ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಪ್ರಮುಖ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸಂಕಷ್ಟದ ಪರಿಸ್ಥಿತಿಯಿಂದ ಪಾರುಮಾಡಿದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಶ್ಲಾಘಿಸಿದ್ದಾರೆ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 336 ರನ್ ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮುನ್ನಡೆ ಪಡೆದಿದೆ.
ಶಾರ್ದೂಲ್ ಠಾಕೂರ್ 94 ಎಸೆತಗಳನ್ನ ಎದುರಿಸಿ ಭರ್ಜರಿ 2 ಸಿಕ್ಸರ್ಗಳೊಂದಿಗೆ 54 ರನ್ ಸಿಡಿಸಿದರೆ, 110 ಬಾಲ್ಗಳನ್ನ ಎದುರಿಸಿರುವ ವಾಷಿಂಗ್ಟನ್ ಸುಂದರ್ 50 ರನ್ ಬಾರಿಸಿದ್ದಾರೆ.
ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯಾ ರಹಾನೆ ಅವರ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಬಾಲ್ ಪಿಚ್ ಆದ ಸ್ಥಳಕ್ಕೆ ನಾನು ತಲುಪಿದೆ, ಆದರೆ ಹೊಡೆತ ಬಾರಿಸುವಾಗ ಚೆಂಡನ್ನು ನಾನಂದುಕೊಂಡಂತೆ ಸರಿಯಾಗಿ ಕನೆಕ್ಟ್ ಮಾಡಲಾಗಲಿಲ್ಲ ಮತ್ತು ಅದು ಮಿಸ್ಟೈಮ್ ಅಯಿತು. ಸ್ಕ್ವೇರ್ಲೆಗ್ ಮತ್ತು ಲಾಂಗ್ ಆನ್ ಮಧ್ಯೆಯಿದ್ದ ದೊಡ್ಡ ಗ್ಯಾಪ್ ನಡುವೆ ಚೆಂಡನ್ನು ಬಾರಿಸುವ ಇರಾದೆ ನನ್ನದಾಗಿತ್ತು ಎಂದು ರೋಹಿತ್ ಹೇಳಿದ್ದಾರೆ
ಭಾರತ- ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಳೆಯಿಂದ ಕೆಲಕಾಲ ಸ್ಥಗಿತಗೊಂಡಿದೆ. ಮಳೆಗೂ ಮುನ್ನ ಆಸ್ಟ್ರೇಲಿಯಾ ನೀಡಿರುವ 369 ರನ್ಗಳನ್ನು ಬೆನ್ನತ್ತಿರುವ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
ಈಗಾಗಲೇ ಪಂದ್ಯದ ಎರಡನೇ ದಿನದ ಆಟ ಶುರುವಾಗಿದ್ದು, ಆಸ್ಟ್ರೇಲಿಯಾ ತಂಡ 2ನೇ ದಿನದ ಮೊದಲ ಸೆಷನ್‌ನಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 369 ರನ್ಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಐವರು ಬೌಲರ್ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಟೀಮ್ ಇಂಡಿಯಾ ಮಾಡಿಕೊಂಡಿದ್ದರೆ ಅವರಲ್ಲಿ ಒಬ್ಬ ಅನುಭವಿ ಬೌಲರ್ನನ್ನು ಸೇರಿಸಿಕೊಳ್ಳಬೇಕಿತ್ತು. ಈ ಟೆಸ್ಟ್ನಲ್ಲಿ ಆಡುತ್ತಿರುವವರೆಲ್ಲ ಅನನುಭವಿಗಳು. ಮತ್ತೊಬ್ಬ ಸ್ಪಿನ್ನರ್ನನ್ನು ಆಡಿಸಿದ್ದರೆ ಪ್ರಮಾದವೇನೂ ಆಗುತ್ತಿರಲಿಲ್ಲ ಎಂದು ಅಗರ್ಕರ್ ಹೇಳಿದ್ದಾರೆ.
ಕೇವಲ ತನ್ನ ಮೊದಲ ಹೆಸರಿನೊಂದಿಗೆ ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವ ಮಹಿಳೆಯೊಬ್ಬರು ಶುಕ್ರವಾರದಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಕಚೇರಿಗೆ ತೆರಳಿ ಬ್ರಿಸ್ಬೆನ್ನ ಗಬ್ಬಾ ಮೈದಾನದಲ್ಲಿ ಶುಕ್ರವಾರದಂದು ನಡೆದ ಅಸಭ್ಯ ಘಟನೆಯ ಪ್ರತ್ಯಕ್ಷ ವಿವರವನ್ನು ನೀಡಿದ್ದಾರೆ.