Rohit Sharma: ಅಶ್ವಿನ್ ಶ್ರೇಷ್ಠತೆ ಪ್ರಶ್ನಿಸಿದ ಪಾಕ್ ಕ್ರಿಕೆಟಿಗನ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ
R Ashwin: ಅಶ್ವಿನ್ ಅದ್ಭುತ ಬೌಲರ್ ಎಂಬುದರಲ್ಲಿ ಸಂದೇಹವಿಲ್ಲ. ತವರಿನ ಪರಿಸ್ಥಿತಿಯಲ್ಲಿ ಎಸ್‌ಜಿ ಬಾಲ್‌ನೊಂದಿಗೆ ಅಶ್ವಿನ್ ಅವರ ಪ್ರದರ್ಶನವನ್ನು ನಾವು ನೋಡಿದರೆ, ಅವರು ಭಾರತದ ಅತ್ಯುತ್ತಮ ಸ್ಪಿನ್ನರ್ ಎಂಬುದರಲ್ಲೂ ಸಂದೇಹವಿಲ್ಲ.
ಶ್ರೀಲಂಕಾ ತಂಡವನ್ನು ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ. ಈ ಕ್ಲೀನ್ ಸ್ವೀಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ಭಾರತದ ಪ್ರಮುಖ ಪಾತ್ರವಹಿಸಿದ್ದರು. ಬೆಂಗಳೂರಿನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಅಶ್ವಿನ್ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಶ್ವಿನ್ ಅವರ ಪ್ರದರ್ಶನವನ್ನು ಹಾಡಿಹೊಗಳಿದರು. ವಿಶೇಷ ಎಂದರೆ ಅಶ್ವಿನ್ ಅವರನ್ನು ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂಬ ಮಾತನ್ನು ರೋಹಿತ್ ಶರ್ಮಾ ಪುನರಾವರ್ತಿಸಿದರು. ಈ ಮೂಲಕ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅವರ ಟೀಕೆಗೆ ಮರುತ್ತರ ನೀಡಿದರು.
ಸಾರ್ವಕಾಲಿಕ ಶ್ರೇಷ್ಠ ಮೊಹಾಲಿ ಟೆಸ್ಟ್‌ನ ನಂತರ ರೋಹಿತ್ ಶರ್ಮಾ ಅವರು ಕಪಿಲ್ ದೇವ್ ಅವರ ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಮುರಿದಾಗ ಅಶ್ವಿನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಹೊಗಳಿದ್ದರು. ರೋಹಿತ್ ಶರ್ಮಾ ಅವರ ಈ ಹೇಳಿಕೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು ಬಹುಶಃ ಭಾರತೀಯ ನಾಯಕನ ಬಾಯಿ ತಪ್ಪಿನಿಂದ ಹಾಗೆ ಹೇಳಿರಬಹುದು ಎಂದು ವ್ಯಂಗ್ಯವಾಡಿದ್ದರು. ಆದರೆ, ಬೆಂಗಳೂರಿನಲ್ಲಿ ಅದನ್ನೇ ಪುನರುಚ್ಚರಿಸುವ ಮೂಲಕ ರೋಹಿತ್ ಪರೋಕ್ಷವಾಗಿ ಪಾಕ್ ಕ್ರಿಕೆಟಿಗನಿಗೆ ಟಾಂಗ್ ನೀಡಿದರು.
ಬೆಂಗಳೂರು ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಅಶ್ವಿನ್ ಅವರನ್ನು ಏಕೆ ಸಾರ್ವಕಾಲಿಕ ಶ್ರೇಷ್ಠ ಎಂದು ಕರೆಯುವೆ ಎಂದು ಸ್ಪಷ್ಟನೆ ನೀಡಿದ ಹಿಟ್ಮ್ಯಾನ್, ನಾವು ಅಶ್ವಿನ್ಗೆ ಚೆಂಡನ್ನು ಕೊಟ್ಟಾಗಲೆಲ್ಲಾ ಅವನು ಪಂದ್ಯಶ್ರೇಷ್ಠ ಪ್ರದರ್ಶನ ನೀಡುತ್ತಾನೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಮುಂದಿನ ದಿನಗಳಲ್ಲಿ ನಾವು ಹಲವು ಮಹತ್ವದ ಸರಣಿಗಳನ್ನು ಆಡಬೇಕಿದೆ. ಆದ್ದರಿಂದ ಅಶ್ವಿನ್ ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನನ್ನ ಪ್ರಕಾರ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ರೋಹಿತ್ ಶರ್ಮಾ ತಿಳಿಸಿದರು.
ರೋಹಿತ್ ಶರ್ಮಾ ಮೊದಲು ಅಶ್ವಿನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಎಂದು ಬಣ್ಣಿಸಿದಾಗ, ಪಾಕಿಸ್ತಾನದ ರಶೀದ್ ಲತೀಫ್, “ಅಶ್ವಿನ್ ಅದ್ಭುತ ಬೌಲರ್ ಎಂಬುದರಲ್ಲಿ ಸಂದೇಹವಿಲ್ಲ. ತವರಿನ ಪರಿಸ್ಥಿತಿಯಲ್ಲಿ ಎಸ್‌ಜಿ ಬಾಲ್‌ನೊಂದಿಗೆ ಅಶ್ವಿನ್ ಅವರ ಪ್ರದರ್ಶನವನ್ನು ನಾವು ನೋಡಿದರೆ, ಅವರು ಭಾರತದ ಅತ್ಯುತ್ತಮ ಸ್ಪಿನ್ನರ್ ಎಂಬುದರಲ್ಲೂ ಸಂದೇಹವಿಲ್ಲ. ಆದಾಗ್ಯೂ, ಸಾಗರೋತ್ತರ ಪರಿಸ್ಥಿತಿಗಳಲ್ಲಿ ಅವರು ಪರಿಪೂರ್ಣರಲ್ಲ. ರೋಹಿತ್ ಶರ್ಮಾ ಅವರ ಮಾತನ್ನು ನಾನು ಒಪ್ಪುವುದಿಲ್ಲ. ಬಹುಶಃ ರೋಹಿತ್ ಶರ್ಮಾ ನಾಲಿಗೆ ತಪ್ಪಿ ಹೀಗೆ ಹೇಳಿರಬಹುದು ಎಂದಿದ್ದರು. ಇದೀಗ ಈ ಹಿಂದೆ ಹೇಳಿದ ಮಾತನ್ನು ಮತ್ತೊಮ್ಮೆ ಪುನರಾವರ್ತಿಸುವ ಮೂಲಕ ರೋಹಿತ್ ಶರ್ಮಾ ಪಾಕ್ ತಂಡದ ಮಾಜಿ ನಾಯಕ ರಶೀದ್ ಲತೀಫ್ಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(Rohit Sharma again says Ashwin all time Great Rashid Latif)