288 ರನ್​ಗಳ ಗುರಿ ರೋಚಕ ಘಟ್ಟದಲ್ಲಿ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ದ್ವಿತೀಯ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿ ಸೌತ್ ಆಫ್ರಿಕಾ ಆಸೀಸ್ ಪಡೆಯನ್ನು ಹೀನಾಯವಾಗಿ ಸೋಲಿಸಿದ್ದರು. ಇದೀಗ ಸರಣಿ ನಿರ್ಣಾಯಕವಾಗಿರುವ ಮೂರನೇ ಪಂದ್ಯ ಕೇಪ್​ಟೌನ್​ನಲ್ಲಿ ನಡೆಯುತ್ತಿದೆ.

288 ರನ್​ಗಳ ಗುರಿ ರೋಚಕ ಘಟ್ಟದಲ್ಲಿ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ
Sa Vs Aus
Image Credit source: GettyImages

Updated on: Oct 31, 2026 | 8:40 AM

ಕೇಪ್​ಟೌನ್​ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಪಂದ್ಯದ ನಾಲ್ಕು ದಿನಗಳ ಆಟ ಮುಗಿದಿದ್ದು, ಇದೀಗ ಐದನೇ ದಿನದಲ್ಲಿ ಕೊನೆಯ ಇನಿಂಗ್ಸ್​ನ ಅಸಲಿ ರೋಚಕತೆ ಶುರುವಾಗಿದೆ. ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 288 ರನ್​ ಬೇಕಿದ್ದರೆ, ಇತ್ತ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 10 ವಿಕೆಟ್​ಗಳ ಅಗತ್ಯವಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ಉಭಯ ತಂಡಗಳ ನಡುವೆ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 329 ರನ್ ಕಲೆಹಾಕಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು ಜೋಶ್ ಇಂಗ್ಲಿಸ್ (101) ಅವರ ಶತಕದ ನೆರವಿನೊಂದಿಗೆ 429 ರನ್​ ಕಲೆಹಾಕಿ ಸರ್ವಪತನ ಕಂಡಿತು.

100 ರನ್​ಗಳ ಹಿನ್ನಡೆ:

ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ರಯಾನ್ ರಿಕೆಲ್ಟನ್ 101 ರನ್ ಬಾರಿಸಿದರೆ, ವಿಯಾನ್ ಮುಲ್ಡರ್ 115 ರನ್ ಚಚ್ಚಿದರು. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ 387 ರನ್ ಪೇರಿಸಿ ಆಲೌಟ್ ಆಗಿದೆ.

ಇತ್ತ ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡ 288 ರನ್​ಗಳ ಗುರಿ ಪಡೆದುಕೊಂಡಿದೆ. ಇದೀಗ ಪಂದ್ಯವು ಐದನೇ ದಿನದಾಟಕ್ಕೆ ಕಾಲಿಟ್ಟಿದ್ದು, ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ 288 ರನ್ ಕಲೆಹಾಕಲಿದೆಯಾ ಅಥವಾ ಅದರೊಳಗೆ ಸೌತ್ ಆಫ್ರಿಕಾ 10 ವಿಕೆಟ್ ಉರುಳಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಮಾರ್ಕ್ಸ್ ಅಕೆರ್ಮನ್ , ಡೇವಿಡ್ ಬೆಡಿಂಗ್ಹ್ಯಾಮ್ , ಟೆಂಬಾ ಬವುಮಾ (ನಾಯಕ) , ಮ್ಯಾಥ್ಯೂ ಬ್ರೀಟ್​​ಝ್ಕೆ , ರಯಾನ್ ರಿಕಲ್ಟನ್ (ವಿಕೆಟ್ ಕೀಪರ್ ), ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ ,
ಸೈಮನ್ ಹಾರ್ಮರ್ , ಜೆರಾಲ್ಡ್ ಕೋಟ್ಝಿ , ಕಗಿಸೊ ರಬಾಡ.

ಇದನ್ನೂ ಓದಿ: ಬೆಂಕಿ ಬಿರುಗಾಳಿ… ಒಂದೇ ಮ್ಯಾಚ್​ನಲ್ಲಿ 20 ದಾಖಲೆಗಳು ಧೂಳೀಪಟ!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಟ್ ರೆನ್ಶಾ , ಮಾರ್ನಸ್ ಲಾಬುಶೇನ್ , ಕ್ಯಾಮರೋನ್ ಗ್ರೀನ್ ,
ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಕೂಪರ್ ಕೊನೊಲಿ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us