T20 World Cup 2024 Team
ಕ್ರೀಡಾ ಸುದ್ದಿ
ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯುತ್ತಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಯುಎಸ್ಎ ನಲ್ಲಿ ಟಿ20 ವಿಶ್ವಕಪ್ ಅನ್ನು ಆಯೋಜಿಸಲಾಗುತ್ತಿದೆ. ಅದರಂತೆ ಆತಿಥೇಯ ತಂಡವಾಗಿ ವೆಸ್ಟ್ ಇಂಡೀಸ್ ಜೊತೆ ಯುಎಸ್ಎ ತಂಡ ಕೂಡ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಂಡಿದೆ. ಇನ್ನುಳಿದಂತೆ ಭಾರತ, ಕೆನಡಾ, ಐರ್ಲೆಂಡ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನಮೀಬಿಯಾ, ಒಮಾನ್, ಸ್ಕಾಟ್ಲೆಂಡ್, ಅಫ್ಘಾನಿಸ್ತಾನ್, ನ್ಯೂಝಿಲೆಂಡ್, ಪಪುವಾ ನ್ಯೂಗಿನಿಯಾ, ಉಗಾಂಡಾ, ಬಾಂಗ್ಲಾದೇಶ್, ನೆದರ್ಲ್ಯಾಂಡ್ಸ್, ನೇಪಾಳ, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ.
ಪ್ರಶ್ನೆ-ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ತಂಡಗಳಾವುವು?
ಉತ್ತರ- ಯುಎಸ್ಎ ಮತ್ತು ಉಗಾಂಡಾ ತಂಡಗಳು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುತ್ತಿವೆ.
ಪ್ರಶ್ನೆ-ಟಿ20 ವಿಶ್ವಕಪ್ 2024ರ ಪಂದ್ಯಗಳು ಯುಎಸ್ಎಯ ಯಾವ ನಗರಗಳಲ್ಲಿ ನಡೆಯಲಿದೆ?
ಪ್ರಶ್ನೆ-ಯುಎಸ್ಎ ಅನ್ನು ಹೊರತುಪಡಿಸಿ, 2024ರ T20 ವಿಶ್ವಕಪ್ಗೆ ಆತಿಥ್ಯವಹಿಸುವ ದೇಶ ಯಾವುದು?
ಉತ್ತರ- ಈ ಬಾರಿಯ ಟಿ20 ವಿಶ್ವಕಪ್ ಅನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿದೆ.
ಪ್ರಶ್ನೆ-ಅತೀ ಹೆಚ್ಚು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಯಾವುದು?