Rishabh Pant: ರಾಜಸ್ಥಾನ್ ವಿರುದ್ಧ 3 ರನ್ಗೆ ರಿಷಭ್ ಪಂತ್ ಔಟಾದಾಗ ಸಂಜೀವ್ ಗೋಯೆಂಕಾ ಏನು ಮಾಡಿದ್ರು ನೋಡಿ
RR vs LSG, IPL 2025: ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ರಿಷಭ್ ಪಂತ್ ಅರ್ಧಶತಕ ಹೊರತುಪಡಿಸಿದರೆ, ಯಾವುದೇ ಇನ್ನಿಂಗ್ಸ್‌ನಲ್ಲಿ ಅವರು 25 ರನ್‌ಗಳನ್ನು ಸಹ ದಾಟಲು ಸಾಧ್ಯವಾಗಿಲ್ಲ. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಔಟಾದ ನಂತರ ಲಕ್ನೋದ ಮಾಲೀಕ ಸಂಜೀವ್ ಗೋಯೆಂಕಾ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಬೆಂಗಳೂರು (ಏ. 20): ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಬ್ಯಾಟ್ ಐಪಿಎಲ್ 2025 ರಲ್ಲಿ (Indian Premier League) ಸದ್ದೇ ಮಾಡುತ್ತಿಲ್ಲ. ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ನಿಂದ ಕಳಪೆ ಪ್ರದರ್ಶನ ತೋರಿದರು. ರಿಷಭ್ 9 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ನಿರ್ಗಮಿಸಿದರು. ಈ ಋತುವಿನಲ್ಲಿ ಅವರ ಕಳಪೆ ಫಾರ್ಮ್ ಮುಂದುವರೆದಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧದ ಅವರ ಅರ್ಧಶತಕ (63 ರನ್) ಹೊರತುಪಡಿಸಿದರೆ, ಯಾವುದೇ ಇನ್ನಿಂಗ್ಸ್‌ನಲ್ಲಿ ಅವರು 25 ರನ್‌ಗಳನ್ನು ಸಹ ದಾಟಲು ಸಾಧ್ಯವಾಗಿಲ್ಲ.
ಈ ಐಪಿಎಲ್‌ನಲ್ಲಿ ಪಂತ್ ಅವರ ಇನ್ನಿಂಗ್ಸ್ ಹೀಗಿದೆ – 0, 15, 2, 2, 21, 63 ಮತ್ತು 3. ಅದೇ ಸಮಯದಲ್ಲಿ, ಆರ್‌ಆರ್ ವಿರುದ್ಧ ರಿಷಭ್ ಪಂತ್ ಔಟಾದ ನಂತರ ಲಕ್ನೋದ ಮಾಲೀಕ ಸಂಜೀವ್ ಗೋಯೆಂಕಾ ಅವರ ಪ್ರತಿಕ್ರಿಯೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
Goenka’s Reaction after pant Dismissal 🤣😭😭
He will cook him badly Tonight 😭 pic.twitter.com/udungMH4Aa
— 𝙎𝙤𝙣𝙪 (@KLfied_) April 19, 2025
ಲಕ್ನೋ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 8 ನೇ ಓವರ್ ಅನ್ನು ರಾಜಸ್ಥಾನ ತಂಡದ ವನಿಂಡು ಹಸರಂಗ ಎಸೆದರು. ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ, ರಿಷಭ್ ಪಂತ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಆದರೆ ಅವರ ಬ್ಯಾಟ್ ಮೇಲಿನ ಅಂಚಿಗೆ ತಗುಲಿತು ಮತ್ತು ವಿಕೆಟ್ ಕೀಪರ್ ಧ್ರುವ್ ಜುರೆಲ್ ಅದ್ಭುತ ಕ್ಯಾಚ್ ಹಿಡಿದರು. ಪಂತ್ ಔಟಾದ ನಂತರ, ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಅವರ ಪ್ರತಿಕ್ರಿಯೆ ವಿಚಿತ್ರವಾಗಿ ಕಂಡುಬಂತು. ಪಂತ್ ಔಟಾದ ನಂತರ, ಅವರು ತಮ್ಮ ಬಾಯಿಯ ಕಡೆಗೆ ಬೆರಳು ತೋರಿಸಿ ಯಾರಿಗೊ ಸಿಗ್ನಲ್ ನೀಡುತ್ತಿರುವುದು ಕಂಡುಬಂದಿತು.
View this post on Instagram
ರಾಜಸ್ಥಾನ ವಿರುದ್ಧದ ಈ ಪಂದ್ಯದಲ್ಲಿ ಲಕ್ನೋ ತಂಡ ಕೇವಲ 2 ರನ್‌ಗಳಿಂದ ಜಯಗಳಿಸಿತು. ಇನ್ನಿಂಗ್ಸ್‌ನ ಕೊನೆಯ ಓವರ್ ಎಸೆಯಲು ಬಂದ ಆವೇಶ್ ಖಾನ್ ಚುರುಕಾಗಿ ಬೌಲಿಂಗ್ ಮಾಡಿ ಕೇವಲ 6 ರನ್‌ಗಳನ್ನು ನೀಡಿ ಒಂದು ವಿಕೆಟ್ ಪಡೆದರು. ಈ ಮೂಲಕ ರಾಜಸ್ಥಾನ ತಂಡ ಕೇವಲ 2 ರನ್‌ಗಳಿಂದ ಗುರಿ ತಲುಪುವಲ್ಲಿ ವಿಫಲವಾಯಿತು. ಇದು ಈ ಋತುವಿನಲ್ಲಿ ರಾಜಸ್ಥಾನ ತಂಡದ 5ನೇ ಸೋಲು ಆಗಿದೆ.
Avesh Khan: ಕೊನೆಯ ಓವರ್‌ನಲ್ಲಿ ಮತ್ತೆ ಸೋತ ರಾಜಸ್ಥಾನ್: ಪಂದ್ಯದ ಗತಿಯನ್ನೇ ಬದಲಾಯಿಸಿತು ಆವೇಶ್ ಖಾನ್ ಓವರ್
ಈ ಪಂದ್ಯದ ಬಗ್ಗೆ ಮಾತನಾಡುತ್ತಾ, ಲಕ್ನೋ ನಾಯಕ ರಿಷಭ್ ಪಂತ್ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ, ಐಡೆನ್ ಮಾರ್ಕ್ರಾಮ್ ಮತ್ತು ಆಯುಷ್ ಬಡೋನಿ ಅವರ ಬಲಿಷ್ಠ ಬ್ಯಾಟಿಂಗ್ ನಿಂದಾಗಿ ನಿಗದಿತ 20 ಓವರ್ ಗಳಲ್ಲಿ 180 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ರಾಜಸ್ಥಾನ ತಂಡವು ತನ್ನ ತವರು ನೆಲದಲ್ಲಿ ಕೇವಲ 178 ರನ್ ಗಳಿಸಲು ಶಕ್ತವಾಗೊ ಸೋಲು ಕಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ