AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakib Al Hasan: ಮತ್ತೊಮ್ಮೆ ಅಂಪೈರ್ ಜೊತೆ ಜಗಳಕ್ಕಿಳಿದ ಶಕೀಬ್ ಅಲ್ ಹಸನ್: ವಿಡಿಯೋ ವೈರಲ್

Shakib Al Hasan: ಈ ಹಿಂದೆ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಶಕೀಬ್ ಅಲ್ ಹಸನ್ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು.

Shakib Al Hasan: ಮತ್ತೊಮ್ಮೆ ಅಂಪೈರ್ ಜೊತೆ ಜಗಳಕ್ಕಿಳಿದ ಶಕೀಬ್ ಅಲ್ ಹಸನ್: ವಿಡಿಯೋ ವೈರಲ್
Shakib Al Hasan Fights with umpire
TV9 Web
| Updated By: ಝಾಹಿರ್ ಯೂಸುಫ್|

Updated on: Jan 08, 2023 | 4:30 PM

Share

ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮೈದಾನದಲ್ಲಿನ ತಮ್ಮ ಕೋಪತಾಪಗಳಿಂದೇ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಇದಕ್ಕೆ ಹೊಸ ಸೇರ್ಪಡೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​​ನ ಅಂಪೈರ್ ಜೊತೆಗಿನ ಜಗಳ. ಬಿಪಿಎಲ್​ನ ಮೂರನೇ ಪಂದ್ಯದಲ್ಲಿ ಫಾರ್ಚೂನ್ ಬಾರಿಶಾಲ್ ಹಾಗೂ ಸಿಲ್ಹೆಟ್ ಸ್ಟ್ರೈಕರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾರಿಶಾಲ್ ಪರ ಶಕೀಬ್ ಅಲ್ ಹಸನ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಮೊದಲ ಇನಿಂಗ್ಸ್​ನ 16ನೇ ಓವರ್​ನಲ್ಲಿ ಸ್ಟ್ರೈಕರ್ಸ್ ವೇಗಿ ರೆಜೂರ್ ರೆಹಮಾನ್ ನಿಧಾನಗತಿಯ ಬೌನ್ಸರ್ ಎಸೆದರು. ಅತ್ತ ಬೌನ್ಸರ್ ಸ್ಟ್ರೈಕ್​ನಲ್ಲಿದ್ದ ಶಕೀಬ್ ಅವರ ತಲೆಯ ಮೇಲಿಂದ ಹಾದು ಹೋಗಿತ್ತು. ಚೆಂಡು ಎತ್ತರದಿಂದ ಸಾಗಿದ್ದ ಪರಿಣಾಮ ಶಾಟ್ ಹೊಡೆಯಲು ಹಿಂಜರಿದರು. ಇದರಿಂದ ವೈಡ್ ಸಿಗಲಿದೆ ಎಂದು ಶಕೀಬ್ ಅಲ್ ಹಸನ್ ನಿರೀಕ್ಷಿಸಿದ್ದರು.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ

ಆದರೆ ತಲೆಯ ಮೇಲಿಂದ ಚೆಂಡು ಹೋಗಿದ್ದರೂ ಅಂಪೈರ್ ವೈಡ್ ನೀಡಲಿಲ್ಲ. ಬದಲಾಗಿ ಫಸ್ಟ್ ಬೌನ್ಸರ್ ಎಂದು ಎಚ್ಚರಿಕೆ ನೀಡಿದರು. ಇತ್ತ ವೈಡ್ ಎಂದು ಪರಿಗಣಿಸಿದ ಕಾರಣ ಶಕೀಬ್ ಕೋಪಗೊಂಡರು. ಅಂಪೈರ್ ತೀರ್ಮಾನದ ವಿರುದ್ಧ ಮೈದಾನದಲ್ಲೇ ಕಿರುಚಾಡುತ್ತಾ ಆಕ್ರೋಶ ಹೊರಹಾಕಿದರು. ಅಲ್ಲದೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಅಂಪೈರ್ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿದರೆ, ಮತ್ತೆ ಕೆಲವರು ಶಕೀಬ್ ಅಲ್ ಹಸನ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಫಾರ್ಚೂನ್ ಬಾರಿಶಾಲ್ ತಂಡವು ಶಕೀಬ್ ಅಲ್ ಹಸನ್​ (67 ರನ್, 32 ಎಸೆತ) ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಸಿಲ್ಹೆಟ್ ಸ್ಟ್ರೈಕರ್ಸ್ ತಂಡವು 19 ಓವರ್​ಗಳಲ್ಲಿ 196 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ವಿಕೆಟ್ ಕಿತ್ತೆಸೆದಿದ್ದ ಶಕೀಬ್:

ಈ ಹಿಂದೆ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಶಕೀಬ್ ಅಲ್ ಹಸನ್ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಅದರಲ್ಲೂ ವಿಕೆಟ್​ಗಳನ್ನು ಕಿತ್ತೆಸೆಯುವ ಮೂಲಕ ಅಂಪೈರ್​ಗೆ ಭಯ ಹುಟ್ಟಿಸಿದ್ದರು. ಈ ಅನುವಚಿತ ವರ್ತನೆ ಶಕೀಬ್ ಅವರನ್ನು 4 ಪಂದ್ಯಗಳಿಂದ ನಿಷೇಧಿಸಲಾಗಿತ್ತು.

ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲೂ ಅಂಪೈರ್ ಜೊತೆ ಜಗಳಕ್ಕಿಳಿಯುವ ಮೂಲಕ ಶಕೀಬ್ ಸಖತ್ ಸುದ್ದಿಯಾಗಿದ್ದಾರೆ.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ