RCB vs KKR, IPL 2025: ಯಾರು ಇನ್, ಯಾರಿಗೆ ಸ್ಥಾನ?: ಐಪಿಎಲ್ ಮರುಪ್ರಾರಂಭದ ಮೊದಲ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೇಗಿರಲಿದೆ?

RCB vs KKR Playing XI: ಇಂದಿನ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿಯ ಆಡುವ 11 ರಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ತಂಡ ಎದುರಿಸಲಿರುವ ದೊಡ್ಡ ಸಮಸ್ಯೆ ಎಂದರೆ ಜೋಶ್ ಹ್ಯಾಜಲ್‌ವುಡ್ ಇನ್ನು ಮುಂದೆ ಉಳಿದ ಪಂದ್ಯಗಳಿಗೆ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇಂದು ಕೆಕೆಆರ್ ವಿರುದ್ಧದ ತಂಡದಲ್ಲಿ ಲುಂಗಿ ಎನ್‌ಗಿಡಿಗೆ ಅವಕಾಶ ಸಿಗಬಹುದು.

RCB vs KKR, IPL 2025: ಯಾರು ಇನ್, ಯಾರಿಗೆ ಸ್ಥಾನ?: ಐಪಿಎಲ್ ಮರುಪ್ರಾರಂಭದ ಮೊದಲ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೇಗಿರಲಿದೆ?
Rcb Vs Kkr Playing Xi

Updated on: May 17, 2025 | 8:09 AM

ಬೆಂಗಳೂರು (ಮೇ. 17): ಐಪಿಎಲ್ 2025 ರ 58 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Royal Challengers Bengaluru vs Kolkata Knight Riders) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಬ್ಯಾಟಿಂಗ್‌ಗೆ ಸ್ವರ್ಗ ಎಂದು ಪರಿಗಣಿಸಲಾಗಿರುವ ಈ ಪಿಚ್​ನಲ್ಲಿ ಈ ಋತುವಿನಲ್ಲಿ ಬೌಲರ್‌ಗಳಿಗೂ ಸಹಾಯ ಮಾಡಿದೆ. ಎರಡೂ ತಂಡಗಳು ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಬಯಸುತ್ತವೆ. ಆರ್‌ಸಿಬಿ ಅಗ್ರ ಎರಡು ಸ್ಥಾನಗಳತ್ತ ಚಿತ್ತ ನೆಟ್ಟಿದ್ದರೆ, ಕೆಕೆಆರ್ ಪ್ಲೇಆಫ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಯಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ಆಡುವ 11 ಮಂದಿ ಯಾರೆಂದು ನೋಡೋಣ.

ಪಾಯಿಂಟ್ಸ್ ಟೇಬಲ್‌ ಹೇಗಿದೆ?:

ಆರ್‌ಸಿಬಿ ತಂಡವು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅವರು 11 ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದ್ದಾರೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿತ್ತು. ವಿರಾಟ್ ಕೊಹ್ಲಿ 62 ರನ್ ಗಳಿಸಿ ಅದ್ಭುತ ಆಟವಾಡಿದರು. ಕೆಕೆಆರ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅವರು 12 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದ್ದಾರೆ. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಸಿಎಸ್‌ಕೆ ವಿರುದ್ಧ 2 ವಿಕೆಟ್‌ಗಳಿಂದ ಸೋತಿತ್ತು. ಅಜಿಂಕ್ಯ ರಹಾನೆ 48 ರನ್ ಗಳ ಕೊಡುಗೆ ನೀಡಿದರು. ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ಇದುವರೆಗೆ 35 ಪಂದ್ಯಗಳು ನಡೆದಿವೆ. ಕೆಕೆಆರ್ 21 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 14 ಪಂದ್ಯಗಳನ್ನು ಗೆದ್ದಿದೆ.

ಇದನ್ನೂ ಓದಿ
8 ಆಫ್ರಿಕಾ ಆಟಗಾರರು ಲೀಗ್ ಹಂತದ ನಂತರ ದೇಶಕ್ಕೆ ವಾಪಸ್
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡವನ್ನು ಪ್ರಕಟಿಸಿದ ಬಿಸಿಸಿಐ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಪ್ಲೇಆಫ್‌ಗೇರಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು?

ಪ್ಲೇಯಿಂಗ್ 11 ಹೇಗಿರಬಹುದು?:

ಆರ್‌ಸಿಬಿಯ ಆಡುವ 11 ರಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ತಂಡ ಎದುರಿಸಲಿರುವ ದೊಡ್ಡ ಸಮಸ್ಯೆ ಎಂದರೆ ಜೋಶ್ ಹ್ಯಾಜಲ್‌ವುಡ್ ಇನ್ನು ಮುಂದೆ ಉಳಿದ ಪಂದ್ಯಗಳಿಗೆ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇಂದು ಕೆಕೆಆರ್ ವಿರುದ್ಧದ ತಂಡದಲ್ಲಿ ಲುಂಗಿ ಎನ್‌ಗಿಡಿಗೆ ಅವಕಾಶ ಸಿಗಬಹುದು. ಉಳಿದಂತೆ ತಂಡದಲ್ಲಿ ಬದಲಾವಣೆ ಅನುಮಾನ. ಆದರೆ, ಆರ್‌ಸಿಬಿ ಫಿಲ್ ಸಾಲ್ಟ್ ಜೊತೆಗೆ ಇನ್ನಿಂಗ್ಸ್ ಆರಂಭಿಸುತ್ತೊ ಅಥವಾ ಜಾಕೋಬ್ ಬೆಥೆಲ್ ಕಣಕ್ಕಿಳಿಯುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.

IPL 2025: ದೇಶ ಮುಖ್ಯ, ಐಪಿಎಲ್ ಅಲ್ಲ..! 8 ಆಫ್ರಿಕಾ ಆಟಗಾರರು ಪ್ಲೇಆಫ್‌ಗೆ ಅಲಭ್ಯ

ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ:

ವಿದೇಶಿ ಆಟಗಾರರು ಹಿಂತಿರುಗದ ಕಾರಣ ಕೆಕೆಆರ್ ತಂಡಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕೆಕೆಆರ್ ತಂಡದಲ್ಲಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರರಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಹಮಾನಲ್ಲಾ ಗುರ್ಬಾಜ್, ಆಂಡ್ರೆ ರಸೆಲ್, ಮೊಯೀನ್ ಅಲಿಯಂತಹ ವಿದೇಶಿ ಆಟಗಾರರನ್ನು ಅವರ ತಂಡದಲ್ಲಿ ಕಾಣಬಹುದು.

ಆರ್‌ಸಿಬಿಯ ಸಂಭಾವ್ಯ ಆಡುವ XI:

ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್, ಸುಯಾಶ್ ಶರ್ಮಾ.

ಕೆಕೆಆರ್‌ನ ಸಂಭಾವ್ಯ ಆಡುವ XI:

ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮೊಯಿನ್ ಅಲಿ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ