
2025 ರ ಏಷ್ಯಾಕಪ್‌ಗಾಗಿ (Asia Cup 2025) ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಈ ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ಗೆ (Shreyas Iyer) ಈ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆಶ್ಚರ್ಯಗೊಳ್ಳುವಂತೆ ಮಾಡಿದೆ. ಏಕೆಂದರೆ ಶ್ರೇಯಸ್ ಅಯ್ಯರ್ ಖಂಡಿತವಾಗಿಯೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಅವರು ಆಶಿಸಿದರು ಆದರೆ ಇದು ಸಂಭವಿಸಲಿಲ್ಲ. ಆದಾಗ್ಯೂ, ತಂಡ ಘೋಷಣೆಯ ನಂತರವೂ, ಶ್ರೇಯಸ್ ಅಯ್ಯರ್ ತಂಡವನ್ನು ಸೇರಬಹುದು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಯಮಗಳ ಪ್ರಕಾರ, ಶ್ರೇಯಸ್ ಅಯ್ಯರ್ ಈಗಲೂ ಟೀಂ ಇಂಡಿಯಾಕ್ಕೆ ಎಂಟ್ರಿಕೊಡಬಹುದು. ಈ ನಿಯಮದಿಂದಾಗಿ, ಶ್ರೇಯಸ್ ಅಯ್ಯರ್ ಜೊತೆಗೆ, ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಸೇರಿಕೊಳ್ಳುವ ಅವಕಾಶವನ್ನು ಪಡೆಯಬಹುದು.
ಎಸಿಸಿ ನಿಯಮದ ಪ್ರಕಾರ ಶ್ರೇಯಸ್ ಅಯ್ಯರ್ ಈಗಲೂ ಭಾರತ ತಂಡವನ್ನು ಕೂಡಿಕೊಳ್ಳಬಹುದು. ವಾಸ್ತವವಾಗಿ, ನಿಯಮದ ಪ್ರಕಾರ, ಯಾವುದೇ ತಂಡದ ಆಟಗಾರ ಗಾಯಗೊಂಡರೆ ಅಥವಾ ತಂಡದ ಆಡಳಿತ ಮಂಡಳಿಯು ಒಬ್ಬ ಆಟಗಾರನನ್ನು ಬದಲಾಯಿಸಬೇಕೆಂದು ಭಾವಿಸಿದರೆ, ಅವನ ಸ್ಥಾನದಲ್ಲಿ ಮತ್ತೊಬ್ಬ ಕ್ರಿಕೆಟಿಗನನ್ನು ತಂಡಕ್ಕೆ ತೆಗೆದುಕೊಳ್ಳಬಹುದು. ಈ ನಿಯಮದ ಪ್ರಕಾರ, ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗದ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಭಾರತದ ಯಾವುದೇ ಆಟಗಾರನು ಟೂರ್ನಮೆಂಟ್‌ಗೆ ಮೊದಲು ಅಥವಾ ಏಷ್ಯಾಕಪ್ 2025 ರ ಸಮಯದಲ್ಲಿ ಗಾಯಗೊಂಡರೆ, ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಬಹುದು.
ಶ್ರೇಯಸ್ ಅಯ್ಯರ್ ಟಿ20 ಕ್ರಿಕೆಟ್‌ನಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದ ಶ್ರೇಯಸ್ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರು. ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಅಯ್ಯರ್ ಆಡಿದ 17 ಪಂದ್ಯಗಳಲ್ಲಿ 50.33 ರ ಸರಾಸರಿಯಲ್ಲಿ 604 ರನ್ ಗಳಿಸಿದ್ದರು.
Shreyas Iyer: ಟೀಂ ಇಂಡಿಯಾದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ಗೆ ಮತ್ತೆ ಅನ್ಯಾಯ
ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಭಾರತ ಪರ 51 ಪಂದ್ಯಗಳನ್ನು ಆಡಿರುವ ಅಯ್ಯರ್ 30.66 ಸರಾಸರಿಯಲ್ಲಿ 1104 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಎಂಟು ಅರ್ಧಶತಕಗಳಿವೆ. ಒಟ್ಟಾರೆಯಾಗಿ, ಅವರು 240 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 34.08 ಸರಾಸರಿಯಲ್ಲಿ 6578 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 147 ರನ್ ಆಗಿದೆ. ಅಯ್ಯರ್ ಈ ಸ್ವರೂಪದಲ್ಲಿ ಮೂರು ಶತಕ ಮತ್ತು 43 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Sun, 24 August 25