IND vs SA: ಎಲ್ಗರ್​ ಆಕರ್ಷಕ ಶತಕ: ಸೌತ್ ಆಫ್ರಿಕಾಗೆ ಮುನ್ನಡೆ

South Africa vs India, 1st Test: ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ (5) ಬೇಗನೆ ಔಟ್ ಮಾಡುವ ಮೂಲಕ ಸಿರಾಜ್ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ಮತ್ತೋರ್ವ ಆರಂಭಿಕ ಡೀನ್ ಎಲ್ಗರ್ ಮಾತ್ರ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದರು.

IND vs SA: ಎಲ್ಗರ್​ ಆಕರ್ಷಕ ಶತಕ: ಸೌತ್ ಆಫ್ರಿಕಾಗೆ ಮುನ್ನಡೆ
Dean Elgar
Follow us
| Updated By: ಝಾಹಿರ್ ಯೂಸುಫ್

Updated on: Dec 28, 2023 | 6:51 AM

ಸೆಂಚುರಿಯನ್​ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ (Team India) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲ ಇನಿಂಗ್ಸ್​ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

107 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಈ ಹಂತದಲ್ಲಿ ಕೆಎಲ್ ರಾಹುಲ್ ಆಸರೆಯಾಗಿ ನಿಂತರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಅತ್ಯುತ್ತಮ ಇನಿಂಗ್ಸ್​ ಆಡಿದರು.

ಕೆಳ ಕ್ರಮಾಂಕದ ಬ್ಯಾಟರ್​ಗಳ ಜೊತೆಗೂಡಿ ಇನಿಂಗ್ಸ್​ ಕಟ್ಟಿದ ರಾಹುಲ್ 137 ಎಸೆತಗಳಲ್ಲಿ 14 ಫೋರ್​ ಹಾಗೂ 4 ಸಿಕ್ಸ್​ನೊಂದಿಗೆ 101 ರನ್​ ಬಾರಿಸಿ ಔಟಾದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 245 ರನ್​ಗಳಿಸಿ ಆಲೌಟ್ ಆಯಿತು. ಸೌತ್ ಆಫ್ರಿಕಾ ಪರ ಕಗಿಸೊ ರಬಾಡ 5 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ 3 ವಿಕೆಟ್ ಕಬಳಿಸಿದರು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ (5) ಬೇಗನೆ ಔಟ್ ಮಾಡುವ ಮೂಲಕ ಸಿರಾಜ್ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ಮತ್ತೋರ್ವ ಆರಂಭಿಕ ಡೀನ್ ಎಲ್ಗರ್ ಮಾತ್ರ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಎಲ್ಗರ್ ಟೋನಿ ಝೋರ್ಝಿ (28) ಜೊತೆಗೂಡಿ 2ನೇ ವಿಕೆಟ್​ಗೆ 93 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಝೋರ್ಝಿಯನ್ನು ಔಟ್ ಮಾಡುವಲ್ಲಿ ಬುಮ್ರಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಕೀಗನ್ ಪೀಟರ್ಸನ್ (2) ಜಸ್​ಪ್ರೀತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಡೀನ್ ಎಲ್ಗರ್ ಆಕರ್ಷಕ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಎಲ್ಗರ್​ಗೆ ಉತ್ತಮ ಸಾಥ್ ನೀಡಿದ ಡೇವಿಡ್ ಬೆಂಡಿಂಗ್ಯಾಮ್ 56 ರನ್​ಗಳ ಕೊಡುಗೆ ನೀಡಿದರು.

ಅದರಂತೆ 2ನೇ ದಿನದಾಟದ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 256 ರನ್​ ಕಲೆಹಾಕಿತು. ಈ ಮೂಲಕ 11 ರನ್​ಗಳ ಮುನ್ನಡೆ ಸಾಧಿಸಿದೆ. 211 ಎಸೆತಗಳನ್ನು ಎದುರಿಸಿ 23 ಫೋರ್​ಗಳೊಂದಿಗೆ ಅಜೇಯ 140 ರನ್ ಬಾರಿಸಿರುವ ಡೀನ್ ಎಲ್ಗರ್ ಹಾಗೂ ಮಾರ್ಕೊ ಯಾನ್ಸೆನ್ (3) ಕ್ರೀಸ್​ನಲ್ಲಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಝೋರ್ಝಿ, ಟೆಂಬಾ ಬವುಮಾ (ನಾಯಕ), ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಝಿ, ಕಗಿಸೊ ರಬಾಡ, ನಾಂಡ್ರೆ ಬರ್ಗರ್.

ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!