T20 World Cup 2024 News
2 | Rohit Sharma | 257 | |
3 | Travis Head | 255 | |
4 | Quinton de Kock | 243 | |
5 | Ibrahim Zadran | 231 |
2 | Arshdeep Singh | 17 | |
3 | Jasprit Bumrah | 15 | |
4 | Anrich Nortje | 15 | |
5 | Rashid Khan | 14 |
2 | Akeal Hosein | 5/11 | |
3 | Anrich Nortje | 4/7 | |
4 | Tanzim Hasan Sakib | 4/7 | |
5 | Arshdeep Singh | 4/9 |
ಐಸಿಸಿಯ ಮೂರು ಪ್ರಮುಖ ಟೂರ್ನಿಗಳಲ್ಲಿ ಟಿ20 ವಿಶ್ವಕಪ್ ಕೂಡ ಒಂದು. 2007 ರಲ್ಲಿ ಪ್ರಾರಂಭವಾದ ಈ ಟೂರ್ನಿಯಲ್ಲಿ ಈಗಾಗಲೇ 8 ಆವೃತ್ತಿಗಳನ್ನು ಆಡಲಾಗಿದೆ. ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಟ್ರೋಫಿ ಎತ್ತಿ ಹಿಡಿದರೆ, 2022 ರಲ್ಲಿ ನಡೆದ ಕೊನೆಯ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಇನ್ನು ಈವರೆಗೆ ಆಯೋಜಿಸಲಾದ 8 ಟಿ20 ವಿಶ್ವಕಪ್ಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ತಲಾ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇನ್ನು ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಒಂದೊಂದು ಬಾರಿ ಕಪ್ ಗೆದ್ದುಕೊಂಡಿದೆ. ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ಟೂರ್ನಿಯ 9ನೇ ಆವೃತ್ತಿಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿದೆ.
ಪ್ರಶ್ನೆ-ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಎಲ್ಲಿ ಆಡಲಾಯಿತು?
ಉತ್ತರ- 2007 ರಲ್ಲಿ ನಡೆದ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಿತ್ತು.
ಪ್ರಶ್ನೆ- ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡ ಯಾರು?
ಉತ್ತರ- 2007 ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಪ್ರಶ್ನೆ-ಪಾಕಿಸ್ತಾನ್ ಇದುವರೆಗೆ ಎಷ್ಟು ಬಾರಿ ಟಿ20 ವಿಶ್ವಕಪ್ ಗೆದ್ದಿದೆ?
ಉತ್ತರ- ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.