ಸಿಕ್ಸ್ ಮೂಲಕ ತನ್ನ ಬ್ಯಾಟಿಂಗ್ ವೃತ್ತಿ ಜೀವನ ಕೊನೆಗೊಳಿಸಿದ ಸ್ಟುವರ್ಟ್ ಬ್ರಾಡ್: ವಿಡಿಯೋ ನೋಡಿ
ENG vs AUS, Ashes Test: ಬ್ರಾಡ್ ಮತ್ತು ಆ್ಯಂಡರ್ಸನ್ 10ನೇ ವಿಕೆಟ್ಗೆ 16 ರನ್ಗಳ ಜೊತೆಯಾಟ ಆಡಿದರು. ಈ ಮೂಲಕ ಇಂಗ್ಲೆಂಡ್ 395 ರನ್ ಕಲೆಹಾಕಿತು. ಆಸ್ಟ್ರೇಲಿಯಾಕ್ಕೆ 384 ರನ್ಗಳ ಟಾರ್ಗೆಟ್ ನೀಡಿತು. ಇಲ್ಲಿದೆ ನೋಡಿ ಸ್ಟುವರ್ಟ್ ಬ್ರಾಡ್ ಸಿಕ್ಸ್ ಸಿಡಿಸಿದ ವಿಡಿಯೋ.
ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಆಟಗಾರ ಸ್ಟುವರ್ಟ್ ಬ್ರಾಡ್ (Stuart Broad) ನಿವೃತ್ತಿಯ ಘಟ್ಟದಲ್ಲಿದ್ದಾರೆ. ಆ್ಯಶಸ್ 5ನೇ ಟೆಸ್ಟ್ನ (Ashes 2023 Test) ನಾಲ್ಕನೇ ದಿನ ಬ್ರಾಡ್ ತಮ್ಮ ವೃತ್ತಿ ಜೀವನದಲ್ಲಿ ಕೊನೆಯದಾಗಿ ಬ್ಯಾಟಿಂಗ್ ಮಾಡಲು ಬಂದರು. 81ನೇ ಓವರ್ನ ಮಿಚೆಲ್ ಸ್ಟಾರ್ಕ್ ಅವರ ಮೊದಲ ಐದು ಎಸೆತಗಳಲ್ಲಿ ಒಂದು ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಸ್ಟಾರ್ಕ್ ಅವರ ಕೊನೆಯ ಎಸೆತದಲ್ಲಿ ಬ್ರಾಡ್ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಬ್ರಾಡ್ ಸಿಕ್ಸ್ ಸಿಡಿಸಿದ್ದನ್ನು ಕಂಡು ನೆರೆದಿದ್ದ ಅಭಿಮಾನಿಗಳು ತಲೆಬಾಗಿದರು. ಆದರೆ, ಮುಂದಿನ ಓವರ್ನ ಮೊದಲ ಎಸೆತದಲ್ಲಿ ಜೇಮ್ಸ್ ಆ್ಯಂಡರ್ಸನ್ (James Anderson) ಔಟ್ ಆಗುವ ಮೂಲಕ ಇಂಗ್ಲೆಂಡ್ ಆಲೌಟ್ ಆಯಿತು. ಈ ಮೂಲಕ ಸಿಕ್ಸ್ ಸಿಡಿಸಿ ಬ್ರಾಡ್ ತಮ್ಮ ಬ್ಯಾಟಿಂಗ್ ವೃತ್ತಿ ಜೀವನವನ್ನು ಕೊನೆಗೊಳಿಸಿದ್ದಾರೆ.
ಬ್ರಾಡ್ ಮತ್ತು ಆ್ಯಂಡರ್ಸನ್ 10ನೇ ವಿಕೆಟ್ಗೆ 16 ರನ್ಗಳ ಜೊತೆಯಾಟ ಆಡಿದರು. ಈ ಮೂಲಕ ಇಂಗ್ಲೆಂಡ್ 395 ರನ್ ಕಲೆಹಾಕಿತು. ಆಸ್ಟ್ರೇಲಿಯಾಕ್ಕೆ 384 ರನ್ಗಳ ಟಾರ್ಗೆಟ್ ನೀಡಿತು. ಇಲ್ಲಿದೆ ನೋಡಿ ಸ್ಟುವರ್ಟ್ ಬ್ರಾಡ್ ಸಿಕ್ಸ್ ಸಿಡಿಸಿದ ವಿಡಿಯೋ.
Stuart Broad hit a six in the final ball he has faced in International cricket.
A total entertainer ?pic.twitter.com/wvudJ6YIHY
— Johns. (@CricCrazyJohns) July 30, 2023
T20 World Cup Qualifier: ಮೂರನೇ ಬಾರಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಚೀನಾ..!
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಎರಡು ವಿಕೆಟ್ಗಳೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಬ್ರಾಡ್ ತಮ್ಮದಾಗಿಸಿಕೊಂಡಿದ್ದಾರೆ. ಆಸೀಸ್ ವಿರುದ್ಧ ಇದುವರೆಗೆ 73 ಇನಿಂಗ್ಸ್ ಆಡಿರುವ ಸ್ಟುವರ್ಟ್ ಬ್ರಾಡ್ 151 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಒಂದೇ ತಂಡದ ವಿರುದ್ಧ ಟೆಸ್ಟ್ನಲ್ಲಿ 150 ಕ್ಕೂ ಅಧಿಕ ವಿಕೆಟ್ ಪಡೆದ ವಿಶ್ವದ 5ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮೂರನೇ ದಿನದಾಟದಲ್ಲಿ ಅಜೇಯರಾಗಿ ಮರಳಿದ ಬಳಿಕ ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ 37ರ ಹರೆಯದ ಸ್ಟುವರ್ಟ್ ಬ್ರಾಡ್, ‘ಅಂತಿಮ ಟೆಸ್ಟ್ ಮುಗಿಯುವ ಒಂದು ದಿನ ಮುಂಚಿತವಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ಬಗ್ಗೆ ತಮ್ಮ ನಾಯಕ ಸ್ಟೋಕ್ಸ್‌ಗೆ ತಿಳಿಸಿದ್ದೇನೆ. ತಮ್ಮ ತಂಡದೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದೇನೆ. ಆ್ಯಶಸ್‌ನಲ್ಲಿ ತನ್ನ ಕೊನೆಯ ಟೆಸ್ಟ್ ಆಡುವುದು ನನ್ನ ಕನಸ್ಸಾಗಿತ್ತು. ಹೀಗಾಗಿ ಆ್ಯಶಸ್ ಸರಣಿಯ ಕೊನೆಯ ಟೆಸ್ಟ್ನಲ್ಲಿ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದೇನೆ’ ಎಂದರು.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 135 ರನ್ ಗಳಿಸಿದೆ. ಡೇವಿಡ್ ವಾರ್ನರ್ 58 ರನ್ ಬಾರಿಸಿ ಹಾಗೂ ಉಸ್ಮಾನ್ ಖ್ವಾಜಾ 69 ರನ್ ಗಳಿಸಿ ಅಂತಿಮ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಾಂಗರೂ ಪಡೆಯ ಗೆಲುವಿಗೆ ಇನ್ನೂ 249 ರನ್ಗಳ ಅವಶ್ಯಕತೆಯಿದೆ. ಇತ್ತ ಇಂಗ್ಲೆಂಡ್ ಗೆಲ್ಲಲು ಎದುರಾಳಿಯ 10 ವಿಕೆಟ್ ಕೀಳಬೇಕಿದೆ. ಈಗಾಗಲೇ ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ಆಸೀಸ್ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:39 am, Mon, 31 July 23