AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tim David: ಚಿನ್ನಸ್ವಾಮಿ ಮೈದಾನದಲ್ಲಿ ಸ್ವಿಮ್ಮಿಂಗ್ ಮಾಡಿದ ಟಿಮ್ ಡೇವಿಡ್: ವೈರಲ್ ಆಗುತ್ತಿದೆ ವಿಡಿಯೋ

ಭಾರೀ ಮಳೆಯಿಂದಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನೀರಿನಿಂದ ತುಂಬಿತ್ತು. ಇದರಲ್ಲಿ ಟಿಮ್ ಡೇವಿಡ್ ಈಜುತ್ತಿರುವುದು ಕಂಡುಬಂದಿದೆ. ಮಳೆಯ ಮಧ್ಯೆ ಟಿಮ್ ಸಖತ್ ಎಂಜಾಯ್ ಮಾಡಿದರು. ಸ್ವಿಮ್ ಮಾಡಿ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ಗೆ ಬಂದಾಗ ತಂಡದ ಉಳಿದ ಆಟಗಾರರು ಅವರನ್ನು ಜೋರಾಗಿ ನಗುತ್ತಾ ಮತ್ತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

Tim David: ಚಿನ್ನಸ್ವಾಮಿ ಮೈದಾನದಲ್ಲಿ ಸ್ವಿಮ್ಮಿಂಗ್ ಮಾಡಿದ ಟಿಮ್ ಡೇವಿಡ್: ವೈರಲ್ ಆಗುತ್ತಿದೆ ವಿಡಿಯೋ
Tim David
Vinay Bhat
|

Updated on: May 16, 2025 | 12:38 PM

Share

ಬೆಂಗಳೂರು (ಮೇ. 16): ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ನಾಳೆಯಿಂದ ಅಂದರೆ ಮೇ 17 ರಿಂದ ಪುನರಾರಂಭಗೊಳ್ಳುತ್ತಿದೆ. ಈ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಸಂಜೆ 7:30 ಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಬೆಂಗಳೂರಿನಲ್ಲಿವೆ. ಏತನ್ಮಧ್ಯೆ, ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಈ ಮಳೆಯ ನಡುವೆಯೂ ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮೈದಾನದಲ್ಲಿ ಮೋಜು ಮಾಡುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮೈದಾನದಲ್ಲೇ ಸ್ವಿಮ್ ಮಾಡಿದ ಟಿಮ್ ಡೇವಿಡ್:

ಇದನ್ನೂ ಓದಿ
Image
ರೋಹಿತ್​ಗೆ ಮರೆಯಲಾಗದ ದಿನ: ವಾಂಖೆಡೆಯಲ್ಲಿ ಇಂದು ದೊಡ್ಡ ಸಮಾರಂಭ
Image
ವಿಲ್ ಜ್ಯಾಕ್ಸ್ ಬದಲಿಗೆ ಮುಂಬೈ ತಂಡಕ್ಕೆ ಮತ್ತೋರ್ವ ಸ್ಫೋಟಕ ಬ್ಯಾಟರ್ ಎಂಟ್ರಿ
Image
ಪಾಕಿಸ್ತಾನಕ್ಕೆ ಬಾಂಗ್ಲಾ ಪ್ರವಾಸ; ಒಪ್ಪಿಗೆ ಸೂಚಿಸಿದ ಸರ್ಕಾರ
Image
ಬದಲಿ ಆಟಗಾರರನ್ನು ಘೋಷಿಸಿದ ಮೂರು ಐಪಿಎಲ್ ತಂಡಗಳು

ಭಾರೀ ಮಳೆಯಿಂದಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನೀರಿನಿಂದ ತುಂಬಿತ್ತು. ಇದರಲ್ಲಿ ಟಿಮ್ ಡೇವಿಡ್ ಈಜುತ್ತಿರುವುದು ಕಂಡುಬಂದಿದೆ. ಮಳೆಯ ಮಧ್ಯೆ ಟಿಮ್ ಸಖತ್ ಎಂಜಾಯ್ ಮಾಡಿದರು. ಸ್ವಿಮ್ ಮಾಡಿ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಬಂದಾಗ ತಂಡದ ಉಳಿದ ಆಟಗಾರರು ಅವರನ್ನು ಜೋರಾಗಿ ನಗುತ್ತಾ ಮತ್ತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಟಿಮ್ ಡೇವಿಡ್ ಅವರ ಈ ಮೋಜಿನ ವೀಡಿಯೊವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.

ಭರ್ಜರಿ ಫಾರ್ಮ್​ನಲ್ಲಿ ಟಿಮ್ ಡೇವಿಡ್:

ಐಪಿಎಲ್ 2025 ರಲ್ಲಿ ಟಿಮ್ ಡೇವಿಡ್ ಆರ್‌ಸಿಬಿಯ ಭಾಗವಾಗಿದ್ದು, ಇವರನ್ನು ಮೆಗಾ ಹರಾಜಿನಲ್ಲಿ 3 ಕೋಟಿ ರೂ. ಗೆ ಖರೀದಿಸಿತು. ಫಿನಿಶಿಂಗ್ ಜವಾಬ್ದಾರಿ ಹೊತ್ತಿರುವ ಇವರು ಪ್ರತಿ ಪಂದ್ಯದಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಟಿಮ್ ಡೇವಿಡ್, ಅರ್ಧಶತಕ ಸೇರಿದಂತೆ 193.75 ಸ್ಟ್ರೈಕ್ ರೇಟ್‌ನಲ್ಲಿ 186 ರನ್ ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ಗಳಿಸಿದ ಟಿಮ್, ತಂಡಕ್ಕೆ ಅತ್ಯಂತ ಅಗತ್ಯವಿದ್ದ ಸಮಯದಲ್ಲಿ ನೆರವಾದರು.

Rohit Sharma Stand: ರೋಹಿತ್ ಶರ್ಮಾಗೆ ಇಂದು ಮರೆಯಲಾಗದ ದಿನ: ವಾಂಖೆಡೆಯಲ್ಲಿ ನಡೆಯಲಿದೆ ದೊಡ್ಡ ಸಮಾರಂಭ

ಕೆಕೆಆರ್ ವಿರುದ್ಧದ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿ ಈಗಾಗಲೇ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಅದಾಗ್ಯೂ ಅವರು ಪ್ಲೇಆಫ್ ಹಂತದ ಪಂದ್ಯಗಳಿಗೆ ಅಲಭ್ಯರಗಾಲಿದ್ದಾರೆ ಎನ್ನಲಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಸೌತ್ ಆಫ್ರಿಕಾ ಆಟಗಾರರು ಮೇ 26 ರಂದು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕು ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಸೂಚಿಸಿತ್ತು. ಇದೀಗ ಬಿಸಿಸಿಐ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಡುವಣ ಮಾತುಕತೆ ಯಶಸ್ವಿಯಾಗಿದ್ದು, ಬಿಸಿಸಿಐನ ಮನವಿ ಬೆನ್ನಲ್ಲೇ ಸೌತ್ ಆಫ್ರಿಕಾ ಟೆಸ್ಟ್ ತಂಡದ ಅಭ್ಯಾಸ ಶಿಬಿರವನ್ನು ಮುಂದೂಡಲಾಗಿದೆ. ಅದರಂತೆ ಸೌತ್ ಆಫ್ರಿಕಾ ಟೆಸ್ಟ್​ ತಂಡವು ಜೂನ್ 3 ರಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಕ್ಕಾಗಿ ಅಭ್ಯಾಸವನ್ನು ಆರಂಭಿಸಲು ನಿರ್ಧರಿಸಿದೆ.

ಪ್ಲೇ ಆಫ್​ನತ್ತ ಆರ್​ಸಿಬಿ:

18ನೇ ಸೀಸನ್‌ನಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿದೆ. ಇಲ್ಲಿಯವರೆಗೆ, 11 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳಲ್ಲಿ ಗೆದ್ದಿದೆ ಮತ್ತು 3 ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ, ಆರ್‌ಸಿಬಿ 16 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯ ಆರ್‌ಸಿಬಿ ಕೆಕೆಆರ್ ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ತಲುಪಲು ಎದುರು ನೋಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ