ಮತ್ತೆ ಸುಲಭ ಕ್ಯಾಚ್ ಬಿಟ್ಟ ಹಸನ್ ಅಲಿ: ಬಕೆಟ್ ಹಿಡ್ಕೊಂಡು ಫೀಲ್ಡಿಂಗ್ ಮಾಡು ಎಂದ ನೆಟ್ಟಿಗರು
SL vs PAK: ಮೊದಲ ದಿನ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ ಅದ್ಭುತ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು.
ಹಸನ್ ಅಲಿಗೂ ಸುಲಭ ಕ್ಯಾಚ್ಗೂ ಏನೋ ಸಂಬಂಧವಿದೆ. ಆ ಸುಲಭ ಕ್ಯಾಚ್ ಅನ್ನು ಕೈಬಿಡುವುದ್ರಲ್ಲಿ ಅವಿನಾಭಾವ ಸಂಬಂಧವಿದೆ. ಇದನ್ನು ನಾವು ಹೇಳ್ತಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬರುತ್ತಿರುವ ಮಾತುಗಳಿವು. ಹೌದು, ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ಕೈಚೆಲ್ಲುವ ಮೂಲಕ ಹಸನ್ ಅಲಿ ಪಂದ್ಯದ ಸೋಲಿಗೆ ಕಾರಣರಾಗಿದ್ದರು. ಈ ವೇಳೆ ಪಾಕ್ ಕ್ರಿಕೆಟಿಗನ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಳಿಗಳಾಗಿತ್ತು. ಇವೆಲ್ಲವನ್ನೂ ಮರೆತಿದ್ದ ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ಹಸನ್ ಅಲಿ ಮತ್ತೆ ಈ ಹಿಂದಿನ ಕ್ಯಾಚ್ ಅನ್ನು ನೆನಪಿಸಿದ್ದಾರೆ. ಅದರಂತೆ ಇದೀಗ ಮತ್ತೆ ಟೀಕಾಪ್ರಹಾರ ಶುರುವಾಗಿದೆ. ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಹಸನ್ ಅಲಿ ಮತ್ತೊಮ್ಮೆ ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಹಸನ್ ಅಲಿ ಸುಭ ಕ್ಯಾಚ್ ಅನ್ನು ಕೈಬಿಟ್ಟರು. ನಸೀಮ್ ಶಾ ಓವರ್‌ನಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಕಸುನ್ ರಜಿತಾ ಬಿರುಸಿನ ಹೊಡೆತಕ್ಕೆ ಮುಂದಾದರು, ಆದರೆ ಚೆಂಡು ಸ್ಕ್ವೇರ್ ಲೆಗ್ನತ್ತ ಚಿಮ್ಮಿತ್ತು. ಮುಗಿಲೆತ್ತರಕ್ಕೆ ಚಿಮ್ಮಿದ ಚೆಂಡನ್ನು ಹಿಡಿಯಲು ಸಾಕಷ್ಟು ಸಮಯವಕಾಶವಿತ್ತು. ಆದರೆ ಈ ಸುಲಭ ಕ್ಯಾಚ್ ಅನ್ನು ಹಸನ್ ಅಲಿ ಕೈಚೆಲ್ಲಿದ್ದರು.
Everything is temporary but Hasan Ali drop catch is permanent?? pic.twitter.com/AGfdI7xFBZ
— Junaid Javed (@junaidjaved248) July 16, 2022
Me getting flashbacks whenever Hasan Ali drops a catch pic.twitter.com/Ft7JzKNbQt
— huma (@whoishumaanyway) July 16, 2022
ಇದರ ಬೆನ್ನಲ್ಲೇ ಹಸನ್ ಅಲಿ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಅನೇಕರು ಟಿ20 ವಿಶ್ವಕಪ್ ಕ್ಯಾಚ್ ಅನ್ನು ಪ್ರಸ್ತಾಪಿಸಿ ಟ್ರೋಲ್ ಮಾಡುತ್ತಿದ್ದಾರೆ. ಹಸನ್ ಅಲಿ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೀಮ್ಸ್ ವೈರಲ್ ಆಗಿದ್ದು, ಕೆಲವರು ತಮ್ಮ ಸಿಟ್ಟನ್ನು ತೋಡಿಕೊಂಡರೆ ಮತ್ತೆ ಕೆಲವರು ಪಾಕ್ ಕ್ರಿಕೆಟಿಗನನ್ನು ವ್ಯಂಗ್ಯದ ಸರಕಾಗಿಸಿದ್ದಾರೆ. ಅದರಲ್ಲೂ ಕೆಲವರು ಹಸನ್ ಅಲಿ ಬಕೆಟ್ ಹಿಡಿದು ಫೀಲ್ಡಿಂಗ್ ಮಾಡಿದ್ರೆ ಮಾತ್ರ ಕ್ಯಾಚ್ ಹಿಡಿಯಬಹುದು ಎಂದು ಹಂಗಿಸಿದ್ದಾರೆ.
Everything is temporary but Hasan Ali dropping catch is permanent ?!#SLvPAK pic.twitter.com/Qda9pUyavk
— Akhunzada Ashraf ✨! (@akhunzada10_) July 16, 2022
ಇನ್ನ ಗಾಲೆ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲ ದಿನ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ ಅದ್ಭುತ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಹಸನ್ ಅಲಿ ಮತ್ತು ಯಾಸಿರ್ ಶಾ ತಲಾ 2 ವಿಕೆಟ್ ಕಬಳಿಸಿದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 24 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.