
ಬೆಂಗಳೂರು (ಮೇ. 04): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 52 ನೇ ಪಂದ್ಯವು ರಣರೋಚಕವಾಗಿತ್ತು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ (Royal Challengers Bengaluru vs Chennai Super Kings) ವಿರುದ್ಧ ಕೇವಲ 2 ರನ್‌ಗಳಿಂದ ಜಯಗಳಿಸಿತು. ಇದರೊಂದಿಗೆ, ಆರ್‌ಸಿಬಿ 16 ಅಂಕಗಳನ್ನು ಹೊಂದಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿದೆ. ಅತ್ತ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈಗಗಲೇ ಟೂರ್ನಿಯಿಂದ ಹೊರಬಿದ್ದಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ 5 ವಿಕೆಟ್‌ಗೆ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 15 ರನ್‌ಗಳು ಬೇಕಾಗಿದ್ದವು. ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿದ್ದರು. ಅದರ ಹೊರತಾಗಿಯೂ, ಆರ್‌ಸಿಬಿ ವೇಗಿ ಯಶ್ ದಯಾಳ್ ಚೆನ್ನೈ ತಂಡದ ತೆಕ್ಕೆಯಿಂದ ಗೆಲುವನ್ನು ಕಸಿದುಕೊಂಡರು. ಕೊನೆಯ ಓವರ್‌ನಲ್ಲಿ ಏನಾಯಿತು ಎಂಬುದನ್ನು ಇಲ್ಲಿ ನೋಡಿ.
19.1- ಯಶ್ ದಯಾಳ್ ಎಂಎಸ್ ಧೋನಿಗೆ ಲೋ ಫುಲ್ ಟಾಸ್ ಎಸೆದರು, ಇದರಿಂದ ಕೇವಲ ಒಂದು ರನ್ ಗಳಿಸಲಷ್ಟೆ ಶಕ್ತವಾಯಿತು. ಈಗ ಸಂಪೂರ್ಣವಾಗಿ ಸೆಟ್ ಆಗಿರುವ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿದ್ದರು.
19.2- ಯಶ್ ದಯಾಳ್ ರವೀಂದ್ರ ಜಡೇಜಾಗೆ ಕೂಡ ಕಡಿಮೆ ಫುಲ್ ಟಾಸ್ ಎಸೆದರು, ಇದು ಕೂಡ ಸಿಂಗಲ್ ರನ್ ಬಂತು.
19.3- ಈ ಎಸೆತದಲ್ಲಿ, ಯಶ್ ದಯಾಳ್ ಸ್ಟ್ರೈಕ್‌ನಲ್ಲಿದ್ದ ಎಂಎಸ್ ಧೋನಿಯನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಲೋ ಫುಲ್ ಟಾಸ್ ಚೆಂಡನ್ನು ಹೊಡೆಯಲು ಹೋಗಿ ಔಟ್ ಆದರು. ಧೋನಿ 12 ರನ್ ಗಳಿಸಿ ನಿರ್ಗಮಿಸಿದರು.
RCB vs CSK, IPL 2025: ಸೋಲಿಗೆ ನಾನೇ ಕಾರಣ: ಆರ್‌ಸಿಬಿ ವಿರುದ್ಧ ಸೋತ ನಂತರ ಧೋನಿ ಶಾಕಿಂಗ್ ಹೇಳಿಕೆ
19.4- ಯಶ್ ದಯಾಳ್ ಅವರು ಶಿವಂ ದುಬೆಗೆ ನೋ ಬಾಲ್ ಎಸೆದರು, ಅದರಲ್ಲಿ ದುಬೆ ಅದ್ಭುತ ಸಿಕ್ಸರ್ ಬಾರಿಸಿದರು. ಮುಂದಿನ ಚೆಂಡು ಫ್ರೀ ಹಿಟ್ ಆಗಿತ್ತು.
ಈಗ ಇಲ್ಲಿಂದ ಚೆನ್ನೈ ಗೆಲುವಿಗೆ 3 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿತ್ತು.
19.4- ಯಶ್ ದಯಾಳ್ ಶಿವಂ ದುಬೆಗೆ ಮತ್ತೆ ಲೋ ಫುಲ್ ಟಾಸ್ ಎಸೆದರು, ಆ ಬೌಲ್ನಲ್ಲಿ ಕೇವಲ 1 ರನ್ ಬಂತು ಅಷ್ಟೆ.
19.5- ಯಶ್ ದಯಾಳ್ ರವೀಂದ್ರ ಜಡೇಜಾಗೆ ಸ್ಟಂಪ್ ಮೇಲೆ ಫುಲ್ ಬಾಲ್ ಎಸೆದರು, ಇದು ಕೂಡ ಒಂದು ರನ್ ಗಳಿಸಲು ಕಾರಣವಾಯಿತು.
19.6- ಯಶ್ ದಯಾಳ್ ಶಿವಂ ದುಬೆಗೆ ಲೋ ಫುಲ್ ಟಾಸ್ ಎಸೆದರು, ಮತ್ತೆ ಕೇವಲ 1 ರನ್ ಮಾತ್ರ ಬಂತು ಮತ್ತು ಆರ್‌ಸಿಬಿ ಪಂದ್ಯವನ್ನು 2 ರನ್‌ಗಳಿಂದ ಗೆದ್ದಿತು.
What winning an absolute thriller against your great rival feels like 🤩
𝙍𝘼𝙒 𝙀𝙢𝙤𝙩𝙞𝙤𝙣𝙨 from the #RCB camp ❤#TATAIPL | #RCBvCSK | @RCBTweets pic.twitter.com/hy1Y8tTxM2
— IndianPremierLeague (@IPL) May 3, 2025
ವಿಶೇಷ ಎಂದರೆ, 18 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರು ಮತ್ತು ಚೆಪಾಕ್ನಲ್ಲಿ ಸೋಲಿಸಿದ್ದು ಇದೇ ಮೊದಲು. ಈ ಮೂಲಕ ನೂತನ ದಾಖಲೆ ಕೂಡ ನಿರ್ಮಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ