Rohit Sharma: ಸೋತರೂ ತನ್ನ ಆಟಗಾರರನ್ನು ಕೈಬಿಡದ ರೋಹಿತ್ ಶರ್ಮಾ: ಪಂದ್ಯ ಮುಗಿದ ಬಳಿಕ ಏನಂದ್ರು ನೋಡಿ

| Updated By: Vinay Bhat

Updated on: Aug 02, 2022 | 9:39 AM

India vs West Indies: ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಾಡಿದ ಕೆಲ ತಪ್ಪುಗಳಿಂದ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ಕೇಳಿ.

Rohit Sharma: ಸೋತರೂ ತನ್ನ ಆಟಗಾರರನ್ನು ಕೈಬಿಡದ ರೋಹಿತ್ ಶರ್ಮಾ: ಪಂದ್ಯ ಮುಗಿದ ಬಳಿಕ ಏನಂದ್ರು ನೋಡಿ
Rohit Sharma Post Match IND vs WI 2nd T20I
Follow us on

ಕೆರಿಬಿಯನ್ನರ ನಾಡಿನಲ್ಲಿ ಸತತ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದ್ದ ಟೀಮ್ ಇಂಡಿಯಾಕ್ಕೆ (Team India) ದಿಢೀರ್ ಸೋಲಿನ ಆಘಾತ ಉಂಟಾಗಿದೆ. ಇದುವರೆಗೆ ಭರ್ಜರಿ ಪ್ರದರ್ಶನ ತೋರುತ್ತಿದ್ದ ಭಾರತ ತಂಡ ವೆಸ್ಟ್​ ಇಂಡೀಸ್ (India vs West Indies) ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಕೇವಲ 138 ರನ್​ಗೆ ಆಲೌಟಾಗುವ ಮೂಲಕ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಬೌಲಿಂಗ್​ನಲ್ಲೂ ಎಡವಿತು. ಅದರಲ್ಲೂ ಕೊನೆಯ ಓವರ್​ನಲ್ಲಿ 10 ರನ್​ಗಳನ್ನು ತಡೆಯುವಲ್ಲಿ ವಿಫಲವಾಯಿತು. ಆವೇಶ್ ಖಾನ್ ನೋ ಬಾಲ್, ಫ್ರೀ ಹಿಟ್ ನೀಡಿ ದುಬಾರಿಯಾದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಾಡಿದ ಕೆಲ ತಪ್ಪುಗಳಿಂದ ಭಾರತ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma) ಈ ವಿಚಾರವಾಗಿ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

“ಮೊದಲನೆಯದಾಗಿ ನಮ್ಮ ಸ್ಕೋರ್ ಬೋರ್ಡ್​ನಲ್ಲಿ ರನ್​ಗಳೇ ಇರಲಿಲ್ಲ. ನಮ್ಮ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿತು. ಇಲ್ಲಿನ ಪಿಚ್ ಉತ್ತಮವಾಗಿತ್ತು. ಆದರೆ, ನಾವು ಅಂದುಕೊಂಡ ರೀತಿ ಸಾಗಲಾಗಿಲ್ಲ. ಈ ರೀತಿ ಕೆಲ ಪಂದ್ಯಗಳು ಆಗುವುದು ಸಹಜ. ಬ್ಯಾಟಿಂಗ್ ವಿಭಾಗದಲ್ಲಿ ಏನಾದರು ಹೊಸತನವನ್ನು ಪ್ರಯತ್ನ ಮಾಡುವಾಗ ಪ್ರತಿಬಾರಿ ಯಶಸ್ಸು ಸಿಗುವುದಿಲ್ಲ. ಆದರೆ, ಇದರಿಂದ ಪಾಠ ಕಲಿಯುತ್ತೇವೆ. ಇದರಿಂದ ಆಟಗಾರರಿಗೆ ಅವಕಾಶ ಸಿಗುತ್ತದೆ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದೇವೇಳೆ ಕೊನೆಯ ಓವರ್​ನಲ್ಲಿ ಗೆಲ್ಲಲು 10 ರನ್​ಗಳನ್ನು ತಡೆಯಬೇಕಿದ್ದ ಸಂದರ್ಭ ಅನುಭವಿ ಭುವನೇಶ್ವರ್ ಕುಮಾರ್ ಬದಲು ಆವೇಶ್ ಖಾನ್​ಗೆ ಬೌಲಿಂಗ್ ಕೊಟ್ಟ ಬಗ್ಗೆಯೂ ರೋಹಿತ್ ಸ್ಪಷ್ಟನೆ ನೀಡಿದ್ದಾರೆ. “ಭುವನೇಶ್ವರ್ ಈರೀತಿಯ ಸಂದರ್ಭದಲ್ಲಿ ತಂಡಕ್ಕೆ ಏನು ಮಾಡಿದ್ದಾರೆಂದು ನಮಗೆ ತಿಳಿದಿದೆ. ಅನೇಕ ವರ್ಷಗಳಿಂದ ಭುವಿ ಇದನ್ನು ಮಾಡಿಕೊಂಡು ಬಂದಿದ್ದಾರೆ. ಹಾಗೆಯೆ ಆವೇಶ್ ಖಾನ್, ಅರ್ಶ್​ದೀಪ್ ಸಿಂಗ್​ರಂತಹ ಇತರೆ ಬೌಲರ್​ಗಳಿಗೂ ಅವಕಾಶ ನೀಡಬೇಕು. ಯಾಕೆಂದರೆ ಅವರು ಈರೀತಿಯ ಸಂದರ್ಭದಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಹೀಗಾಗಿ ಅವರಿಗೆ ಅವಕಾಶ ನೀಡಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
IND vs WI 2nd T20: ಕೊನೆಯ ಓವರ್​ನಲ್ಲಿ ನೋ ಬಾಲ್, ಫ್ರೀ ಹಿಟ್: ಗೆಲ್ಲುವ ಪಂದ್ಯದಲ್ಲಿ ಸೋತ ಭಾರತ
Harjinder Kaur: ಭಾರತಕ್ಕೆ ಒಂಬತ್ತನೇ ಪದಕ: ವೇಟ್​​ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಹರ್ಜಿಂದರ್ ಕೌರ್
CWG 2022 Day 5, Schedule: 5ನೇ ದಿನ ಭಾರತಕ್ಕೆ ಇನ್ನೂ ನಾಲ್ಕು ಚಿನ್ನ? ಹೀಗಿದೆ ವೇಳಾಪಟ್ಟಿ
CWG 2022: ಇಂಗ್ಲೆಂಡ್ ಎದುರು ಸುಲಭವಾಗಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ ಹಾಕಿ ತಂಡ

ಮಾತು ಮುಂದುವರೆಸಿದ ರೋಹಿತ್, “ಇದು ಒಂದು ಪಂದ್ಯವಷ್ಟೆ. ನಮ್ಮ ಯುವ ಬೌಲರ್​ಗಳಲ್ಲಿ ಕೌಶಲ್ಯ ಮತ್ತು ಟಾಲೆಂಟ್ ಇದೆ. ನನ್ನ ತಂಡದ ಬೌಲರ್​ಗಳ ಮತ್ತು ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಈರೀತಿಯ ಟಾರ್ಗೆಟ್ ಇದ್ದಾಗ ಪಂದ್ಯ 13-14 ಓವರ್​​ನಲ್ಲಿ ಮುಗಿದು ಬಿಡುತ್ತದೆ. ಆದರೆ, ನಮ್ಮ ಬೌಲರ್​ಗಳನ್ನು ಇದನ್ನು ಕೊನೆಯ ಓವರ್ ವರೆಗೂ ಕೊಂಡೊಯ್ಯಿದಿದ್ದಾರೆ. ಬೌಲರ್​ಗಳು ಮಾಡಿದ ಯೋಜನೆ ಮತ್ತು ಅದನ್ನು ಕಾರ್ಯರೂಪಕ್ಕೆ ತಂದ ಬಗ್ಗೆ ಖುಷಿಯಿದೆ. ಇಂದಿನ ಪಂದ್ಯದಲ್ಲಿ ಸೋತ ಮಾತ್ರಕ್ಕೆ ನಾವು ಯಾವುದೇ ಬದಲಾವಣೆ ಮಾಡುವುದಿಲ್ಲ. ನಾವು ಧೈರ್ಯದಿಂದ ಇದ್ದೇವೆ,” ಎಂಬುದು ರೋಹಿತ್ ಹೇಳಿಕೆ.

ಇನ್ನು ಗೆದ್ದ ತಂಡದ ನಾಯಕ ನಿಕೋಲಸ್ ಪೂರನ್ ಮಾತನಾಡಿ, “ಕೊನೆಗೂ ನಾನು ಉಸಿರಾಡುವಂತಾಗಿದೆ. ನಾವು ಅನೇಕ ಪಂದ್ಯವನ್ನು ಗೆಲುವಿನ ಅಂಚಿನಲ್ಲಿ ಸೋತಿದ್ದೇವೆ. 6 ವಿಕೆಟ್ ಪಡೆದ ಒಬೆಡ್ ಬೌಲಿಂಗ್ ಅದ್ಭುತವಾಗಿತ್ತು. ಎಲ್ಲರೂ ಪಿಚ್​ಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೆಟ್ಮೇರ್ ಇನ್ನಷ್ಟು ಜವಾಬ್ಧಾರಿ ತೆಗೆದುಕೊಳ್ಳಬೇಕು. ಕಿಂಗ್ ನಮಗೋಸ್ಕರ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಂಜುರಿಯಿಂದ ಥೋಮಸ್ ಕಮ್​ಬ್ಯಾಕ್ ಮಾಡಿ ಅತ್ಯುತ್ತಮ ಆಟವಾಡಿದ್ದಾರೆ. ದಿನೇಶ್ ಕಾರ್ತಿಕ್ ವಿಕೆಟ್ ಮುಖ್ಯವಾಗಿತ್ತು. ಅದಕ್ಕಾಗಿ ಸ್ಟಂಪ್​ ಬಳಿ ಫುಲ್ ಮತ್ತು ನೇರವಾಗಿ ಬೌಲ್ ಮಾಡುವ ಪ್ಲಾನ್ ಮಾಡಿದೆವು, ಅದು ವರ್ಕ್ ಆಯಿತು,” ಎಂದು ಹೇಳಿದ್ದಾರೆ.