Suryakumar Yadav: ಬೌಲರ್ಗಳೇ ಎಚ್ಚರ! ಹೊಸ ಶಾಟ್ ಕಲಿಯುತ್ತಿದ್ದಾರೆ ಸೂರ್ಯ; ಬೇಬಿ ‘ಎಬಿ’ ಇದಕ್ಕೆ ಗುರು
Suryakumar Yadav: ಕ್ರಿಕೆಟ್ ಪುಸ್ತಕದಲ್ಲಿರುವ ಎಲ್ಲಾ ಶಾಟ್ಗಳನ್ನು ಕರಗತ ಮಾಡಿಕೊಂಡಿರುವ ಸೂರ್ಯ ಇದೀಗ ಹೊಸ ಶಾಟ್ ಕಲಿಯುವ ಇಂಗಿತ ವ್ಯಕ್ತಪಡಿಸಿದ್ದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ತನ್ನ ಅಸಂಪ್ರದಾಯಿಕ ಬ್ಯಾಟಿಂಗ್ನಿಂದ ವಿಶ್ವ ಕ್ರಿಕೆಟ್ನಲ್ಲಿ ದಾಂಧಲೆ ಶುರು ಮಾಡಿರುವ ಟೀಂ ಇಂಡಿಯಾ ((Team India)) ಕ್ರಿಕೆಟರ್ ಸೂರ್ಯಕುಮಾರ್ ಯಾದವ್ (Suryakumar Yadav), ಪಂದ್ಯದಿಂದ ಪಂದ್ಯಕ್ಕೆ ವಿಭಿನ್ನ ಶೈಲಿಯ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ದುನಿಯಾದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಮಿ. 360 ಟಿ20 ಕ್ರಿಕೆಟ್ನ ವೇಗದ ಶತಕ ಸಿಡಿಸಿ ದಾಖಲೆ ಬರೆದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಶತಕ ಸಿಡಿಸಿದಕ್ಕಿಂತಲೂ ಅವರು ಆಡಿದ ಭಿನ್ನ ವಿಭಿನ್ನ ಶಾಟ್ಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುಂತೆ ಮಾಡಿತು. ಬ್ಯಾಟಿಂಗ್ ಮಾಡುವಾಗ ಮೈದಾನದ ಅಷ್ಟೂ ದಿಕ್ಕುಗಳಿಗೂ ಬಾಲಿನ ದರ್ಶನ ಮಾಡಿಸುವ ಸಾಮಥ್ಯ್ರ ಹೊಂದಿರುವ ಸೂರ್ಯ, ಕ್ರಿಕೆಟ್ ಪುಸ್ತಕದ ಎಲ್ಲ ಶಾಟ್ಗಳನ್ನು ಅರೆದು ಕುಡಿದಿದ್ದಾನೆ ಎಂಬುದು ಪರಿಣಿತರ ಮಾತು. ಆದರೆ ಸೂರ್ಯನಿಗೆ ಮಾತ್ರ ಅದೊಂದು ಶಾಟ್ ಆಡುವುದನ್ನು ಕಲಿಯಬೇಕೆಂಬ ಆಸೆ ಹುಟ್ಟಿಕೊಂಡಿದ್ದು, ಈ ಶಾಟ್ ಆಡುವ 19 ವರ್ಷದ ಯುವ ಬ್ಯಾಟ್ಸ್‌ಮನ್ ಮುಂದೆ ತನ್ನ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಸೂರ್ಯನ ಅಸಂಪ್ರದಾಯಿಕ ಬ್ಯಾಟಿಂಗ್
ಮಾರ್ಚ್ 2021 ರಲ್ಲಿ ಆಂಗ್ಲ ವೇಗಿ ಜೋಫ್ರಾ ಆರ್ಚರ್ ಬೌನ್ಸರ್ ಎಸೆತವನ್ನು ಗಾಳಿಯಲ್ಲಿ ಒಂದು ಕಾಲನ್ನು ಮೇಲಕ್ಕೆತ್ತಿ, ಫೈನ್ ಲೆಗ್‌ನ ಹಿಂದೆ ಸಿಕ್ಸರ್‌ಗೆ ಕಳುಹಿಸಿದ್ದ ಸೂರ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಇದಾದ ಕೆಲವೇ ತಿಂಗಳುಗಳ ನಂತರ ಅದೇ ಇಂಗ್ಲೆಂಡ್ ಎದುರು ಗುಡ್ ಲೆಂಗ್ತ್ ಚೆಂಡನ್ನು ತನ್ನ ಮೊಣಕಾಲನ್ನು ನೆಲಕ್ಕೂರಿ ಎಕ್ಸ್ ಟ್ರಾ ಕವರ್ನಲ್ಲಿ ಸಿಕ್ಸರ್‌ಗಟ್ಟಿ ತನ್ನ ಅಸಂಪ್ರದಾಯಿಕ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶನ ಮಾಡಿದ್ದರು. ನಂತರ ಆಸ್ಟ್ರೇಲಿಯಾ ನೆಲದಲ್ಲಿ ಜಿಂಬಾಬ್ವೆಯ ಬೌಲರ್ ಎಸೆದ ಆಫ್ ಸ್ಟಂಪ್‌ನ ಹೊರಗಿನ ಯಾರ್ಕರ್ ಲೆಂಗ್ತ್ ಬಾಲ್ ಅನ್ನು ಸ್ಕೂಪ್ ಮಾಡಿ ಡೀಪ್ ಫೈನ್ ಲೆಗ್‌ನಲ್ಲಿ ಸಿಕ್ಸರ್ ಹೊಡೆದಿದ್ದ ಸೂರ್ಯನ ಬ್ಯಾಟಿಂಗ್ಗೆ ಎಲ್ಲರ ಚಪ್ಪಾಳೆ ಬಿದ್ದಿತ್ತು. ಇದೀಗ ರಾಜ್‌ಕೋಟ್‌ನಲ್ಲಿ ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದ ಶ್ರೀಲಂಕಾ ಬೌಲರ್‌ನ ಹೈ ಫುಲ್ ಟಾಸ್ ಬಾಲ್ ಅನ್ನು ಸಿಕ್ಸರ್‌ಗೆ ಕಳುಹಿಸುವಲ್ಲಿ ಸೂರ್ಯ ಯಶಸ್ವಿಯಾಗಿದ್ದರು. ಹೀಗೆ ಕ್ರಿಕೆಟ್ ಪುಸ್ತಕದಲ್ಲಿರುವ ಎಲ್ಲಾ ಶಾಟ್ಗಳನ್ನು ಕರಗತ ಮಾಡಿಕೊಂಡಿರುವ ಸೂರ್ಯ ಇದೀಗ ಹೊಸ ಶಾಟ್ ಕಲಿಯುವ ಇಂಗಿತ ವ್ಯಕ್ತಪಡಿಸಿದ್ದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Paltan ready to go – ????????? ???????? ? ??
सूर्या दादा & ?? are looking forward to an exciting IPL 2023! ??
?️ Enjoy the full candid chat ? https://t.co/qIpl10lLxC#OneFamily #DilKholKe #MumbaiIndians @BrevisDewald @surya_14kumar MI TV pic.twitter.com/FScFHk9SYg
— Mumbai Indians (@mipaltan) January 7, 2023
‘ನೋ ಲುಕ್ ಶಾಟ್’ ಶಾಟ್ ಕಲಿಯಬೇಕೆಂದ ಸೂರ್ಯ
ಐಪಿಎಲ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್, ದಕ್ಷಿಣ ಆಫ್ರಿಕಾದ ಬೇಬಿ ‘ಎಬಿ’ ಎಂದೇ ಖ್ಯಾತರಾಗಿರುವ 19 ವರ್ಷದ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಜೊತೆ ಸಂವಾದ ನಡೆಸಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದ ಈ ಯುವ ಬ್ಯಾಟ್ಸ್‌ಮನ್‌ನ ಪವರ್-ಹಿಟ್ಟಿಂಗ್ಗೆ ಮನಸೋತಿರುವ ಸೂರ್ಯ, ನಾನು ಕೆಲವೊಮ್ಮೆ ನಿಮ್ಮನ್ನು (ಬ್ರೆವಿಸ್) ನಕಲಿಸಲು ಪ್ರಯತ್ನಿಸುತ್ತಿದ್ದೇನೆ. ನೀವು ನೋ-ಲುಕ್ ಶಾಟ್ ಹಾಗೂ ನೋ-ಲುಕ್ ಸಿಕ್ಸರ್‌ಗಳನ್ನು ಹೇಗೆ ಹೊಡೆಯುತ್ತೀರಿ? ನಾನು ನಿಮ್ಮಿಂದ ಈ ರೀತಿಯ ಶಾಟ್ ಆಡುವುದನ್ನು ಕಲಿಯಲು ಬಯಸುತ್ತೇನೆ ಎಂದಿದ್ದಾರೆ.
ಇನ್ನು ಸೂರ್ಯನ ಈ ಮಾತುಗಳಿಂದ ಸಂತಸಗೊಂಡಿರುವ ಬ್ರೆವಿಸ್, ಇದು ನನಗೆ ಗೌರವವಾಗಿದೆ. ಆದರೆ ನಿಮ್ಮಿಂದ ಸಾಕಷ್ಟು ಹೊಡೆತಗಳನ್ನು ಕಲಿಯಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ. ಈ ಇಬ್ಬರು ಆಟಗಾರರು ಐಪಿಎಲ್ನಲ್ಲಿ ಮುಂಬೈ ಪರ ಆಡುವುದರಿಂದ ಸೂರ್ಯನಿಗೆ ಈ ಶಾಟ್ ಕಲಿಯಲು ಹೆಚ್ಚು ಸಮಯ ಬೇಕಿಲ್ಲ ಎಂಬುದು ಅನುಭವಿಗಳ ಮಾತಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Sun, 8 January 23