ತು ಚರ್ಚೆಗಳ ನಂತರ ಚಿತ್ರಣ ಸ್ಪಷ್ಟವಾಗುತ್ತಿದ್ದು, ಐಪಿಎಲ್‌ ಮುಂದಿನ ಸೀಸನ್​ನ ಡೆಲ್ಲಿ ಕ್ಯಾಪಿಟಲ್ಸ್‌ ಡಗೌಟ್‌ನಲ್ಲಿ ರಿಷಬ್ ಪಂತ್ ಅವರ ಮುಖ ಕಾಣಿಸುವುದಿಲ್ಲ. ಫ್ರಾಂಚೈಸಿಗಳು ಧಾರಣ ಪಟ್ಟಿಯನ್ನು ಸಲ್ಲಿಸುವ ಒಂದು ದಿನಕ್ಕೆ ಮೊದಲು ರಿಷಬ್ ಪಂತ್ ಡೆಲ್ಲಿ ತಂಡದಿಂದ ಹೊರಹೋಗುವುದು ಭಾಗಶಃ ಖಚಿತ ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದರೊಂದಿಗೆ ಕಳೆದ 9 ವರ್ಷಗಳಿಂದ ಡೆಲ್ಲಿ ಹಾಗೂ ಪಂತ್ ನಡುವಿನ ಸಂಬಂಧಕ್ಕೆ ತೆರೆ ಬಿದ್ದಿದೆ. ವಾಸ್ತವವಾಗಿ ಪಂತ್ 2016 ರಲ್ಲಿ ಡೆಲ್ಲಿ ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಈ ಫ್ರಾಂಚೈಸಿಯ ಭಾಗವಾಗಿದ್ದರು. ಇದೀಗ ಪಂತ್, ಡೆಲ್ಲಿ ತಂಡಕ್ಕೆ ವಿದಾಯ ಹೇಳುವುದು ಖಚಿತ ಎನ್ನಲಾಗುತ್ತಿದೆ.

9 ವರ್ಷಗಳ ಪಯಣ ಅಂತ್ಯ

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಿಷಬ್ ಪಂತ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಉಳಿಸಿಕೊಳ್ಳುವ ಬಗ್ಗೆ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ ಇಬ್ಬರ ನಡುವೆ ಯಾವುದೇ ಒಮ್ಮತ ಮೂಡದ ಕಾರಣ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ದೆಹಲಿ ನಿರ್ಧರಿಸಿದೆ. ತೆರೆ ಮರೆಯ ವದಂತಿಗಳ ಪ್ರಕಾರ, ಪಂತ್ ತಂಡದ ನಾಯಕನಾಗಿ ಉಳಿಯಲು ಬಯಸಿದ್ದರು. ಇದರ ಹೊರತಾಗಿ ಅವರು ತಂಡದ ಮಾಲೀಕರ ಬಳಿ ಕೆಲವು ಬೇಡಿಕೆಗಳನ್ನು ಸಹ ಇಟ್ಟಿದ್ದರು. ಆದರೆ ಫ್ರಾಂಚೈಸಿ ಪಂತ್ ಅವರ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲು ಸಿದ್ಧವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲೂ ಫ್ರಾಂಚೈಸಿಗೆ ಪಂತ್ ನಾಯಕತ್ವದ ಬಗ್ಗೆ ವಿಶ್ವಾಸವಿರಲಿಲ್ಲ. ಹೀಗಾಗಿ ಪಂತ್ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಲಾಗಿದೆ.

ಪಂತ್ ಅವರನ್ನು 2021 ರಲ್ಲಿ ದೆಹಲಿ ತಂಡದ ನಾಯಕನನ್ನಾಗಿ ನೇಮಿಸಲಾಯಿತು. ಅಪಘಾತಕ್ಕೀಡಾಗಿ ಕ್ರಿಕೆಟ್​ನಿಂದ ಹೊರಗುಳಿದಿದ್ದ ಪಂತ್, ಪೂರ್ಣ ಚೇತರಿಸಿಕೊಂಡು ಈ ವರ್ಷ ಐಪಿಎಲ್​ ಅಖಾಡಕ್ಕಿಳಿದ ನಂತರವೂ ಅವರು ಮತ್ತೆ ನಾಯಕನಾಗಿ ಮುಂದವರೆದಿದ್ದರು. ಆದಾಗ್ಯೂ, ಪಂತ್ ಅವರ ಅಧಿಕಾರಾವಧಿಯಲ್ಲಿ, ಡೆಲ್ಲಿ ಒಂದು ಬಾರಿ ಮಾತ್ರ ಪ್ಲೇ ಆಫ್ ತಲುಪಿದರೆ ಉಳಿದಂತೆ ತಂಡದ ಪ್ರದರ್ಶನ ಅಷ್ಟಕಷ್ಟೆ. ಇಂತಹ ಪರಿಸ್ಥಿತಿಯಲ್ಲಿ ಪಂತ್ ಈ ಬಾರಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಮೆಗಾ ಹರಾಜಿನಲ್ಲಿ ಭಾರತದ ದುಬಾರಿ ಆಟಗಾರ ಎನಿಸಿಕೊಳ್ಳುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅವರನ್ನು ಖರೀದಿಸಲು ರೇಸ್‌ನಲ್ಲಿವೆ ಎಂದು ಹಲವು ವರದಿಗಳು ಹೇಳಿವೆ.

ಈ 4 ಆಟಗಾರರನ್ನು ಉಳಿಸಿಕೊಳ್ಳಬಹುದು

ಧಾರಣೆಗೆ ಸಂಬಂಧಿಸಿದಂತೆ, ಡೆಲ್ಲಿ ಕ್ಯಾಪಿಟಲ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಮೊದಲ ಧಾರಣೆ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಆಗಿದ್ದರೆ, ಎರಡನೇ ಧಾರಣೆ ಸ್ಪಿನ್ನರ್ ಕುಲ್ದೀಪ್ ಯಾದವ್. ಅವರನ್ನು ಹೊರತುಪಡಿಸಿ, ಫ್ರಾಂಚೈಸಿ ಕಳೆದ ಸೀಸನ್​ನಲ್ಲಿ ಸಾಕಷ್ಟು ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಉದಯೋನ್ಮುಖ ಬ್ಯಾಟ್ಸ್‌ಮನ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಸಹ ಉಳಿಸಿಕೊಂಡಿದೆ. ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅಭಿಷೇಕ್ ಪೊರೆಲ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲಾಗುವುದು. ಇದಲ್ಲದೆ ಮೆಗಾ ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್‌ ಕಾರ್ಡ್​ ಬಳಸಿ 2 ಆಟಗಾರರನ್ನು ಖರೀದಿಸುವ ಆಯ್ಕೆಯನ್ನು ಫ್ರಾಂಚೈಸಿ ಹೊಂದಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Wed, 30 October 24

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ