VIDEO: ಸಚಿನ್ ವಿಕೆಟ್ ಪಡೆದ ಫಾರೂಖಿ: ಕ್ರೀಡಾಂಗಣದಲ್ಲಿ ನೀರವ ಮೌನ..!

Sachin Tendulkar: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಎಂಬುದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್​ಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದು ನಟ ಅಕ್ಷಯ್ ಕುಮಾರ್ ನೇತೃತ್ವದ ಖಿಲಾಡಿ ಇಲೆವೆನ್ ತಂಡ.

VIDEO: ಸಚಿನ್ ವಿಕೆಟ್ ಪಡೆದ ಫಾರೂಖಿ: ಕ್ರೀಡಾಂಗಣದಲ್ಲಿ ನೀರವ ಮೌನ..!
Sachin Tendulkar-Munawar Faruqui
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 07, 2024 | 10:49 AM

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಶುರುವಾಗಿದೆ. 6 ತಂಡಗಳ ನಡುವಣ ಟೆನಿಸ್ ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಮಾಸ್ಟರ್ಸ್ XI ಮತ್ತು ಖಿಲಾಡಿ XI ತಂಡಗಳು. ಇಲ್ಲಿ ಮಾಸ್ಟರ್ಸ್ ತಂಡವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮುನ್ನಡೆಸಿದರೆ, ಖಿಲಾಡಿ ತಂಡದ ಸಾರಥ್ಯವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ವಹಿಸಿಕೊಂಡಿದ್ದರು.

ಒಂದೆಡೆ ಕ್ರಿಕೆಟಿಗರಿದ್ದರೆ, ಮತ್ತೊಂದೆಡೆ ಕಲಾವಿದರು ಕಣಕ್ಕಿಳಿದಿದ್ದರು. ಅದರಲ್ಲೂ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಜಮ್ಮು-ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಅವರನ್ನು ಆಡಿದ್ದು ವಿಶೇಷವಾಗಿತ್ತು.

ಮಾಸ್ಟರ್ಸ್ XI vs ಖಿಲಾಡಿ XI:

ಈ ಪಂದ್ಯದಲ್ಲಿ ಖಾಲಿಡಿ ನಂಬರ್ 1 ಖ್ಯಾತಿಯ ಅಕ್ಷಯ್ ಕುಮಾರ್ ಸಚಿನ್ ತೆಂಡೂಲ್ಕರ್‌ಗೆ ಬೌಲಿಂಗ್ ಮಾಡಿದರು. ಇದೇ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಕೂಡ ಗಮನ ಸೆಳೆದಿದ್ದರು. ಇದಾಗ್ಯೂ ಸಚಿನ್ ಅವರನ್ನು ಔಟ್ ಮಾಡುವಲ್ಲಿ ಹಿಂದಿ ಬಿಗ್ ಬಾಸ್ ವಿನ್ನರ್ ಮುನವರ್ ಫಾರೂಖಿ ಯಶಸ್ವಿಯಾದರು.

ಮುನವರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಲು ಯತ್ನಿಸಿದ ಸಚಿನ್ ತೆಂಡೂಲ್ಕರ್ ಸುಲಭ ಕ್ಯಾಚ್ ನೀಡಿದರು. ಇತ್ತ ಕ್ರಿಕೆಟ್ ದೇವರು ಔಟ್ ಆಗುತ್ತಿರುವುದು ಖುದ್ಧು ಮುನವರ್​ಗೂ ನಂಬಲಾಗಲಿಲ್ಲ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ಔಟಾಗುತ್ತಿದ್ದಂತೆ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿದ್ದು ವಿಶೇಷ. ಇನ್ನು ಖಿಲಾಡಿ ಇಲೆವೆನ್ ವಿರುದ್ಧದ ಈ ಪಂದ್ಯವನ್ನು ಮಾಸ್ಟರ್ಸ್​ ಇಲೆವೆನ್ 5 ರನ್​ಗಳಿಂದ ಗೆದ್ದುಕೊಂಡಿತು.

ISPL ಟೂರ್ನಿ:

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಎಂಬುದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ. ದೇಶದ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟರುಗಳಿಗೆ ವೇದಿಕೆ ಕಲ್ಪಿಸಲು ಈ ಟೂರ್ನಿಯನ್ನು ಶುರು ಮಾಡಲಾಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ 6 ತಂಡಗಳನ್ನು ಸಿನಿಮಾ ತಾರೆಯರು ಖರೀದಿಸಿರುವುದು ವಿಶೇಷ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುವ ತಂಡಗಳು ಮತ್ತು ಅದರ ಮಾಲೀಕರು ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

  • ಮಾಜ್ಹಿ ಮುಂಬೈ ತಂಡ: ಅಮಿತಾಬ್ ಬಚ್ಚನ್ (ಬಾಲಿವುಡ್ ನಟ)
  • ಶ್ರೀನಗರ ಕೆ ವೀರ್ ತಂಡ: ಅಕ್ಷಯ್ ಕುಮಾರ್ (ಬಾಲಿವುಡ್ ನಟ)
  • ಬೆಂಗಳೂರು ಸ್ಟ್ರೈಕರ್ಸ್ ತಂಡ: ಹೃತಿಕ್ ರೋಷನ್ (ಬಾಲಿವುಡ್ ನಟ)
  • ಚೆನ್ನೈ ಸಿಂಗಮ್ಸ್ ತಂಡ: ಸೂರ್ಯ (ಕಾಲಿವುಡ್ ನಟ)
  • ಫಾಲ್ಕನ್ ರೈಸರ್ಸ್ ಹೈದರಾಬಾದ್ ತಂಡ: ರಾಮ್ ಚರಣ್ (ಟಾಲಿವುಡ್ ನಟ)
  • ಟೈಗರ್ಸ್ ಆಫ್ ಕೋಲ್ಕತ್ತಾ ತಂಡ: ಸೈಫ್ ಅಲಿ ಖಾನ್ (ಬಾಲಿವುಡ್ ನಟ)
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು