IPL 2025: ಗೆಲುವಿನ ನಡುವೆಯೂ ನಾಯಕತ್ವ ಕಳೆದುಕೊಳ್ಳಲಿರುವ ರಿಯನ್ ಪರಾಗ್
Rajasthan Royals Captain: ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆದರೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ್ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ. ಏಕೆಂದರೆ ಇಂಜುರಿಯಿಂದಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಈಗ ಫಿಟ್ ಆಗಿದ್ದು, ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.

ಐಪಿಎಲ್ 2025 (IPL 2025) ರಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ರಾಜಸ್ಥಾನ ರಾಯಲ್ಸ್ ಅಂತಿಮವಾಗಿ ಯಶಸ್ಸಿನ ರುಚಿ ಸವಿದಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿತು. ಹಂಗಾಮಿ ನಾಯಕ ರಿಯಾನ್ ಪರಾಗ್ ನಾಯಕತ್ವದಲ್ಲಿ ತಂಡವು ಗೆಲುವಿನ ಹಾದಿಯನ್ನು ಕಂಡುಕೊಂಡಿತು. ಆದರೆ ಈ ಗೆಲುವಿನ ನಂತರ, ರಾಜಸ್ಥಾನ ಮತ್ತೆ ತನ್ನ ನಾಯಕನನ್ನು ಬದಲಾಯಿಸಬಹುದು. ವಾಸ್ತವವಾಗಿ, ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ (Sanju Samson) ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ಘೋಷಿಸಿದ್ದು, ಅವರು ಈಗ ವಿಕೆಟ್ ಕೀಪಿಂಗ್ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇದರೊಂದಿಗೆ, ಮುಂದಿನ ಪಂದ್ಯದಿಂದ ಅವರು ಮತ್ತೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸ್ಯಾಮ್ಸನ್‌ಗೆ COE ನಿಂದ ಹಸಿರು ನಿಶಾನೆ
ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ವೈದ್ಯಕೀಯ ತಂಡವು ಸಂಜು ಸ್ಯಾಮ್ಸನ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಸಿಎಸ್ಕೆ ವಿರುದ್ಧದ ಮೂರನೇ ಪಂದ್ಯದ ನಂತರವೇ ಸ್ಯಾಮ್ಸನ್ ತಮ್ಮ ಫಿಟ್ನೆಸ್ ಸ್ಥಿತಿಯನ್ನು ಪರಿಶೀಲಿಸಲು ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿರುವ ಕೇಂದ್ರದ ವೈದ್ಯಕೀಯ ತಂಡವು ಸ್ಯಾಮ್ಸನ್, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಲು ಅನುಮತಿ ನೀಡಿದೆ
ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ವೇಳೆ ಸಂಜು ಸ್ಯಾಮ್ಸನ್ ಬೆರಳಿಗೆ ಗಾಯವಾಗಿತ್ತು. ಅಂದಿನಿಂದ ಅವರು ಚೇತರಿಕೆಯ ಹಾದಿಯಲ್ಲಿದ್ದರು. ಹೀಗಾಗಿ ಐಪಿಎಲ್ ಆರಂಭದಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿದ್ದರೂ, ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡವು ಅವರನ್ನು ವಿಕೆಟ್ ಕೀಪಿಂಗ್ ಅಥವಾ ಫೀಲ್ಡಿಂಗ್ ಮಾಡುವುದನ್ನು ನಿಷೇಧಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ರಾಜಸ್ಥಾನ ರಾಯಲ್ಸ್ ಈ ಸೀಸನ್ನ ಮೊದಲ 3 ಪಂದ್ಯಗಳಲ್ಲಿ ಸ್ಯಾಮ್ಸನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಬಳಸಿಕೊಂಡು ಅವರನ್ನು ಕೇವಲ ಬ್ಯಾಟಿಂಗ್ಗೆ ಮಾತ್ರ ಸೀಮಿತಿಗೊಳಿಸಿತ್ತು.
IPL 2025: ಒಂದೇ ಪಂದ್ಯಕ್ಕೆ ಸುಸ್ತಾದ ಸಂಜು ಸ್ಯಾಮ್ಸನ್; ಹಾರಿದವು ವಿಕೆಟ್ಸ್! ವಿಡಿಯೋ ನೋಡಿ
ಈ ಪಂದ್ಯದಿಂದ ತಂಡದ ನಾಯಕತ್ವ
ಸಂಜು ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ, ರಾಜಸ್ಥಾನ್ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು ಆದರೆ ಮೂರನೇ ಪಂದ್ಯದಲ್ಲಿ ತಂಡವು ಬಲವಾದ ಪುನರಾಗಮನ ಮಾಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಸೀಸನ್ನ ಮೊದಲ ಗೆಲುವು ದಾಖಲಿಸಿತು. ಆದರೆ ಈಗ ರಿಯಾನ್ ಪರಾಗ್, ಸಂಜು ಸ್ಯಾಮ್ಸನ್ ಬದಲಿಗೆ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ರಾಜಸ್ಥಾನದ ಮುಂದಿನ ಪಂದ್ಯ ಏಪ್ರಿಲ್ 5 ರಂದು ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯದಿಂದ ಸಂಜು ನಾಯಕನಾಗಿ ತಂಡಕ್ಕೆ ಮರಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ