Sign In

By signing in or creating an account, you agree with Associated Broadcasting Company's Terms & Conditions and Privacy Policy.

‘Baby AB’: U19 ವಿಶ್ವಕಪ್​ನಲ್ಲಿ ABDಯಂತೆ ಬ್ಯಾಟ್ ಬೀಸಿದ ಬೇಬಿ ಎಬಿ

Dewald Brevis: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 232 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 187 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ರೆವಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾ ಪರ ಉತ್ತಮವಾಗಿ ಆಡಿರಲಿಲ್ಲ.

'Baby AB': U19 ವಿಶ್ವಕಪ್​ನಲ್ಲಿ ABDಯಂತೆ ಬ್ಯಾಟ್ ಬೀಸಿದ ಬೇಬಿ ಎಬಿ
Dewald Brevis-AB de Villiers
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 17, 2022 | 6:37 PM

ಕ್ರಿಕೆಟ್​ ಅಂಗಳದ 360 ಡಿಗ್ರಿ ಖ್ಯಾತಿ ಎಬಿ ಡಿವಿಲಿಯರ್ಸ್ (AB de Villiers) ತಮ್ಮ ವಿಭಿನ್ನ ಹೊಡೆತಗಳಿಗೆ ಹೆಸರುವಾಸಿ. ಇದೀಗ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಎಬಿಡಿಯನ್ನು ಅನುಕರಿಸುತ್ತಾ ಮತ್ತೋರ್ವ ಆಟಗಾರ ಎಂಟ್ರಿ ಕೊಟ್ಟಿದ್ದಾನೆ. ಅದು ಕೂಡ ದಕ್ಷಿಣ ಆಫ್ರಿಕಾ ತಂಡದ ಜೂನಿಯರ್ ಕ್ರಿಕೆಟಿಗ ಎಂಬುದೇ ವಿಶೇಷ. ಥೇಟ್ ಎಬಿಡಿಯಂತೆ ಬ್ಯಾಟ್ ಬೀಸಿರುವ ಈತ ಇದೀಗ ಬೇಬಿ ಎಬಿ ಎಂದು ವೈರಲ್ ಆಗಿದ್ದಾನೆ. ಪ್ರಸ್ತುತ ನಡೆಯುತ್ತಿರುವ ಅಂಡರ್​ 19 ವಿಶ್ವಕಪ್‌ನಲ್ಲಿ ಆಡುತ್ತಿರುವ ಡೆವಾಲ್ಡ್ ಬ್ರೆವಿಸ್ (Dewald Brevis) ಹೀಗೆ ಎಬಿಡಿಯಂತೆ ಬ್ಯಾಟ್ ಬೀಸುತ್ತಿರುವ ಯುವ ಆಟಗಾರ.

ಟೀಮ್ ಇಂಡಿಯಾ ಅಂಡರ್ 19 ತಂಡದ ವಿರುದ್ದದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತಿರಬಹುದು. ಆದರೆ ಡೆವಾಲ್ಡ್ ಬ್ರೆವಿಸ್ ಎಬಿಡಿ ಶೈಲಿಯಲ್ಲಿ ಎಬಿಡಿ ರೀತಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದಿದ್ದಾನೆ. 3ನೇ ಕ್ರಮಾಂಕಕ್ಕೆ ಇಳಿದ ಡೆವಾಲ್ಡ್ ಬ್ರೆವಿಸ್ ಭಾರತದ ವಿರುದ್ಧ 99 ಎಸೆತಗಳಲ್ಲಿ 65 ರನ್ ಗಳಿಸಿದರು. 6 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಅವರ ಸ್ಟೇಟ್ ಡ್ರೈವ್‌ಗಳು, ರಿವರ್ಸ್ ಸ್ವೀಪ್‌ಗಳು ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್​ನಂತೆ ಇರುವುದು ವಿಶೇಷ.

ಅಷ್ಟೇ ಅಲ್ಲ, ಡಿವಿಲಿಯರ್ಸ್ ಅವರ ಜರ್ಸಿ ಸಂಖ್ಯೆ 17 ಅನ್ನೇ ಧರಿಸಿ ಡೆವಾಲ್ಡ್ ಬ್ರೆವಿಸ್ ಕಣಕ್ಕಿಳಿದಿದ್ದಾರೆ. ಇನ್ನು ಟೀಮ್ ಇಂಡಿಯಾ ವಿರುದ್ದ ಅರ್ಧಶತಕ ಪೂರೈಸುವುದರಿಂದ ತಂಡದ ಆಟಗಾರರು ಬೇಬಿ ಎಬಿ ಪೋಸ್ಟರ್‌ಗಳನ್ನು ತೋರಿಸುತ್ತಿರುವುದು ಕಂಡುಬಂತು. ಇದೀಗ ಬೇಬಿ ಎಬಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಎಬಿ ಡಿವಿಲಿಯರ್ಸ್​ ಅವರನ್ನೇ ಮತ್ತೊಮ್ಮೆ ಸೌತ್ ಆಫ್ಇಕಾ ಜೆರ್ಸಿಯಲ್ಲಿ ನೋಡಿದಂತೆ ಭಾಸವಾಗುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 232 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 187 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ರೆವಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾ ಪರ ಉತ್ತಮವಾಗಿ ಆಡಿರಲಿಲ್ಲ. ಪರಿಣಾಮ ಟೀಮ್ ಇಂಡಿಯಾ 45 ರನ್​ಗಳಿಂದ ಜಯ ಸಾಧಿಸಿತು.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(South Africa finds new in U19 star Dewald Brevis)

Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ